Home » Vishnu Rekha : ವಿಷ್ಣು ರೇಖೆ ನಿಮ್ಮ ಕೈಯಲ್ಲಿದ್ದರೆ ನೀವು ಅಪಾರ ಸಂಪತ್ತಿನ ಒಡೆಯರಾಗುತ್ತೀರಾ !! ಹಾಗಾದ್ರೆ ಅಂಗೈಯಲ್ಲಿ ವಿಷ್ಣು ರೇಖೆ ಎಲ್ಲಿರುತ್ತದೆ?

Vishnu Rekha : ವಿಷ್ಣು ರೇಖೆ ನಿಮ್ಮ ಕೈಯಲ್ಲಿದ್ದರೆ ನೀವು ಅಪಾರ ಸಂಪತ್ತಿನ ಒಡೆಯರಾಗುತ್ತೀರಾ !! ಹಾಗಾದ್ರೆ ಅಂಗೈಯಲ್ಲಿ ವಿಷ್ಣು ರೇಖೆ ಎಲ್ಲಿರುತ್ತದೆ?

0 comments
Vishnu Rekha

Vishnu Rekha : ನಮ್ಮ ಅಂಗೈಯಲ್ಲಿ ಹಲವು ರೀತಿಯ ಗೆರೆಗಳು ಮತ್ತು ಗುರುತುಗಳಿವೆ. ಕೆಲವು ಗುರುತುಗಳು ಗುಪ್ತ ಅರ್ಥವನ್ನು ಹೊಂದಿದ್ದರೆ, ಕೆಲವು ಯಾವುದೇ ಅರ್ಥವಿಲ್ಲದ ಸಾಲುಗಳು ಮತ್ತು ಗುರುತುಗಳು ಇವೆ. ಹಸ್ತಸಾಮುದ್ರಿಕ (Palmistry) ತಜ್ಞರು ನಿಮ್ಮ ಅಂಗೈಯಲ್ಲಿನ ಗುರುತುಗಳು ಮತ್ತು ಚಿಹ್ನೆಗಳ ರಹಸ್ಯಗಳನ್ನು ಬಹಿರಂಗಪಡಿಸುತ್ತಾರೆ. ನಿಮ್ಮ ಕೈಯಲ್ಲಿ ವಿಷ್ಣು ರೇಖೆ (Vishnu Rekha) ಇದ್ದರೆ ಈ ಮಾಹಿತಿ ಓದಿ.

ಜ್ಯೋತಿಷ್ಯದಲ್ಲಿ (Astrology) ಹಸ್ತಸಾಮುದ್ರಿಕೆಗೆ (Palmistry) ವಿಶೇಷ ಪ್ರಾಮುಖ್ಯತೆ ಇದೆ. ಜ್ಯೋತಿಷ್ಯ ನಂಬಿಕೆಯು ವ್ಯಕ್ತಿಯ ಕೈಯಲ್ಲಿರುವ ರೇಖೆಗಳು (lines in hand) ವ್ಯಕ್ತಿಯ ಭವಿಷ್ಯದ ಬಗ್ಗೆ ಬಹಳಷ್ಟು ಹೇಳುತ್ತದೆ ಎನ್ನಲಾಗಿದೆ. ಅದರ ಪ್ರಕಾರ, ಈ ಕೈಯಲ್ಲಿನ ರೇಖೆಗಳನ್ನು ನೋಡಿದರೆ ವ್ಯಕ್ತಿಯ ಭವಿಷ್ಯದ ಬಗ್ಗೆ ಬಹಳಷ್ಟು ತಿಳಿಯಬಹುದು. ಕೈಗಳ ಮೇಲಿನ ಈ ಸಮತಲವಾದ ಓರೆ ಗೆರೆಗಳು ವ್ಯಕ್ತಿಯ ಸಂತೋಷ ಮತ್ತು ದುಃಖವನ್ನು ಸಹ ತಿಳಿಸುತ್ತದೆ. ಇದರಲ್ಲಿ ಒಂದು ವಿಷ್ಣು ರೇಖಾ ಕೂಡ.

ವಿಷ್ಣು ರೇಖಾ ನಿಮ್ಮ ಕೈಯಲ್ಲಿದ್ದರೆ, ವಿಷ್ಣುವಿನ ವಿಶೇಷ ಅನುಗ್ರಹ ಹೊಂದಿರುತ್ತಾರೆ. ಈ ರೇಖೆಯನ್ನು ಕೈಯಲ್ಲಿ ಹೊಂದಿರುವ ವ್ಯಕ್ತಿಯನ್ನು ತುಂಬಾ ಅದೃಷ್ಟಶಾಲಿ ಎಂದು ಪರಿಗಣಿಸಲಾಗುತ್ತದೆ. ವಿಷ್ಣು ರೇಖಾ ಇರುವ ಕಾರಣ ಜೀವನದಲ್ಲಿ ಯಾವುದೇ ರೀತಿಯ ಆರ್ಥಿಕ ಸಮಸ್ಯೆ ಎದುರಿಸಬೇಕಿಲ್ಲ. ಅವನ ಇಡೀ ಜೀವನವು ಸಂತೋಷದಿಂದ ತುಂಬಿರುತ್ತದೆ.

