Post office best scheme: ಉಳಿತಾಯ ಎಂಬುದು ಮನುಷ್ಯನ ಅವಿಭಾಜ್ಯ ಅಂಗವೆಂದರೆ ತಪ್ಪಾಗಲಾರದು. ಯಾಕಂದ್ರೆ ಇಂದಿನ ದುಬಾರಿ ದುನಿಯಾದಲ್ಲಿ ಉಳಿತಾಯ ಎಂಬುದು ಇಲ್ಲದೆ ಹೋದರೆ ಬದುಕೇ ಕಷ್ಟ ಎನ್ನುವ ಮಟ್ಟಿಗೆ ತಲುಪಿದೆ. ಇಂತಹ ಹೂಡಿಕೆಗಾಗಿಗೆ ಹಲವು ಯೋಜನೆಗಳು ಕೂಡ ಜಾರಿಯಲ್ಲಿದೆ. ಹಣ ಸುರಕ್ಷಿತವಾಗಿರುವುದರ ಜೊತೆಗೆ ಕಡಿಮೆ ಹೂಡಿಕೆ ಮಾಡಿ ಹೆಚ್ಚಿನ ಆದಾಯ ಪಡೆಯುವಂತಹ ಹಲವು ಯೋಜನೆಗಳು ಪೋಸ್ಟ್ ಆಫೀಸ್ ನಲ್ಲಿದೆ.
ಇಂತಹ ಹೂಡಿಕೆಗಳಲ್ಲಿ ರೆಕ್ಯೂರಿಂಗ್ ಡೆಪಾಸಿಟ್ ಕೂಡಾ ಒಂದಾಗಿದೆ. ಬ್ಯಾಂಕ್‌ನ ಎಫ್‌ಡಿ, ಆರ್‌ಡಿಗಳಿಗಿಂತ ಭಿನ್ನವಾದ, ಅಧಿಕ ರಿಟರ್ನ್ ನೀಡುವ ಯೋಜನೆ ಇದಾಗಿದೆ. ಯಾವುದೆ ವ್ಯಕ್ತಿಯು ಸಣ್ಣ ಮೊತ್ತವನ್ನು ನಿರಂತರವಾಗಿ ಹೂಡಿಕೆ ಮಾಡಬೇಕು ಎಂದು ಬಯಸುವುದಾದರೆ ಅವರಿಗೆ ಈ ಅಂಚೆ ಕಚೇರಿ (Post office best scheme) ಆರ್‌ಡಿ ಯೋಜನೆ ಉತ್ತಮ ಆಯ್ಕೆಯಾಗಿದೆ. ಇದರಲ್ಲಿ ಹೂಡಿಕೆಯು ಸುರಕ್ಷಿತವಾಗಿರುವುದರ ಜೊತೆಗೆ ಉತ್ತಮ ಬಡ್ಡಿದರವು ಕೂಡಾ ಲಭ್ಯವಾಗುತ್ತದೆ. ಇತರೆ ಹೂಡಿಕೆಗಳಿಗೆ ಹೋಲಿಕೆ ಮಾಡಿದಾಗ ಈ ಹೂಡಿಕೆ ಕಡಿಮೆ ಅಪಾಯಕಾರಿಯಾಗಿದೆ.
ಈ ಯೋಜನೆಯಲ್ಲಿ 10 ವರ್ಷಕ್ಕಿಂತ ಮೇಲ್ಪಟ್ಟ ಯಾವುದೇ ವ್ಯಕ್ತಿಯಾದರೂ ಕೂಡಾ ಅಂಚೆ ಕಚೇರಿ ಆರ್‌ಡಿ ಖಾತೆಯನ್ನು ತೆರೆಯಬಹುದಾಗಿದೆ. ಹತ್ತು ತಿಂಗಳುಗಳ ಅವಧಿಗೆ ಮಾಸಿಕವಾಗಿ ಹೂಡಿಕೆಯನ್ನು ಡೆಪಾಸಿಟ್‌ದಾರರು ಮಾಡಬಹುದಾಗಿದೆ. ಈ ಯೋಜನೆಯಲ್ಲಿ ಕನಿಷ್ಠ ಮಾಸಿಕ ಡೆಪಾಸಿಟ್ 100 ರೂಪಾಯಿ ಆಗಿದೆ. ಈ ಅಂಚೆ ಕಚೇರಿ ಆರ್‌ಡಿ ಯೋಜನೆಗೆ ಶೇಕಡ 5.8ರಷ್ಟು ಬಡ್ಡಿದರವನ್ನು ನೀಡಲಾಗುತ್ತದೆ. ಕೇಂದ್ರ ಸರ್ಕಾರವು ತ್ರೈಮಾಸಿಕ ಆಧಾರದಲ್ಲಿ ಈ ಬಡ್ಡಿದರವನ್ನು ಪರಿಷ್ಕರಿಸುತ್ತದೆ.
