Aditi Tripathi: 10 ವರ್ಷದ ಭಾರತೀಯ ಮೂಲದ ಬಾಲಕಿ ಅದಿತಿ ತ್ರಿಪಾಠಿ ಎಂಬ ಬಾಲಕಿ ಒಂದು ದಿನವೂ ಶಾಲೆಗೆ ಚಕ್ಕರ್ ಹಾಕದೇ ಬರೋಬ್ಬರಿ 50 ದೇಶಗಳಿಗೆ ಟ್ರಿಪ್ ಹಾಕಿದ್ದಾಳೆ.
ವಾರ ಪೂರ್ತಿ ದುಡಿದು ಒಮ್ಮೆ ರಜೆ ಸಿಕ್ಕರೆ ಸಾಕು!! ಪ್ರವಾಸ ಇಲ್ಲವೇ ಸಣ್ಣ ಟ್ರಿಪ್ ಹೋಗುವುದು ಸಹಜ. ಅದೇ ರೀತಿ, ಪ್ರವಾಸ ಎಂದರೆ ಇಷ್ಟಪಡದವರೆ ವಿರಳ.ಆದರೆ, ಶಾಲೆಗೆ , ಆಫೀಸ್ ಗೆ ಹೋಗುವವರಿಗೆ ಬೇಕೆಂದಾಗ ಹೀಗೆ ಪ್ರವಾಸ ಹೋಗುವುದು ಸುಲಭವಲ್ಲ. ಮಕ್ಕಳಾದರೆ ಶಾಲೆಗೆ ರಜೆ(School Holiday)ಹಾಕಬೇಕಾಗುತ್ತದೆ ಅದೇ ರೀತಿ ಆಫೀಸಿನಲ್ಲಿ ಕೂಡ ಬೇಕೆಂದಾಗ ರಜೆ ಸಿಕ್ಕರೆ(Holiday )ಪರವಾಗಿಲ್ಲ. ಹೀಗಾಗಿ, ಫ್ಯಾಮಿಲಿ ಸಮೇತ ಜೊತೆಯಾಗಿ ಟೈಮ್ ಸ್ಪೆಂಡ್ ಮಾಡಬೇಕು ಅಂದುಕೊಂಡವರಿಗೆ ಪ್ರವಾಸ ಹೋಗುವ ಸಂದರ್ಭ ರಜೆ ಸಿಗದಿದ್ದರೆ ಆಗುವ ಸಂಕಷ್ಟ ಅಷ್ಟಿಷ್ಟಲ್ಲ.
ಆದರೆ, ಇಲ್ಲೊಬ್ಬಳು ವಿದ್ಯಾರ್ಥಿನಿ ಒಂದು ದಿನವೂ ಶಾಲೆ ಮಿಸ್ ಮಾಡದೇ ಶಾಲೆಗೆ ಹಾಜರಿ ಹಾಕಿ ಬರೋಬ್ಬರಿ 50 ದೇಶಗಳಿಗೆ ಭೇಟಿ ಕೊಟ್ಟಿದ್ದಾಳೆ. ಅರೇ, ಇದು ಹೇಗಪ್ಪಾ ಎಂದು ನೀವು ಯೋಚಿಸುತ್ತಿರಬಹುದು. 10 ವರ್ಷದ ಭಾರತೀಯ ಮೂಲದವಳಾದ ಬಾಲಕಿ ಅದಿತಿ ತ್ರಿಪಾಠಿ (10 year old Indian-origin girl Aditi Tripathi)ಎಂಬಾಕೆ ಒಂದು ದಿನವೂ ಸ್ಕೂಲ್ ಮಿಸ್ ಮಾಡಿಕೊಳ್ಳದೆ, ತನ್ನ ಪ್ರಯಾಣದ ಪಟ್ಟಿಯಲ್ಲಿರುವ 50 ದೇಶಗಳನ್ನು ಸುತ್ತಿದ್ದು, ಅಂದರೆ, ಇಲ್ಲಿಯವರೆಗೆ ಅದಿತಿ ನಾರ್ವೆ, ನೆದರ್ಲ್ಯಾಂಡ್ಸ್ ಮತ್ತು ಮೊನಾಕೊ ಸೇರಿದಂತೆ ಯುರೋಪ್’ನ ಹೆಚ್ಚಿನ ಭಾಗಗಳು, ನೇಪಾಳ, ಸಿಂಗಾಪುರ್ ಮತ್ತು ಥೈಲ್ಯಾಂಡ್ ದೇಶಗಳಿಗೆ ಭೇಟಿ ನೀಡಿದ್ದಾಳಂತೆ. ಇದು ಹೇಗೆ ಸಾಧ್ಯ ಅನ್ನೋರಿಗೆ ಉತ್ತರ ಇಲ್ಲಿದೆ ನೋಡಿ!
