lottery winner: ಸ್ನೇಹಿತನಿಂದ 500 ರೂಪಾಯಿ ಸಾಲ ಪಡೆದು ಲಾಟರಿ ಟಿಕೆಟ್ ಖರೀದಿಸಿದ ಜೈಪುರದ ತರಕಾರಿ ಮಾರಾಟಗಾರ ಅಮಿತ್ ಸೆಹ್ರಾ ಅವರಿಗೆ 11 ಕೋಟಿ ರೂಪಾಯಿ ಮೊತ್ತದ ಪಂಜಾಬ್ ರಾಜ್ಯ ಲಾಟರಿ ಒಲಿದಿದೆ.
ದೀಪಾವಳಿ ಅಂಗವಾಗಿ ಈ ಲಾಟರಿಯನ್ನು ಆಯೋಜಿಸಲಾಗಿತ್ತು. ಅಮಿತ್ ಸೆಹ್ರಾ ಅವರು ಸ್ನೇಹಿತನಿಂದ 500 ರೂ. ಸಾಲ ಪಡೆದು ಈ ಲಾಟರಿ ಟಿಕೆಟ್ ಖರೀದಿಸಿದ್ದಾರೆ. ಲಾಟರಿ ಆಯೋಜಿಸಿದ್ದ ಸಂಸ್ಥೆ ಅದೃಷ್ಟಶಾಲಿ ವಿಜೇತರ ಸಂಖ್ಯೆಗಳನ್ನು ಘೋಷಿಸಿದ ಕೆಲವು ದಿನಗಳ ನಂತರ, ಲಾಟರಿ ಹಣವನ್ನು ಪಡೆಯುವುದಕ್ಕಾಗಿ ಅಮಿತ್ ಸೆಹ್ರಾ ಮಂಗಳವಾರ ಚಂಡೀಗಢಕ್ಕೆ ತೆರಳಿದ್ದಾರೆ.
ಇನ್ನು ಲಾಟರಿ ಟಿಕೆಟ್ ಖರೀದಿಸಿ ನೀಡಿದ ಸ್ನೇಹಿತ ಮುಖೇಶ್‌ಗೆ ಕೃತಜ್ಞತೆಯ ಸಂಕೇತವಾಗಿ, ಅಮಿತ್ ಸೆಹ್ರಾ 1 ಲಕ್ಷ ರೂ.ಗಳನ್ನು ನೀಡುವುದಾಗಿ ವಾಗ್ದಾನ ಮಾಡಿದ್ದಾರೆ. ಈ ಲಾಟರಿ ಹಣದಿಂದ ತಮ್ಮ ಕುಟುಂಬಕ್ಕೆ ಯಾವುದೇ ಯೋಜನೆಗಳನ್ನು ರೂಪಿಸುವ ಮೊದಲು ತನ್ನ ಸ್ನೇಹಿತನ ಇಬ್ಬರು ಹೆಣ್ಣುಮಕ್ಕಳಿಗೆ ತಲಾ 50,000 ರೂ.ಗಳನ್ನು ಹಸ್ತಾಂತರಿಸುವ ಉದ್ದೇಶ ಹೊಂದಿದ್ದಾಗಿ ಹೇಳಿದ್ದಾರೆ. ಈ ಅದೃಷ್ಟಶಾಲಿ ಟಿಕೆಟ್‌ನ್ನು ಬಟಿಂಡಾದಲ್ಲಿರುವ ರತನ್ ಲಾಟರಿ ಟಿಕೆಟ್ ವಿತರಕರಿಂದ ಖರೀದಿಸಲಾಗಿದೆ.