ಅಂಗೈಯಲ್ಲಿ ವಿಷ್ಣು ರೇಖೆ ಎಲ್ಲಿರುತ್ತದೆ?

ಅಂಗೈಯಲ್ಲಿರುವ ಹೃದಯ ರೇಖೆಯಿಂದ ಹೊರಬರುವ ರೇಖೆಯು ಗುರುಗ್ರಹದ ಪರ್ವತಕ್ಕೆ ಹೋದರೆ ಹೃದಯ ರೇಖೆಯನ್ನು 2 ಭಾಗಗಳಾಗಿ ವಿಂಗಡಿಸಲಾಗಿದೆ. ಅದನ್ನು ವಿಷ್ಣು ರೇಖೆ ಎಂದು ಕರೆಯಲಾಗುತ್ತದೆ. ಇದು ಇಂಗ್ಲಿಷ್ ಅಕ್ಷರ ‘V’ ಆಕಾರದಲ್ಲಿ ಕಾಣುತ್ತದೆ. ಈ ವಿಷ್ಣು ರೇಖೆಯು ಜನರ ಜೀವನದಲ್ಲಿ ತುಂಬಾ ಮಂಗಳಕರವಾಗಿದೆ. ವಿಷ್ಣು ದೇವರು ಈ ರೇಖೆ ಹೊಂದಿರುವ ಜನರನ್ನು ಯಾವಾಗಲೂ ಆಶೀರ್ವದಿಸುತ್ತಾನೆ ಮತ್ತು ಅದೃಷ್ಟವು ಪ್ರತಿ ಹಂತದಲ್ಲೂ ಇವರನ್ನು ಕೈ ಹಿಡಿಯುತ್ತ ಹೋಗುತ್ತದೆ. ಕೈಯಲ್ಲಿ ವಿಷ್ಣು ರೇಖೆ ಹೊಂದಿರುವ ಜನರು ಯಾವುದೇ ಒಂದು ಕೆಲಸವನ್ನು ಪ್ರಾರಂಭಿಸುವಾಗ ಅದರಲ್ಲಿ ಯಶಸ್ಸನ್ನೇ ಹೊಂದುತ್ತಾರೆ.

ಕೈಯಲ್ಲಿ ವಿಷ್ಣು ರೇಖೆ ಇದ್ದರೆ ಆ ವ್ಯಕ್ತಿ ಯಾವುದೇ ಕ್ಷೇತ್ರದಲ್ಲಿ ಹೋಗಿ ಯಾವುದೇ ಕೆಲಸಕ್ಕೆ ಕೈ ಹಾಕಿದರೂ, ಅದರಲ್ಲಿ ಅವನು ಮುನ್ನಡೆ ಸಾಧಿಸುತ್ತಾನೆ ಮತ್ತು ಯಶಸ್ಸನ್ನು ಸಾಧಿಸುತ್ತಾನೆ. ವಿಷ್ಣು ರೇಖೆಯನ್ನು ಹೊಂದಿರುವವರು ತುಂಬಾ ಧಾರ್ಮಿಕರು ಮತ್ತು ಉತ್ತಮವಾದ ವರ್ತನೆ ಹೊಂದಿರುತ್ತಾರೆ. ಸದಾ ಪ್ರಾಮಾಣಿಕತೆಯ ಹಾದಿಯಲ್ಲಿ ನಡೆಯುತ್ತಾರೆ. ಅವರು ಸಾಕಷ್ಟು ಗೌರವವನ್ನು ಗಿಟ್ಟಿಸಿಕೊಳ್ಳುತ್ತಾರೆ ಮತ್ತು ಜನಪ್ರಿಯತೆ ಪಡೆಯುತ್ತಾರೆ. ಅವರು ಜೀವನದಲ್ಲಿ ಅಂದುಕೊಳ್ಳದಷ್ಟು ಶ್ರೀಮಂತರಾಗುತ್ತಾರೆ ಎಂಬುದು ಸ್ಪಷ್ಟವಾಗಿದೆ.

ಇದನ್ನೂ ಓದಿ: Crop insurance: ರೈತರಿಗೆ ಮುಖ್ಯ ಮಾಹಿತಿ ; ಬೆಳೆ ವಿಮೆ ಪಡೆಯಲು ಕೃಷಿ ಇಲಾಖೆಯಿಂದ ಸೂಚನೆ !

You may also like

Leave a Comment