ಯಾಹೂ ಲೈಫ್ ಯುಕೆ ವರದಿಯ ಅನುಸಾರ, ತ್ರಿಪಾಠಿ ಕುಟುಂಬವು ತಮ್ಮ ಮಗಳು ಅದಿತಿಗೆ ಜಗತ್ತಿನಲ್ಲಿರುವ ವಿವಿಧ ಸಂಸ್ಕೃತಿಗಳ ಬಗ್ಗೆ ಅದೇ ರೀತಿ, ಆಹಾರ ಪದ್ಧತಿ, ಜನರ ಜೀವನ ಶೈಲಿ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಈ ರೀತಿ ಪ್ರವಾಸ ಹೋಗುತ್ತಾರಂತೆ. ಅದಿತಿ ತನ್ನ ಪೋಷಕರಾದ ದೀಪಕ್ ಮತ್ತು ಅವಿಲಾಶ ಜೊತೆ ದಕ್ಷಿಣ ಲಂಡನ್’ನ ಗ್ರೀನ್’ವಿಚ್’ನಲ್ಲಿ ನೆಲೆಸಿದ್ದಾಳೆ. ಈ ದಂಪತಿಗಳು ವೃತ್ತಿಯಲ್ಲಿ ಅಕೌಂಟೆಂಟ್’ (Accountant)ಆಗಿದ್ದು, ವಾರ್ಷಿಕವಾಗಿ 20,000 ಪೌಂಡ್’ಗಳನ್ನು ಪ್ರಯಾಣ ಮಾಡುವ ಸಲುವಾಗಿ ಖರ್ಚು ಮಾಡುವ ಕುರಿತು ಹೇಳಿಕೊಂಡಿದ್ದಾರಂತೆ.
ತಾವು ಪ್ರವಾಸ (Tour )ಹೋಗುವ ಸಂದರ್ಭ ತಮ್ಮ ಬ್ಯಾಂಕ್ ಉದ್ಯೋಗದ ಜೊತೆಗೆ ಮಗಳ ವಿದ್ಯಾಭ್ಯಾಸದ ಭವಿಷ್ಯಕ್ಕೆ ಅಡಚಣೆ ಆಗದ ರೀತಿ ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಹೌದು !!ಬ್ಯಾಂಕ್ ರಜೆ ಮತ್ತು ಶಾಲೆಗೆ ರಜೆ ಇದ್ದಾಗ ಮಾತ್ರವೇ ಇವರು ಪ್ರವಾಸ ಕೈಗೊಳ್ಳಲು ಯೋಜನೆ ಹಾಕುತ್ತಾರೆ. ಈ ಜೋಡಿ, ಪ್ರಯಾಣ ಮಾಡುವ ಸಲುವಾಗಿ ಸುಮಾರು 20,000 ಪೌಂಡ್ ಅಂದರೆ ಭಾರತೀಯ ಕರೆನ್ಸಿ ಲೆಕ್ಕದಲ್ಲಿ ಹೇಳುವುದಾದರೆ ಪ್ರತಿ ವರ್ಷ ಪ್ರಯಾಣಕ್ಕಾಗಿ 21 ಲಕ್ಷ ರೂ. ಖರ್ಚು ಮಾಡುತ್ತಾರಂತೆ. ಏನೇ, ಹೇಳಿ, ಶಾಲೆಗೆ ಚಕ್ಕರ್ ಹೊಡೆಯದೆ ಮಕ್ಕಳಿಗೆ ಜಗತ್ತಿನ ಆಗು ಹೋಗುಗಳ ಬಗ್ಗೆ ಬಾಲ್ಯದಲ್ಲೇ ಹೇಳಿಕೊಡುವುದು ವಿಶೇಷ. ಇದರ ಜೊತೆಗೆ ಆಚರಣೆ, ಸಂಸ್ಕೃತಿ- ಜೀವನ ಶೈಲಿಯ ಕುರಿತು ಅರಿವು ಮೂಡಿಸಲು ಪೋಷಕರು ಮುಂದಾಗಿರುವುದು ಶ್ಲಾಘನೀಯ. ಅಷ್ಟೇ ಅಲ್ಲದೆ,
ಇದನ್ನೂ ಓದಿ: ಕಾಲೇಜು ವಿದ್ಯಾರ್ಥಿಗಳೇ , ವಿದ್ಯಾರ್ಥಿವೇತನ ಪಡೀಬೇಕಾ? ಇಲ್ಲಿದೆ ನೋಡಿ ಅಂಥ 3 ಅವಕಾಶ
