Home » Cleaning Tips: ಟಿವಿ ಸ್ಕ್ರೀನ್​ ಕ್ಲೀನ್ ಮಾಡಲು ಇನ್ಮುಂದೆ ಚಿಂತೆ ಬಿಡಿ!ಸುಲಭವಾದ ಟಿಪ್ಸ್ ಇಲ್ಲಿದೆ!

Cleaning Tips: ಟಿವಿ ಸ್ಕ್ರೀನ್​ ಕ್ಲೀನ್ ಮಾಡಲು ಇನ್ಮುಂದೆ ಚಿಂತೆ ಬಿಡಿ!ಸುಲಭವಾದ ಟಿಪ್ಸ್ ಇಲ್ಲಿದೆ!

0 comments
Cleaning Tips

Cleaning Tips: ಮನೆ ಒಳಗಡೆ ಎಷ್ಟೇ ಕ್ಲೀನ್ ಮಾಡಿದರು ಮನೆಯಲ್ಲಿನ ವಸ್ತುಗಳ ಮೇಲೆ ಧೂಳು ಹಿಡಿಯುತ್ತಲೇ ಇರುತ್ತವೆ. ಅವುಗಳ ಪೈಕಿ ಟಿವಿ ಸ್ಕ್ರೀನ್ ಕೂಡಾ ಒಂದಾಗಿದೆ. ಹೌದು, ಅನೇಕ ಬಾರಿ ಟಿವಿ ಸ್ಕ್ರೀನ್ ಮೇಲೆ ಧೂಳು ಸಂಗ್ರಹಗೊಂಡಿರುವುದನ್ನು ತೆಗೆಯುವ ಸರಿಯಾದ ವಿಧಾನ ಕೆಲವರಿಗೆ ತಿಳಿದಿರುವುದಿಲ್ಲ. ಇದರಿಂದಾಗಿ ಟಿವಿ ಸ್ಕ್ರೀನ್ ಸ್ಪಷ್ಟವಾಗಿ ಕಾಣುವುದಿಲ್ಲ. ಅದರಲ್ಲೂ ಒಂದುವೇಳೆ ಟಿವಿ ಸ್ಕ್ರೀನ್ ಸ್ವಚ್ಛಗೊಳಿಸುವಾಗ ಎಚ್ಚರ ತಪ್ಪಿದರೆ ಒಡೆದು ಹೋಗುವ ಸಾಧ್ಯತೆ ಕೂಡಾ ಹೆಚ್ಚಾಗಿರುತ್ತದೆ. ಅದಕ್ಕಾಗಿ ಟಿವಿ ಪರದೆ ಸ್ವಚ್ಛಗೊಳಿಸುವ ಸುಲಭ ವಿಧಾನ (Cleaning Tips) ಇಲ್ಲಿ ನಿಮಗಾಗಿ ತಿಳಿಸಲಾಗಿದೆ.

ಇದನ್ನೂ ಓದಿ: Health Tips: ನಿಮ್ಮ ಎತ್ತರಕ್ಕೆ ಅನುಗುಣವಾಗಿ ನಿಮ್ಮ ತೂಕ ಹೇಗಿರಬೇಕು? ಇಲ್ಲಿದೆ ನೋಡಿ ಡೀಟೇಲ್ಸ್

ಮುಖ್ಯವಾಗಿ ಟಿವಿಯ ಸೂಕ್ಷ್ಮವಾದ ಪರದೆ(ಸ್ಕ್ರೀನ್)ಯನ್ನು ಸ್ವಚ್ಛಗೊಳಿಸಲು ನೀವು ಮೊದಲು ಸ್ಕ್ರೀನ್ ಅನ್ನು ಹಗುರವಾದ ಕೈಗಳಿಂದ ಬಟ್ಟೆಯ ಮೂಲಕ ನಿಧಾನವಾಗಿ ಸ್ವಚ್ಛಗೊಳಿಸಬೇಕು ಮತ್ತು ನೀವು ಕಾಲಕಾಲಕ್ಕೆ ನಿಮ್ಮ ಟಿವಿಯನ್ನು ಹೀಗೆ ಸ್ವಚ್ಛಗೊಳಿಸುತ್ತಿರಬೇಕು.

ಇದನ್ನೂ ಓದಿ: Fish Eating: ಯಾವುದೇ ಕಾರಣಕ್ಕೂ ಈ ಮೀನು ತಿನ್ನಬೇಡಿ, ಕ್ಯಾನ್ಸರ್ ಬರುವ ಚಾನ್ಸಸ್ ಹೆಚ್ಚು!

ಇನ್ನು ಟಿವಿ ಸ್ಕ್ರೀನ್ ಸ್ವಚ್ಛಗೊಳಿಸಿದ ನಂತರ ಟಿವಿಯನ್ನು ಸಂಪೂರ್ಣವಾಗಿ ಒಣಗಲು ಬಿಡಬೇಕು. ನೀವು ಹೀಗೆ ಮಾಡದಿದ್ದರೆ ಟಿವಿ ಸ್ಕ್ರೀನ್ ಸ್ಪಷ್ಟವಾಗಿ ಕಾಣಿಸುವುದಿಲ್ಲ. ಒಂದು ರೀತಿ ಕಲೆ ಉಳಿದುಕೊಂಡು ಬಿಡುತ್ತದೆ.

ಇನ್ನು ನೀವು ಕಾಲಕಾಲಕ್ಕೆ ನಿಮ್ಮ ಟಿವಿಯ ಹೊಳಪನ್ನು ಪರಿಶೀಲಿಸಬೇಕು. ಹೀಗೆ ಮಾಡುವುದರಿಂದ ನಿಮ್ಮ ಟಿವಿಯ ಅಸ್ಪಷ್ಟತೆ ದೂರವಾಗುತ್ತದೆ. ಅದನ್ನು ಸ್ವಚ್ಛಗೊಳಿಸಲು ನೀವು ಲಿಕ್ವೆಡ್ ಸೋಪ್ ಅನ್ನು ಸಹ ಬಳಸಬಹುದು. ಅದಲ್ಲದೆ ಸೂರ್ಯನ ಬೆಳಕು ಬರದಂತಹ ಸ್ಥಳದಲ್ಲಿ ನೀವು ಟಿವಿಯನ್ನು ಇಡಬೇಕು. ಯಾಕೆಂದರೆ ಸೂರ್ಯನ ಕಿರಣಗಳು ಟಿವಿ ಪರದೆಗೆ ಹಾನಿಯನ್ನು ಉಂಟು ಮಾಡಬಹುದು.

ಇನ್ನು ನೀವು ಸ್ಕ್ರೀನ್ ಕ್ಲೀನರ್ ಅನ್ನು ಸಹ ಬಳಸಬಹುದು, ಆದರೆ ಟಿವಿಯನ್ನು ಸ್ವಚ್ಛಗೊಳಿಸಲು ನೀವು ಎಂದಿಗೂ ಸ್ಯಾನಿಟೈಸರ್ ಅನ್ನು ಬಳಸಬೇಡಿ. ಇದು ಕಲೆಗಳನ್ನು ಸ್ವಚ್ಛಗೊಳಿಸುವುದಿಲ್ಲ. ಬದಲಿಗೆ ಇದರಿಂದ ಟಿವಿ ಸ್ಕ್ರೀನ್ಗೆ ಸಾಕಷ್ಟು ಹಾನಿ ಉಂಟಾಗಬಹುದು.

You may also like

Leave a Comment