Home » Costly Chicken: ಈ ಹುಂಜದ ರೇಟ್​ ಕೇಳಿದ್ರೆ ಪಕ್ಕಾ ಶಾಕ್​ ಆಗ್ತೀರ!

Costly Chicken: ಈ ಹುಂಜದ ರೇಟ್​ ಕೇಳಿದ್ರೆ ಪಕ್ಕಾ ಶಾಕ್​ ಆಗ್ತೀರ!

0 comments

Costly Chicken: ನಾವು ತಿನ್ನುವ ನಾಟಿ ಕೋಳಿಗೆ ಹೆಚ್ಚು ಎಂದರೆ ಸುಮಾರು 2 ಸಾವಿರ ಬೆಲೆ ಕೊಡಬಹುದು. ಕೋಳಿ ಅಂಕದ ಕೋಳಿಗಳಿಗೆ ಲಕ್ಷಗಟ್ಟಲೆ ಬೆಲೆ ಇರೋದನ್ನು ನಾವು ಕೇಳಿದ್ದೇವೆ. ಆದರೆ ಮಾಂಸದ ನಾಟಿ ಕೋಳಿಗೆ ಎಂದಾದರೂ ಅದಕ್ಕಿಂದ ಹೆಚ್ಚು ಒಂದು ಕೋಳಿ ಬೆಲೆ ಇರೋದು ಕೇಳಿದ್ದೀರಾ ? ಆದರೆ ಇಲ್ಲೊಂದು ಕಾಸ್ಟ್ಲಿಹುಂಜ (Costly chicken) ಬರೋಬ್ಬರಿ 50 ಸಾವಿರ ರೂಪಾಯಿ ಬೆಲೆಬಾಳಿದೆ.

ಏನಿದು ಈ ಕೋಳಿ ವಿಶೇಷ ಬನ್ನಿ ನೋಡೋಣ. ಕೇರಳದ (Kerala) ಪಾಲಕ್ಕಾಡ್‌ನಲ್ಲಿರುವ ದೇವಸ್ಥಾನವೊಂದರಲ್ಲಿ ಹುಂಜ ಕೋಳಿ ಒಂದನ್ನು ಹರಾಜು ಮಾಡಲಾಗಿದ್ದು ಅದು 50,000 ರೂಪಾಯಿಗಳ ದಾಖಲೆ ಬೆಳೆಗೆ ಮಾರಾಟ ಆಗಿದೆ. ಅಲ್ಲಿನ ತಾಚಂಪಾರ ಕುನ್ನತುಕಾವು ದೇವಸ್ಥಾನ ಸಮಿತಿಯು ಪೂರಂ ಹಬ್ಬಕ್ಕಾಗಿ ಹಣ ಸಂಗ್ರಹಿಸುತ್ತಿದ್ದು, ಇದಕ್ಕಾಗಿ ಪ್ರತಿದಿನ ವಿವಿಧ ವಸ್ತುಗಳನ್ನು ಹರಾಜು ಮಾಡಲಾಗುತ್ತದೆ. ಹಾಗೆಯೇ ಒಂದು ದಿನ ಈ ಕೋಳಿಯನ್ನು ದೇವಸ್ಥಾನ ಸಮಿತಿಯ ಮೂಲಕವೂ ಹರಾಜು ಮಾಡಿದೆ.

ಸದ್ಯ ದೇಗುಲ (Temple )ಸಮಿತಿಗೆ ಗರಿಷ್ಠ ಐದು ಸಾವಿರ ರೂಪಾಯಿ ಸಿಗುವ ಅಂದಾಜು ಮಾಡಲಾಗಿತ್ತು. ಆದರೆ ಕೇವಲ 10 ರೂಪಾಯಿಯಿಂದ ಹರಾಜು ಆರಂಭವಾಗಿ ಕೋಳಿ ಹರಾಜು ಆರಂಭವಾದಾಗ ಎಲ್ಲರಿಗೂ ಅಚ್ಚರಿ ಕಾದಿತ್ತು. ಹೌದು ಅಲ್ಲಿನ ಜನರ ಪ್ರಕಾರ ಈ ಕೋಳಿ ಖರೀದಿಸಲು ಹರಸಾಹಸ ಪಡಬೇಕಾಯಿತು ಎನ್ನುತ್ತಾರೆ. ಯಾಕೆಂದರೆ ಹಲವರು ಈ ಕೋಳಿಯನ್ನು ಖರೀದಿಸಲು ಉತ್ಸುಕರಾಗಿದ್ದರು.

ಸದ್ಯ ಈ ಕೋಳಿಯ ಬಿಡ್ ಕೆಲವು ರೂಪಾಯಿಗಳಿಂದ ಹಿಡಿದು ಹಲವು ಸಾವಿರಾರು ಹಣದ ತನಕ ತಲುಪಿತು. ಅಂತಿಮವಾಗಿ ಬಿಡ್ 50 ಸಾವಿರ ರೂ. ಕೂಲ್ ಬಾಯ್ಸ್ (cool boys) ಎಂಬ ತಂಡವು (team )ಈ ಹುಂಜವನ್ನು ಖರೀದಿಸಿದ್ದು ಆಶ್ಚರ್ಯ ಮೂಡಿಸಿದೆ.

ಆದರೆ ಈ ಕೋಳಿಯನ್ನು ದೇವಾಲಯದ ಸಮಿತಿಯ ಅಧ್ಯಕ್ಷರು ಹುಂಜವನ್ನು ದಾನ ಮಾಡಿದ್ದರು. ಅದಲ್ಲದೆ ದೇವಸ್ಥಾನ ಬಗೆಗಿನ ಅಪಾರ ಗೌರವದಿಂದ ಈ ಕೋಳಿಯನ್ನು ಖರೀದಿಸಿದ್ದೇವೆ ಎಂದು ಕೂಲ್ ಬಾಯ್ಸ್ ತಂಡ ತಿಳಿಸಿದೆ. ಅಲ್ಲದೆ ಕೋಳಿ ಜೊತೆಗೆ ಫೋಟೋ (photo) ಕ್ಲಿಕ್ಕಿಸಿಕೊಂಡು ಊರಿನ ಜನರು ಸಂಭ್ರಮ ಆಚರಿಸಿದ್ದಾರೆ.

You may also like

Leave a Comment