Home » Vastu Tips: ಈ ದಿಕ್ಕಿನಲ್ಲಿ ಕ್ಯಾಲೆಂಡರ್‌ ಹಾಕಿ ಧನಾಗಮನವನ್ನು ಆನಂದಿಸಿ

Vastu Tips: ಈ ದಿಕ್ಕಿನಲ್ಲಿ ಕ್ಯಾಲೆಂಡರ್‌ ಹಾಕಿ ಧನಾಗಮನವನ್ನು ಆನಂದಿಸಿ

by Mallika
0 comments

ಹೊಸ ವರ್ಷದ ಆರಂಭವಾಗಿದೆ. 2023ರ ಹೊಸ್ತಿಲಲ್ಲಿ ಇರುವ ನಾವು ಅನೇಕ ಉದ್ದೇಶಗಳೊಂದಿಗೆ ಈ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಿದ್ದೇವೆ. ಹೊಸ ವರ್ಷವೆಂದರೆ ಹೊಸದಾದ ಕ್ಯಾಲೆಂಡರ್‌. ಇಲ್ಲಿ ನಾವು ಗಮನಿಸಬೇಕಾದ ಅಂಶವೆಂದರೆ ಕ್ಯಾಲೆಂಡರ್‌ ಎಲ್ಲಿ ಇಡುವುದೆಂದು. ವಾಸ್ತು ಪ್ರಕಾರ, ಕ್ಯಾಲೆಂಡರ್ ಅನ್ನು ಮನೆಯಲ್ಲಿ ಬೇಕಾಬಿಟ್ಟಿಯಾಗಿ ಎಲ್ಲೆಲ್ಲೋ ಸ್ಥಾಪಿಸುವುದರಿಂದ ವಾಸ್ತು ದೋಷ ಉಂಟಾಗಬಹುದು. ಇದರ ಬದಲಿಗೆ ಸರಿಯಾದ ದಿಕ್ಕಿನಲ್ಲಿ ಕ್ಯಾಲೆಂಡರ್ ಸ್ಥಾಪಿಸುವುದರಿಂದ ಅಂತಹ ಮನೆಯಲ್ಲಿ ಧನಾಗಮನವಾಗಿ ಸಂಪತ್ತಿಗೆ ಕೊರತೆ ಇರುವುದಿಲ್ಲ ಎಂದು ಹೇಳಲಾಗುತ್ತದೆ.

ವಾಸ್ತು ಶಾಸ್ತ್ರದ ಪ್ರಕಾರ, ಸರಿಯಾದ ದಿಕ್ಕಿನಲ್ಲಿ ಕ್ಯಾಲೆಂಡರ್ ಸ್ಥಾಪನೆಯಿಂದ ಅಂತಹ ಮನೆಯಲ್ಲಿ ಅದೃಷ್ಟ ತಾಂಡವಾಡುತ್ತದೆ. ಮಾತ್ರವಲ್ಲ, ಇದರಿಂದ ಹಲವು ರೀತಿಯಲ್ಲಿ ಪ್ರಯೋಜನವಾಗುತ್ತದೆ ಎಂದು ಹೇಳಲಾಗುತ್ತದೆ. ಹಾಗಿದ್ದರೆ ಹೊಸ ವರ್ಷದಲ್ಲಿ ಹೊಸ ಕ್ಯಾಲೆಂಡರ್ ಅನ್ನು ಮನೆಯ ಯಾವ ದಿಕ್ಕಿನಲ್ಲಿ ಸ್ಥಾಪಿಸುವುದು ಮಂಗಳಕರ ಎಂದು ತಿಳಿಯಿರಿ.

ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಉತ್ತರ ದಿಕ್ಕನ್ನು ಕುಬೇರನ ದಿಕ್ಕು ಎಂದು ಹೇಳಲಾಗುತ್ತದೆ. ನೀವು ಮನೆಯ ಏಳ್ಗೆಗಾಗಿ, ಕುಟುಂಬಸ್ಥರ ಸುಖ-ಸಂತೋಷ, ಸಮೃದ್ಧಿಗಾಗಿ, ಹಣಕಾಸಿನ ಪ್ರಯೋಜನಗಳನ್ನು ಪಡೆಯಲು ಬಯಸಿದರೆ ಉತ್ತರ ದಿಕ್ಕಿನಲ್ಲಿ ಕ್ಯಾಲೆಂಡರ್ ಸ್ಥಾಪಿಸುವುದು ಉತ್ತಮ ಎಂದು ಪರಿಗಣಿಸಲಾಗಿದೆ. ವಾಸ್ತುವಿನ ಪ್ರಕಾರ, ಮನೆಯ ಮುಖ್ಯ ದ್ವಾರದಲ್ಲಿ ಅಥವಾ ಮನೆಗೆ ಪ್ರವೇಶಿಸುತ್ತಿದ್ದಂತೆ ಕ್ಯಾಲೆಂಡರ್ ಕಾಣುವ ರೀತಿಯಲ್ಲಿ ಎಂದಿಗೂ ಅದನ್ನು ಸ್ಥಾಪಿಸಬಾರದು. ಅದರಲ್ಲಿ ನಿಮ್ಮ ಮನೆಯ ಮುಖ್ಯ ದ್ವಾರ ದಕ್ಷಿಣಾಭಿಮುಖವಾಗಿದ್ದರೆ ಈ ಬಗ್ಗೆ ವಿಶೇಷ ಕಾಳಜಿವಹಿಸಿ. ಏಕೆಂದರೆ, ವಾಸ್ತುವಿನ ಪ್ರಕಾರ, ಈ ದಿಕ್ಕಿನಲ್ಲಿ ಕ್ಯಾಲೆಂಡರ್ ಸ್ಥಾಪನೆಯಿಂದ ನಿಮ್ಮ ಪ್ರಗತಿಗೆ ಅಡ್ಡಿಯುಂಟಾಗಬಹುದು ಎಂದು ಹೇಳಲಾಗುತ್ತದೆ. ಇದಲ್ಲದೆ, ಕೆಲವರು ಬಾಗಿಲಿನ ಹಿಂದೆ ಕ್ಯಾಲೆಂಡರ್ ನೇತು ಹಾಕುವ ಅಭ್ಯಾಸ ಹೊಂದಿರುತ್ತಾರೆ. ಈ ತಪ್ಪನ್ನು ಎಂದಿಗೂ ಮಾಡಲೇಬಾರದು. ಏಕೆಂದರೆ, ಇದು ಮನೆಯ ಮುಖ್ಯಸ್ಥರ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸೂರ್ಯದೇವನನ್ನು ಗ್ರಹಗಳ ಅಧಿಪತಿ ಎಂದು ಪರಿಗಣಿಸಲಾಗಿದೆ. ಹಾಗಾಗಿ, ಸೂರ್ಯ ಉದಯಿಸುವ ದಿಕ್ಕು, ಪೂರ್ವ ದಿಕ್ಕಿನಲ್ಲಿ ಕ್ಯಾಲೆಂಡರ್ ಸ್ಥಾಪಿಸುವುದರಿಂದ ವೃತ್ತಿ ಜೀವನದಲ್ಲಿ ಉತ್ತಮ ಅವಕಾಶಗಳು ಪ್ರಾಪ್ತಿಯಾಗುತ್ತವೆ ಎಂದು ಹೇಳಲಾಗುತ್ತದೆ. ಇದಲ್ಲದೆ, ಈ ದಿಕ್ಕಿನಲ್ಲಿ ಕ್ಯಾಲೆಂಡರ್ ಸ್ಥಾಪನೆಯಿಂದ ಮಕ್ಕಳ ಪ್ರಗತಿಯ ಹಾದಿ ತೆರೆಯುತ್ತದೆ ಎಂಬ ನಂಬಿಕೆಯೂ ಇದೆ.

You may also like

Leave a Comment