Home » ತನ್ನ ಅಚ್ಚುಮೆಚ್ಚಿನ ‘ಕೋಳಿ’ಯ ಬರ್ತ್ ಡೇ ಮಾಡಿ ಸಂಭ್ರಮಿಸಿದ ಯುವಕ|

ತನ್ನ ಅಚ್ಚುಮೆಚ್ಚಿನ ‘ಕೋಳಿ’ಯ ಬರ್ತ್ ಡೇ ಮಾಡಿ ಸಂಭ್ರಮಿಸಿದ ಯುವಕ|

0 comments

ಪ್ರಾಣಿ ಪಕ್ಷಗಳೆಂದರೆ ಸಾಧಾರಣವಾಗಿ ಎಲ್ಲರಿಗೂ ಇಷ್ಟನೇ. ಆದರೆ ಇಲ್ಲೊಬ್ಬ ಯುವಕನಿಗೆ ಪ್ರಾಣಿ ಪಕ್ಷಿಗಳೆಂದರೆ ಬಹಳ ಪ್ರೀತಿ. ಸದಾ ಆತನಿಗೆ ಅವುಗಳ ಮೇಲೆ ಕಾಳಜಿ. ಈಗ ಈ ಯುವಕ ತನ್ನ ಕುಟುಂಬಸ್ಥರು, ನೆಚ್ಚಿನ ಸ್ನೇಹಿತರ ಮಧ್ಯೆ ತನ್ನ ನೆಚ್ಚಿನ ಕೋಳಿಯ ಬರ್ತ್ ಡೇ ಯನ್ನು ಭರ್ಜರಿಯಾಗಿ ಮಾಡಿದ್ದಾನೆ. ಈ ಕೋಳಿಯ ಹೆಸರೇ ‘ ಬ್ಲೇಡ್ ಹುಂಜ’.

ಯಾದಗಿರಿ ಜಿಲ್ಲೆಯ ಸುರಪುರ ಪಟ್ಟಣದ ಕೆಂಭಾವಿ ರಸ್ತೆ ಮಾರ್ಗದ ಕಾಣಿಕೇರಿ ಓಣಿಯಲ್ಲಿ ಹುಂಜದ ಬರ್ತ್ ಡೇ ಯನ್ನು ಅದ್ಧೂರಿಯಾಗಿ ಆಚರಣೆ ಮಾಡಿದ್ದಾನೆ ಈ ಯುವಕ.

ತನ್ನ ಅಚ್ಚುಮೆಚ್ಚಿನ ಹುಂಜದ ಬರ್ತ್ ಡೇ ಪಾರ್ಟಿ ಮಾಡಿ ಸಂಭ್ರಮಿಸಿದ ಈ ಯುವಕ‌ನ ಹೆಸರೇ ಹಣಮಂತ. ಸುರಪುರ ಪಟ್ಟಣದಲ್ಲಿ ಚಿಕ್ಕದಾದ ಪಾನ್ ಶಾಪ್ ಇಟ್ಟುಕೊಂಡು ಜೀವನ ನಡೆಸುವ ಈತ ಅದರ ಜೊತೆಗೆ ಕೋಳಿ, ಪಾರಿವಾಳ ಹಾಗೂ ಜಾನುವಾರು ಸಾಕಾಣಿಕೆ ಮಾಡುತ್ತಿದ್ದಾನೆ.

ಬ್ಲೇಡ್ ನಾಗ ಹೆಸರುಳ್ಳ ಹುಂಜದ ಮೂರನೇ ವರ್ಷದ ಬರ್ತ್ ಡೇ ಸಂಭ್ರಮವನ್ನು ಆಚರಣೆ ಮಾಡಿದ್ದಾನೆ ಹಣಮಂತ. ತನ್ನ ನೆಚ್ಚಿನ ಹುಂಜಕ್ಕೆ ಹೂ ಮಾಲೆ ಹಾಕಿ ಶಾಲು ಹೊದೆಸಿ ನಂತರ ಕೇಕ್ ಕತ್ತರಿಸಿ ವಿಶೇಷವಾಗಿ ಜನ್ಮದಿನ ಆಚರಣೆ ಮಾಡಲಾಗಿದೆ. ನಂತರ ಸ್ನೇಹಿತರಿಗೆ ಔತಣಕೂಟ ನೀಡಲಾಗಿದೆ.

ಹಣಮಂತನ ಹತ್ತಿರ ನಾಲ್ಕು ಹುಂಜಗಳಿವೆ. ಬ್ಲೇಡ್ ನಾಗ, ದಳವಾಯಿ, ಬೆಂಕಿದೊರಿ ಹಾಗೂ ಬೈರಾ. ಪ್ರತಿ ವರ್ಷ ಹುಂಜದ ಜನ್ಮದಿನವನ್ನು ಸರಳವಾಗಿ ಆಚರಣೆ ಮಾಡಲಾಗುತ್ತದೆ. ಆದರೆ ಈ ವರ್ಷ ಮಾತ್ರ ಅದ್ಧೂರಿಯಾಗಿ ಜನ್ಮದಿನಾಚರಣೆ ಮಾಡಲಾಗಿದೆ.

You may also like

Leave a Comment