Home » ಹಲಸಿನ ಹಣ್ಣು ಕದಿಯಲು ಹೋಗಿ ಪೇಚಿಗೆ ಸಿಲುಕಿದ ವ್ಯಕ್ತಿ, ಕೆಳಕ್ಕೆ ಬಿದ್ದದ್ದು ಹಣ್ಣಲ್ಲ!

ಹಲಸಿನ ಹಣ್ಣು ಕದಿಯಲು ಹೋಗಿ ಪೇಚಿಗೆ ಸಿಲುಕಿದ ವ್ಯಕ್ತಿ, ಕೆಳಕ್ಕೆ ಬಿದ್ದದ್ದು ಹಣ್ಣಲ್ಲ!

0 comments

Bengaluru: ವ್ಯಕ್ತಿಯೊಬ್ಬ ಮಳೆಗಾಲದಲ್ಲಿ ಹಲಸಿನ ಹಣ್ಣು ಕದಿಯಲು ಹೋಗಿ ಪೇಚಿಗೆ ಸಿಲುಕಿದ ಪ್ರಕರಣ ನಡೆದಿದೆ.

ತಮಿಳುನಾಡು ಮೂಲದ ಶಕ್ತಿವೇಲು(37) ಎಂಬಾತ ಹಲಸಿನ ಹಣ್ಣು ಉದುರಿಸಲು ಹೋಗಿ ಪೇಚಿಗೆ ಸಿಲುಕಿದವನು. ಅಲ್ಲಿ ಹಲಸಿನ ಹಣ್ಣು ಉದುರುವ ಬದಲು ಮರದಿಂದ ಇನ್ನೇನೋ ಉದುರಿದೆ!

ಬೆಂಗಳೂರು ನಗರ ಪೊಲೀಸ್ ಕಚೇರಿ ಸಮೀಪದ ಅಲಿ ಅಸ್ಲ‌ರ್ ರಸ್ತೆಯಲ್ಲಿರುವ ಅಪಾರ್ಟ್‌ಮೆಂಟ್‌ನ ಆವರಣದಲ್ಲಿ ಗುರುವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಹಲಸಿನ ಹಣ್ಣು ಕದಿಯಲು ಶಕ್ತಿವೇಲು ಎಂಬಾತ ಸ್ಕೆಚ್ ಹಾಕಿದ್ದ. ಅದರಂತೆ, ಸುಮಾರು 20 ಅಡಿ ಇರುವ ಎತ್ತರದ ಮರವೇರಿದ್ದಾನೆ. ಈ ಸಂದರ್ಭ ಜಾರುವ ಕೊಂಬೆಗಳ ಕಾರಣ ಸರಿಯಾಗಿ ಗ್ರಿಪ್ ಸಿಗದೆ ಮರದ ರೆಂಬೆ ಹಿಡಿದು ನೇತಾಡಬೇಕಾಗಿ ಬಂದಿದೆ. ಈತನ ಅವಸ್ಥೆ ನೋಡಿ ಆತನ ಕಾಲ ಕೆಳಗೆ ಹತ್ತಾರು ಜನ ಸೇರಿದ್ದಾರೆ. ಜತೆಗೆ ಸ್ಥಳೀಯರು ವಿಧಾನಸೌಧ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಆತ ನೇತಾಡುತ್ತಿದ್ದ ಮರದ ಕೆಳಗೆ ಟಾರ್ಪಲ್ ಹಿಡಿದು ರಕ್ಷಿಸಲು ಯತ್ನಿಸಿದ್ದು, ಅಷ್ಟರಲ್ಲೇ ಆತನ ಕೈ ಗ್ರಿಪ್ ಸಡಿಲ ಆಗಿ ಆತ ಹಲಸಿನ ಹಣ್ಣು ಕೆಳಗೆ ಬಿದ್ದoತೆ ಧೊಪ್ಪನೆ ಬಿದ್ದಿದ್ದಾನೆ. ನಂತರ ಗಾಯಗೊಂಡ ಆತನನ್ನು ಆಸ್ಪತ್ರೆ ದಾಖಲಿಸಲಾಗಿದ್ದು ಆತನ ಬೆನ್ನಿಗೆ ಪೆಟ್ಟು ಬಿದ್ದಿದ್ದರೂ ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ;America-Iran: ಮಾತುಕತೆಗೆ ಸಿದ್ದವಿದ್ದ ಅಮೇರಿಕಾ – ಮುಂದಿನ ವಾರ ಅಮೆರಿಕ ಜತೆಗಿನ ಭೇಟಿಯನ್ನು ನಿರಾಕರಿಸಿದ ಇರಾನ್

You may also like