Women Temple: ಭಾರತದಲ್ಲಿ ಜನರ ಆಚಾರ ವಿಚಾರ ಸಂಸ್ಕೃತಿ, ಪ್ರದೇಶದಿಂದ ಪ್ರದೇಶಕ್ಕೆ ವ್ಯತ್ಯಾಸ ಇರುತ್ತದೆ. ಆದರೆ ದೇವರ ಮೇಲಿನ ನಂಬಿಕೆ ಎಲ್ಲರಿಗೂ ಒಂದೇ. ದೇವರನ್ನು ಪೂಜಿಸುವ ವಿಧಾನಗಳು ವಿಭಿನ್ನ ಆಗಿರಬಹುದು ಅಷ್ಟೇ.
ಇನ್ನು ಭಾರತದ ಅನೇಕ ಭಾಗಗಳಲ್ಲಿ, ಹಿಂದೂ ನಂಬಿಕೆಯಲ್ಲಿ ಮಹಿಳೆಯರ ಮುಟ್ಟಿನ ಸಮಯವನ್ನು ಇನ್ನೂ ಕೊಳಕು ಮತ್ತು ಅಶುದ್ಧವೆಂದು ಪರಿಗಣಿಸಲಾಗಿದೆ. ಮುಟ್ಟಿನ ಸಮಯದಲ್ಲಿ ಮಹಿಳೆಯರು ಸಾಮಾನ್ಯ ಜೀವನದಲ್ಲಿ ಭಾಗವಹಿಸುವುದನ್ನು ಕೂಡಾ ನಿಷೇಧಿಸಲಾಗಿದೆ.
ಇದೀಗ ಇಲ್ಲೊಂದು ದೇವಾಲಯದ ವಿಶೇಷತೆ ಬಗ್ಗೆ ಇಲ್ಲಿ ತಿಳಿಸಲಾಗಿದೆ. ಹೌದು, ಕೊಯಮತ್ತೂರಿನಲ್ಲಿರುವ “ಮಾ ಲಿಂಗ ಭೈರವಿ” ಎಂಬ ಭಾರತದ ವಿಶಿಷ್ಟವಾದ ದೇವಾಲಯವು ಮಹಿಳೆಯರಿಗೆ ಮುಟ್ಟಿನ ಸಮಯದಲ್ಲಿಯೂ ಸಹ ದೇವಿಯನ್ನು ಪೂಜಿಸಲು (Women Temple) ಅನುವು ಮಾಡಿಕೊಡುತ್ತದೆಯಂತೆ.
ಮುಖ್ಯವಾಗಿ ಮಾಲಿಂಗ ಭೈರವಿ ದೇವಸ್ಥಾನಕ್ಕೆ ಮಹಿಳೆಯರು ಮತ್ತು ಪುರುಷರು ಪೂಜೆಗೆ ಬರುತ್ತಾರೆ ಆದರೆ ಗರ್ಭಗುಡಿಗೆ ಪ್ರವೇಶಿಸಲು ಮತ್ತು ದೇವಿಯನ್ನು ಪೂಜಿಸಲು ಮಹಿಳೆಯರಿಗೆ ಮಾತ್ರ ಅವಕಾಶವಿದೆ. ಸದ್ಗುರು ಜಗ್ಗಿ ವಾಸುದೇವ್ ಆಶ್ರಮದಲ್ಲಿರುವ ಮಾಲಿಂಗ ಭೈರವಿ ದೇವಸ್ಥಾನದಲ್ಲಿ ಮಹಿಳೆಯರಿಗೆ ಮಾತ್ರ ದೇವಾಲಯದ ಒಳ ಪ್ರವೇಶಿಸಲು ಅವಕಾಶವಿದೆಯಂತೆ.
ಈ ದೇವಾಲಯದಲ್ಲಿ ಮುಟ್ಟಾದ ಹುಡುಗಿಯರು ಮತ್ತು ಮಹಿಳೆಯರು ಪ್ರಾರ್ಥನೆ ಸಲ್ಲಿಸಲು ಮತ್ತು ಪವಿತ್ರ ಪುಸ್ತಕಗಳನ್ನು ಮುಟ್ಟದಂತೆ ನಿರ್ಬಂಧಿಸಲಾಗಿದೆ. ಈ ದೇವಾಲಯವು ಪ್ರಚಲಿತ ನಿಷೇಧಗಳ ಬಗ್ಗೆ ಸಮಾಜಕ್ಕೆ ಸಕಾರಾತ್ಮಕ ಸಂದೇಶವನ್ನು ನೀಡುವ ಗುರಿಯನ್ನು ಹೊಂದಿದೆ ಎನ್ನಲಾಗಿದೆ.
ಇದನ್ನೂ ಓದಿ: Women Health: ನೀವು ತಾಯಿಯಾಗಲು ಪ್ಲ್ಯಾನ್ ಮಾಡ್ತಿದ್ದೀರಾ? ಹಾಗಾದರೆ Period Track ಮಾಡಿ!!
