2
ಕೇರಳದ ಎರಡು ಮಕ್ಕಳಲ್ಲಿ ‘ಅತಿ-ಸಾಂಕ್ರಾಮಿಕ’ ಎನಿಸಿರುವ ನೊರೊವೈರಸ್‌ನ ಸೋಂಕು ಪತ್ತೆಯಾಗಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ದೃಢಪಡಿಸಿದೆ.
ನೊರೊವೈರಸ್ ಸೋಂಕು ಮಕ್ಕಳಲ್ಲಿ ಹರಡುತ್ತಿದೆ. ಕಲುಷಿತ ನೀರು ಮತ್ತು ಆಹಾರದ ಮೂಲಕ ವೈರಸ್ ಹರಡುವ ಸಾಧ್ಯತೆ ಇದೆ. ಸಾಮಾನ್ಯವಾಗಿ ವಾಂತಿ, ಬೇಧಿ(ಅತಿಸಾರ), ವಾಕರಿಕೆ ಮತ್ತು ಹೊಟ್ಟೆನೋವು, ಈ ಸೋಂಕಿನ ಪ್ರಮುಖ ಲಕ್ಷಣಗಳಾಗಿವೆ. ಇದರ ಜೊತೆಗೆ ತಲೆನೋವು, ಮೈ-ಕೈ ನೋವು ಹಾಗೂ ಜ್ವರ ಕಾಣಿಸಿಕೊಳ್ಳುವುದು ಸಾಧಾರಣ ಲಕ್ಷಣಗಳಾಗಿವೆ ಎಂದು ವೈದ್ಯರು ಹೇಳುತ್ತಾರೆ.
ಈ ವೈರಸ್ ಸೊಂಕು ಚಿಕ್ಕ ಮಕ್ಕಳು, ವೃದ್ಧರು ಮತ್ತು ಕೊಮೊರ್ಬಿಡಿಟಿ ಹೊಂದಿರುವ ಜನರಲ್ಲಿ ಗಂಭೀರವಾದ ಸಮಸ್ಯೆಯನ್ನು ಹುಟ್ಟು ಹಾಕುವ ಅಪಾಯವಿದೆ. ನೊರೊವೈರಸಸ್ ಸೋಂಕಿಗೆ ಒಳಗಾದ ಜನರೊಂದಿಗೆ ನಿಕಟ ಸಂಪರ್ಕದ ಮೂಲಕ ಅಥವಾ ಕಲುಷಿತ ಮೇಲ್ಮೈಗಳನ್ನು ಸ್ಪರ್ಶಿಸುವ ಮೂಲಕ ವೈರಸ್ ಸುಲಭವಾಗಿ ಹರಡುತ್ತದೆ.