ಹೂಡಿಕೆದಾರರು ಪ್ರತಿ ತಿಂಗಳು 10 ಸಾವಿರ ರೂಪಾಯಿ ಅಂದರೆ ಪ್ರತಿ ದಿನ 333 ರೂಪಾಯಿ ಹೂಡಿಕೆ ಮಾಡಿ ಅಂತಿಮವಾಗಿ ಮೆಚ್ಯೂರಿಟಿ ವೇಳೆ 16 ಲಕ್ಷ ರೂಪಾಯಿಗೂ ಅಧಿಕ ರಿಟರ್ನ್ ಪಡೆಯಬಹುದು. ಪ್ರಸ್ತುತ ಬಡ್ಡಿದರವು ಶೇಕಡ 5.8 ಆಗಿದ್ದು, ಬಡ್ಡಿದರದೊಂದಿಗೆ ಸೇರ್ಪಡೆಯಾಗಿ ನೀವು ಗರಿಷ್ಠ 16 ಲಕ್ಷ ರೂಪಾಯಿಯನ್ನು ರಿಟರ್ನ್ ಪಡೆಯಬಹುದಾಗಿದೆ. 16 ಲಕ್ಷ ರೂಪಾಯಿಯಲ್ಲಿ ನೀವು ಮಾಡಿರುವ ಹೂಡಿಕೆ 12 ಲಕ್ಷ ರೂಪಾಯಿ ಆಗಿರುತ್ತದೆ. ಉಳಿದಂತೆ ಬಡ್ಡಿದರವಾಗಿ ನಿಮಗೆ 4. 26 ಲಕ್ಷ ರೂಪಾಯಿ ಲಭ್ಯವಾಗಲಿದೆ. ಅಂದರೆ ಒಟ್ಟಾಗಿ 16. 26 ಲಕ್ಷ ರೂಪಾಯಿ ಮೆಚ್ಯೂರಿಟಿ ವೇಳೆ ಲಭ್ಯವಾಗಲಿದೆ.
ಯೋಜನೆಯಲ್ಲಿ ಹೂಡಿಕೆ ಮಾಡಲು ಆರಂಭ ಮಾಡಿದ ಐದು ವರ್ಷದಲ್ಲಿ ಅಥವಾ 60 ತಿಂಗಳ ಅವಧಿಯಲ್ಲಿ ಹೂಡಿಕೆಯು ಮೆಚ್ಯೂರಿಟಿ ಹೊಂದುತ್ತದೆ. ಈ ಖಾತೆಯನ್ನು ತೆರೆದ ಬಳಿಕ ಹೂಡಿಕೆದಾರರು ತಮ್ಮ ಈ ಅಂಚೆ ಕಚೇರಿ ಆರ್‌ಡಿ ಖಾತೆಯಿಂದ ಶೇಕಡ 50ರಷ್ಟು ಮೊತ್ತವನ್ನು ವಿತ್‌ಡ್ರಾ ಮಾಡುವ ಅವಕಾಶವಿದೆ. ಆದರೆ ಹೂಡಿಕೆಯನ್ನು ಆರಂಭ ಮಾಡಿದ ಒಂದು ವರ್ಷದ ಬಳಿಕ ಮಾತ್ರವೇ ಶೇಕಡ 50ರಷ್ಟು ಹೂಡಿಕೆಯನ್ನು ವಿತ್‌ಡ್ರಾ ಮಾಡುವ ಅವಕಾಶವಿರುವುದು.
ಇದನ್ನು ಓದಿ: Fake call and messages: ಮೇ.01 ರಿಂದ ನಿಮ್ಮ ಮೊಬೈಲ್ ಗೆ ಬರೋದೇ ಇಲ್ಲ ನಕಲಿ ಕರೆ ಹಾಗೂ ಮೆಸೇಜ್!
