Home » MP: ವೈದ್ಯ ಲೋಕಕ್ಕೆ ಸವಾಲು – 50 ವರ್ಷಗಳಿಂದ ನಿದ್ದೆ ಮಾಡದ ವ್ಯಕ್ತಿ!!

MP: ವೈದ್ಯ ಲೋಕಕ್ಕೆ ಸವಾಲು – 50 ವರ್ಷಗಳಿಂದ ನಿದ್ದೆ ಮಾಡದ ವ್ಯಕ್ತಿ!!

0 comments

 

MP: ಮನುಷ್ಯನ ದೇಹದಲ್ಲಿ ಆಗುವಂಥ ಕೆಲವೊಂದು ಬದಲಾವಣೆಗಳು ಕೆಲವೊಮ್ಮೆ ವೈದ್ಯ ಲೋಕಕ್ಕೆ ಸವಾಲಾಗಿ ಪರಿಣಮಿಸುತ್ತವೆ. ಇದೀಗ ಅಂತದ್ದೇ ಮಧ್ಯಪ್ರದೇಶದ ರೇವಾ ಪಟ್ಟಣದಲ್ಲಿ ಅಚ್ಚರಿಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ವ್ಯಕ್ತಿ ಒಬ್ಬರು 50 ವರ್ಷಗಳಿಂದ ನಿದ್ದೆಯೇ ಮಾಡಿಲ್ಲ ಎಂಬ ವಿಚಾರ ಪ್ರತಿಯೊಬ್ಬರನ್ನು ಅಚ್ಚರಿಗೊಳಪಡಿಸಿದೆ.

ಹೌದು, ಒಬ್ಬ ವ್ಯಕ್ತಿ ದಿನಕ್ಕೆ ಏಳರಿಂದ ಎಂಟು ಗಂಟೆ ಸರಿಯಾಗಿ ನಿದ್ದೆ ಮಾಡಬೇಕು, ಇಲ್ಲದಿದ್ದರೆ ಆತನ ಆರೋಗ್ಯದ ಮೇಲೆ ಪರಿಣಾಮ ಬೀರುವುದು ಖಂಡಿತ ಎಂಬುದಾಗಿ ವೈದ್ಯರೇ ಹೇಳುತ್ತಾರೆ. ಇದಕ್ಕಿಂತ ಕಡಿಮೆ ನಿದ್ದೆ ಮಾಡಿದಾಗ, ಹೆಚ್ಚು ದಣಿವಾದಾಗ ಕೆಲವೊಮ್ಮೆ ಹಗಲು ಹೊತ್ತಿನಲ್ಲಿಯೂ ನಿದ್ದೆ ಬರುವುದು ಸಾಮಾನ್ಯ. ಆದರೆ ಇಲ್ಲೊಬ್ಬ 75ವರ್ಷದ ಮೋಹನ್ ಲಾಲ್ ದ್ವಿವೇದಿ ಎಂಬುವವರು ಸುಮಾರು 50 ವರ್ಷಗಳಿಂದ ಕಣ್ಣೇ ಮುಚ್ಚಿಲ್ಲ! ಅಂದರೆ ಆತ ಐವತ್ತು ವರ್ಷಗಳಿಂದ ನಿದ್ದೆ ಮಾಡಿಲ್ಲವಂತೆ!! ಇಷ್ಟು ದೀರ್ಘಾವಧಿಯಿಂದ ಆತ ನಿದ್ದೆ ಮಾಡದಿದ್ದರೂ ಕೂಡ ಇಂದಿಗೂ ಯಾವುದೇ ಆರೋಗ್ಯ ಸಮಸ್ಯೆಗಳು ಕಾಡಿಲ್ಲ. ಇಲ್ಲರಂತೆಯೇ ನೆಮ್ಮದಿಯಾಗಿ ಆರೋಗ್ಯ ಜೀವನವನ್ನು ನಡೆಸುತ್ತಿದ್ದಾರೆ.

ಮೋಹನ್ ಲಾಲ್ ಅವರು ಆರಂಭದಲ್ಲಿ, ತಮ್ಮ ಸಮಸ್ಯೆಯ ಬಗ್ಗೆ ಯಾರೊಂದಿಗೂ ಹೇಳಿಕೊಂಡಿರಲಿಲ್ಲ. ಅವರು ರಾತ್ರಿಯಿಡೀ ಎಚ್ಚರವಾಗಿರುತ್ತಿದ್ದರು. ಆದರೂ ಅವರ ಕಣ್ಣುಗಳು ಉರಿಯುತ್ತಿರಲಿಲ್ಲ. ಅಲ್ಲದೇ ಕೆಲಸದ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ನಂತರ ಅವರು ತಮ್ಮ ಕುಟುಂಬದ ಸದಸ್ಯರಿಗೆ ವಿಷಯ ತಿಳಿಸಿದ್ದಾರೆ. ಅವರು ಮೊದಲು ಕೆಲ ಸಾಂಪ್ರದಾಯಿಕ ಚಿಕಿಕ್ಸೆ ಪಡೆದಿದ್ದಾರೆ. ಬಳಿಕ ಅವರನ್ನು ದೆಹಲಿ ಮತ್ತು ಮುಂಬೈನ ಪ್ರಮುಖ ಆಸ್ಪತ್ರೆಗಳಿಗೆ ಕರೆದೊಯ್ಯಲಾಯಿತು. ಅಲ್ಲಿ ಅನೇಕ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಯಿತು. ಆದರೂ ಕೂಡ ಅವರ ಸಮಸ್ಯೆ ಪರಿಹಾರವಾಗಿಲ್ಲ. 1973ರ ಸುಮಾರಿಗೆ ಅವರಿಗೆ ಈ ಸಮಸ್ಯೆ ಪ್ರಾರಂಭವಾಗಿದ್ದು, ಅಂದಿನಿಂದ ಅವರು ನಿದ್ರಾಹೀನತೆಯನ್ನು ಅನುಭವಿಸುತ್ತಲೇ ಇದ್ದಾರೆ.

ಇನ್ನೂ ಮೋಹನ್ ಲಾಲ್ ದ್ವಿವೇದಿ ಅವರು ಒಬ್ಬ ಸಾಮಾನ್ಯ ವ್ಯಕ್ತಿಯೇನಲ್ಲ. ಅವರು 1973ರಲ್ಲಿ ಉಪನ್ಯಾಸಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು. 1974ಲ್ಲಿ ಮಧ್ಯಪ್ರದೇಶ ಸಾರ್ವಜನಿಕ ಸೇವಾ ಆಯೋಗದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಉಪ ತಹಶೀಲ್ದಾರ್ ಆದರು. 2001 ರಲ್ಲಿ ಜಂಟಿ ಕಲೆಕ್ಟರ್ ಆಗಿ ಕಾರ್ಯ ನಿರ್ವಹಿಸಿ ನಿವೃತ್ತರಾದರು. ದ್ವಿವೇದಿ ತಮ್ಮ ಹೆಚ್ಚಿನ ಸಮಯವನ್ನು ಪುಸ್ತಕಗಳನ್ನು ಓದುವುದರಲ್ಲಿ ಕಳೆಯುತ್ತಾರೆ. ತಡರಾತ್ರಿಯಲ್ಲಿ ಟೆರೇಸ್‌ನಲ್ಲಿ ಲ್ಲಿ ನಡೆದಾಡುತ್ತಾರೆ. 

You may also like