Home » Miracle : 5 ಮಕ್ಕಳಿಗೆ ಜನ್ಮ ನೀಡಿದ ಏಳು ಮಕ್ಕಳ ತಾಯಿ!

Miracle : 5 ಮಕ್ಕಳಿಗೆ ಜನ್ಮ ನೀಡಿದ ಏಳು ಮಕ್ಕಳ ತಾಯಿ!

by Mallika
0 comments
babies baby

ಹೆಣ್ಣಿಗೆ ತಾಯ್ತನ ಒಂದು ವರದಾನ ಎಂದೇ ಹೇಳಬಹುದು. ನವಮಾಸ ನೋವು ತಿಂದು ಜೀವವೊಂದನ್ನು ನಂತರ ಭೂಮಿಗೆ ತರುವುದು ಆ ಮಗುವಿನ ಮುಖ ನೋಡಿದ ತಕ್ಷಣವೇ ತಾನು ಇಷ್ಟು ದಿನ ಕಂಡ ನೋವನ್ನೆಲ್ಲ ಮರೆತು ಮತ್ತೆ ಖುಷಿಯಿಂದ ನಲಿಯುವುದು ಇದನ್ನೇ ಅಲ್ಲವೇ ತಾಯ್ತನದ ಸುಖ ಎನ್ನುವುದು. ಅಂತಹ ತಾಯಿಯೋರ್ವಳೀಗ ಬರೋಬ್ಬರಿ ಐದು ಮಕ್ಕಳಿಗೆ ಏಕಕಾಲದಲ್ಲಿ ಜನ್ಮ ನೀಡಿದ ಘಟನೆಯಿಂದ ನಡೆದಿದೆ.

ಎಲ್ಲರಿಗೂ ತಿಳಿದಿರುವ ಹಾಗೆ ಸಾಮಾನ್ಯವಾಗ ಏರ್ವ ಹೆಣ್ಣು ಅವಳಿ ಮಕ್ಕಳಿಗೆ, ತ್ರಿವಳಿ ಮಕ್ಕಳಿಗೆ ಜನ್ಮ ನೀಡುವ ವಿಷಯವನ್ನು ನೀವು ಕೇಳಿದ್ದೀರಿ. ಹಾಗೆನೇ ಒಂಭತ್ತು ಮಕ್ಕಳಿಗೆ ಜನ್ಮ ನೀಡಿದ ಸುದ್ದಿ ಕೂಡಾ ಕೇಳಿರಬಹುದು.

ಆದರೆ ಇಲ್ಲೊಂದು ಘಟನೆಯಲ್ಲಿ ಓರ್ವ ತಾಯಿ ಐದು ಮಕ್ಕಳಿಗೆ ಜನ್ಮ ನೀಡಿದ ಘಟನೆಯೊಂದು ಪೋಲೆಂಡ್‌ನಲ್ಲಿ ನಡೆದಿದೆ. ದಕ್ಷಿಣ ಪೋಲೆಂಡ್‌ನ ಕ್ರಾಕೋವ್‌ನ ಯೂನಿವರ್ಸಿಟಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಈ ಏಕಕಕಾಲದಲ್ಲಿ ಐದು ಮಕ್ಕಳನ್ನು ಹೆತ್ತ ತಾಯಿ ಈಗಾಗಲೇ ಏಳು ಮಕ್ಕಳ ತಾಯಿಯಾಗಿದ್ದಾಳೆ. ಈಕೆಯ ವಯಸ್ಸು 37ವರ್ಷ. ಡೊಮಿನಿಕಾ ಕ್ಲಾರ್ಕ್‌ ಎಂಬ ಮಹಿಳೆಯೇ ಈ ಐದು ಮಕ್ಕಳನ್ನು ಹೆತ್ತ ತಾಯಿ. ತನ್ನ ಎಂಟನೇ ಗರ್ಭದಲ್ಲಿ ಈಕೆ ಈಗ ಐದು ಮಕ್ಕಳನ್ನು ಪಡೆದು ತುಂಬು ಕುಟುಂಬ ಹೊಂದಿದ್ದಾಳೆ. ಇದೀಗ ಈಕೆ ಒಟ್ಟು 12ಮಕ್ಕಳ ತಾಯಿಯಾಗಿದ್ದಾಳೆ. ತಾನು ಎಂಟನೇ ಬಾರಿ ಗರ್ಭವತಿ ಆಗಬೇಕೆಂದು ಬಯಸಿದ ಈ ತಾಯಿಗೆ ದೇವರು ಒಂದದಲ್ಲ ಐದು ಮಕ್ಕಳನ್ನು ಕರುಣಿಸಿದ್ದಾನೆ.

ಈ ತಾಯಿ ತನ್ನ 28ನೇ ವಾರದಲ್ಲಿ ಸೀಸೇರಿಯನ್‌ ಮೂಲಕ ಏಕಕಾಲದಲ್ಲಿ ಕ್ರಾಕೋವ್‌ನ ಯೂನಿವರ್ಸಿಟಿ ಆಸ್ಪತ್ರೆಯಲ್ಲಿ ಮಗು ಹೆತ್ತಿದ್ದಾರೆ. ಅಂದ ಹಾಗೆ ಈ ಐದು ಮಕ್ಕಳಲ್ಲಿ ಎರಡು ಗಂಡು ಮತ್ತು ಮೂರು ಹೆಣ್ಣು ಮಗು ಜನಿಸಿದೆ ಎಂದು ವರದಿಯಾಗಿದೆ. ಈ ಪುಟ್ಟ ಕಂದಮ್ಮಗಳಿಗೆ ಈಗಾಗಲೇ ನಾಮಕರಣ ಕೂಡಾ ಮಾಡಲಾಗಿದೆ. ಕ್ರಮವಾಗಿ ಈ ಮಕ್ಕಳ ಹೆಸರುಗಳು ಅರಿಯಾನಾ ಡೈಸಿ, ಚಾರ್ಲ್ಸ್ ಪ್ಯಾಟ್ರಿಕ್, ಎಲಿಜಬೆತ್ ಮೇ, ಇವಾಂಜೆಲಿನ್ ರೋಸ್ ಮತ್ತು ಹೆನ್ರಿ ಜೇಮ್ಸ್ ಎಂಬ ಹೆಸರುಗಳನ್ನು ಇಡಲಾಗಿದೆ.

ಅವಧಿಗಿಂತ ಸ್ವಲ್ಪ ಮೊದಲೇ ಜನಿಸಿದ್ದರಿಂದ ಈ ಮಕ್ಕಳಿಗೆ ಉಸಿರಾಟದ ಸಮಸ್ಯೆ ಇದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಇದರ ಹೊರತಾಗಿ ಶಿಶುಗಳು ಆರೋಗ್ಯವಾಗಿದೆ ಎಂದು ವರದಿಯಾಗಿದೆ. ಎಂಟನೇ ಮಗುವಿನ ನಿರೀಕ್ಷೆಯಲ್ಲಿದ್ದ ಈ ದಂಪತಿಗೆ ದೇವರು ಹೆಚ್ಚಿನ ಆಶೀರ್ವಾದ ನೀಡಿ ಕಳುಹಿಸಿದ್ದಾರೆ, ಇದು ನಮ್ಮ ಅದೃಷ್ಟ ಎಂದು ಹೃದಯತುಂಬಿ ಮಾತನಾಡಿದ್ದಾರೆ ಎಂದು ವರದಿಯಾಗಿದೆ

You may also like

Leave a Comment