Marriage: ಮದುವೆ (Marriage) ಸುಸೂತ್ರವಾಗಿ ನಡೆಯಲು ಸಾವಿರ ವಿಘ್ನಗಳಂತೆ, ಹೌದು, ಮದುವೆ ಯಾವ ಕ್ಷಣದಲ್ಲಿ ಯಾವ ಕಾರಣಕ್ಕೆ ನಿಲ್ಲಬಹುದು ಎಂಬುದು ಊಹಿಸಲು ಸಹ ಸಾಧ್ಯ ಇಲ್ಲ. ಇಲ್ಲೊಂದು ಕಡೆ ಮದುವೆ (Marriage) ನಡೆಯುವ ಕೆಲವೇ ಗಂಟೆಗಳ ಮುನ್ನ ಬಿಹಾರ ಪೊಲೀಸ್ ಪೇದೆಯೊಬ್ಬರು 26 ವರ್ಷದ ಮಹಿಳೆಯೊಬ್ಬಳ ಮೇಲೆ ಗುಂಡು ಹಾರಿಸಿದ್ದಾರೆ.
ಕಳೆದ ಭಾನುವಾರ ರಾತ್ರಿ ಸಂತ್ರಸ್ತೆ ಕೊತ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ನಯಾ ಬಜಾರ್‌ನಲ್ಲಿ ಮೇಕಪ್ ಮಾಡಿಸಿಕೊಳ್ಳಲು ಬ್ಯೂಟಿ ಪಾರ್ಲರ್ ಗೆ ತೆರಳಿದ್ದ ವೇಳೆ ಈ ಘಟನೆ ನಡೆದಿದೆ. ಆರೋಪಿ ಕಾನ್ಸಿಬಲ್ ಅಮನ್ ಕುಮಾರ್ ಆಕೆಯನ್ನು ಹಿಂಬಾಲಿಸುತ್ತ ಬ್ಯೂಟಿ ಪಾರ್ಲರ್ ಗೆ ಬಂದು ಆಕೆಯ ಮೇಲೆ ಗುಂಡು ಹಾರಿಸಿದ್ದಾರೆ.
ಗುಂಡು ಹಿಂದಿನಿಂದ ಎಡ ಭುಜಕ್ಕೆ ತಗುಲಿ ಎದೆಯ ಬಲಭಾಗದಿಂದ ಹೊರಬಂದಿದೆ. ಆರೋಪಿ ಕೂಡ ತನಗೆ ತಾನೇ ಗುಂಡು ಹಾರಿಸಿಕೊಳ್ಳಲು ಯತ್ನಿಸಿ ವಿಫಲನಾಗಿದ್ದಾನೆ. ಕೂಡಲೇ ಪಾರ್ಲರ್ ನಲ್ಲಿ ಕೆಲಸ ಮಾಡುತ್ತಿದ್ದ ಮತ್ತೊಬ್ಬ ಮಹಿಳೆ ಆತನನ್ನು ಹಿಡಿಯಲು ಯತ್ನಿಸಿದರಾದರೂ ವಿಫಲರಾದರು. ಸದ್ಯ ಆರೋಪಿ ಆಕೆಯ ಮೇಲೆ ಹಲ್ಲೆ ನಡೆಸಿದ ಸ್ಥಳದಿಂದ ಪರಾರಿಯಾಗಿದ್ದಾನೆ.
ಕೊತ್ವಾಲಿ ಪೊಲೀಸ್ ಠಾಣೆ ಪ್ರಾಥಮಿಕ ಮುಂಗೇರ್ ಎಸ್ಎಚ್‌ಒ ಧೀರೇಂದ್ರ ಕುಮಾರ್ ಪರ್ಡೆ ಪ್ರಕಾರ ‘ಬಿಹಾರ ಪೊಲೀಸ್ ಪೇದೆ ಮತ್ತು ಪಾಟ್ನಾದಲ್ಲಿ ನಿಯೋಜನೆಗೊಂಡಿರುವ ಅಮನ್ ಕುಮಾರ್ ವಿರುದ್ಧ ನಾವು ಎಫ್‌ಐಆರ್ ದಾಖಲಿಸಿದ್ದೇವೆ. ತನಿಖೆಯಿಂದ ಅವರು ಸಂತ್ರಸ್ತೆಯ ಮಾಜಿ ಪ್ರೇಮಿಯಾಗಿದ್ದರು, ಆಕೆಯ ಮದುವೆಯಿಂದ ಕೋಪಗೊಂಡಿದ್ದರು’ ಯಾರೇ ಆಗಲಿ ಕಾನೂನಿಂದ ತಪ್ಪಿಸಲು ಸಾಧ್ಯವಿಲ್ಲ. ಸದ್ಯ ಆರೋಪಿಯ ಪತ್ತೆಗಾಗಿ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಇದನ್ನು ಓದಿ: Sarath Babu Passes Away: ಕನ್ನಡದ ಜನಪ್ರಿಯ ನಟ ಶರತ್ ಬಾಬು ನಿಧನ! ಕೊನೆಗೂ ಫಲಿಸಲಿಲ್ಲ ಪ್ರಾರ್ಥನೆ
