Home » Chanakya Niti: ಮದುವೆಯಾಗಲು ಬಯಸುವ ಹುಡುಗರು ಹೆಣ್ಣಿನಲ್ಲಿ ಈ ಗುಣ ಇಷ್ಟ ಪಡುತ್ತಾರೆ! ಚಾಣಕ್ಯ ಎಂತಹ ಗುಣದ ಹುಡುಗಿಯನ್ನು ಮದುವೆಯಾಗಲು ಹೇಳುವುದು ಗೊತ್ತೇ?

Chanakya Niti: ಮದುವೆಯಾಗಲು ಬಯಸುವ ಹುಡುಗರು ಹೆಣ್ಣಿನಲ್ಲಿ ಈ ಗುಣ ಇಷ್ಟ ಪಡುತ್ತಾರೆ! ಚಾಣಕ್ಯ ಎಂತಹ ಗುಣದ ಹುಡುಗಿಯನ್ನು ಮದುವೆಯಾಗಲು ಹೇಳುವುದು ಗೊತ್ತೇ?

1 comment
Chanakya Niti

Chanakya Niti: ಮನೆಯನ್ನು ಬೆಳಗಲು ಹೆಣ್ಣಿನ ಪಾತ್ರ ಬಹಳ ಮುಖ್ಯವಾಗಿದೆ. ಹಿರಿಯರು ಕೂಡ ಹೇಳಿರುವುದು ಕೇಳಿರಬಹುದು. ಹೆಣ್ಣಿನ ಕಾಲ್ಗುಣ ಉತ್ತಮವಾಗಿದ್ದರೆ ಎಲ್ಲವೂ ಶುಭ ಎನ್ನುತ್ತಾರೆ. ಅಂತೆಯೇ ದೇಶ ಕಂಡ ಮಹಾನ್ ವಿದ್ವಾಂಸ ಆಚಾರ್ಯ ಚಾಣಕ್ಯನ ಪ್ರಕಾರ ಕೆಲವು ಉತ್ತಮ ಗುಣಗಳು ಇರುವ ಮಹಿಳೆಯರನ್ನು ಮದುವೆಯಾದರೆ, ಆ ವ್ಯಕ್ತಿಯ ಅದೃಷ್ಟವು ತೆರೆದುಕೊಳ್ಳುತ್ತದೆ ಎಂದು ಹೇಳಲಾಗಿದೆ.

ಚಾಣಕ್ಯ ನೀತಿ ಯ ಪ್ರಕಾರ (Chanakya Niti) ಜೀವನ ಸಂಗಾತಿಯನ್ನು ಆಯ್ಕೆ ಮಾಡುವುದರಲ್ಲಿ ಯಾವತ್ತಿಗೂ ಎಚ್ಚರ ತಪ್ಪಬೇಡಿ. ವಿವಾಹ ಎಂಬ ಜೀವನದ ಮೆಟ್ಟಿಲು ಬಹಳ ಭದ್ರ ಮತ್ತು ಉತ್ತಮವಾಗಿರಬೇಕು. ಇದಕ್ಕಾಗಿ ಚಾಣಕ್ಯ ನೀತಿಯಲ್ಲಿ ಮದುವೆಗೆ ಉತ್ತಮ ಗುಣವುಳ್ಳ ಮಹಿಳೆ ಯಾವ ರೀತಿ ಇರುತ್ತಾಳೆ ಎಂದು ತಿಳಿಸಲಾಗಿದೆ.

ಧರ್ಮವನ್ನು ಅನುಸರಿಸುವ ಮಹಿಳೆ ಜೀವನದ ಪ್ರತಿಯೊಂದು ಸಂದರ್ಭದಲ್ಲೂ ಯಶಸ್ಸನ್ನು ಸಾಧಿಸುತ್ತಾಳೆ. ತನ್ನ ಧರ್ಮದ ಪ್ರಕಾರ ಪೂಜೆ ಮಾಡುವುದರಿಂದ ಮನೆಯಲ್ಲಿ ಅದೃಷ್ಟ ಉಳಿಯುತ್ತದೆ. ಹಾಗೂ ಧಾರ್ಮಿಕ ಕಾರ್ಯಗಳನ್ನು ಮಾಡುವ ಜನರು ಕೆಟ್ಟ ಕಾರ್ಯಗಳನ್ನು ಮಾಡುವುದಿಲ್ಲ. ಆದರ್ಶ ಜೀವನಕ್ಕೆ ಶ್ರಮಿಸುತ್ತಾರೆ.

ಮಹಿಳೆ ತನ್ನ ಕುಟುಂಬ ಮತ್ತು ಗಂಡನನ್ನು ಪ್ರತಿ ಪರಿಸ್ಥಿತಿಯಲ್ಲೂ ಬೆಂಬಲಿಸಬೇಕು. ಆರ್ಥಿಕ, ಸಾಮಾಜಿಕ ಅಥವಾ ಕೌಟುಂಬಿಕ ಸ್ಥಿತಿಯಲ್ಲಿ ಸದ್ಗುಣಶೀಲ ಮಹಿಳೆ ತನ್ನ ಕುಟುಂಬ ಮತ್ತು ಗಂಡನನ್ನು ಪ್ರತಿ ಕಷ್ಟದ ಪರಿಸ್ಥಿತಿಯಲ್ಲಿಯೂ ಬೆಂಬಲಿಸಿ ಸಮತೋಲನವನ್ನು ಕಾಪಾಡುವವಳು ಆಗಿರಬೇಕು.

ಇನ್ನು ಸುಸಂಸ್ಕೃತ ಅಥವಾ ಗೌರವಾನ್ವಿತ ಮಹಿಳೆ ಯಾವಾಗಲೂ ತನ್ನ ಹಿರಿಯರನ್ನು ಗೌರವಿಸುತ್ತಾಳೆ ಮತ್ತು ಅವರನ್ನು ನೋಡಿಕೊಳ್ಳುತ್ತಾಳೆ.

ಇದನ್ನೂ ಓದಿ: ದಾಳಿಂಬೆ ಗಿಡ ಸಣ್ಣ ಬಕೆಟ್ ನಲ್ಲಿ ಬೆಳೆಸೋದು ಹೇಗೆ? ಇಲ್ಲಿದೆ ಉತ್ತರ!!!

You may also like

Leave a Comment