Home » Crows Attack: ಕಾಗೆ ನಿಮ್ಮನ್ನು ಕುಕ್ಕುತ್ತಿದ್ದರೆ ಅದು ಈ ಸೂಚನೆ ನೀಡುತ್ತಿದೆ ಎಂದರ್ಥ! ಕೂಡಲೇ ಎಚ್ಚತ್ತುಕೊಳ್ಳಿ

Crows Attack: ಕಾಗೆ ನಿಮ್ಮನ್ನು ಕುಕ್ಕುತ್ತಿದ್ದರೆ ಅದು ಈ ಸೂಚನೆ ನೀಡುತ್ತಿದೆ ಎಂದರ್ಥ! ಕೂಡಲೇ ಎಚ್ಚತ್ತುಕೊಳ್ಳಿ

0 comments
Crows Attack

Crows Attack: ಕಾಗೆಗಳು ನಿಮ್ಮ ಮನೆ ಸುತ್ತಮುತ್ತ ತಮ್ಮ ಪಾಡಿಗೆ ಹಾರಾಡುತ್ತ ಇರುತ್ತದೆ. ಆದ್ರೆ ಒಂದು ವೇಳೆ ಈ ಕಾಗೆ ನಿಮ್ಮನ್ನು ಕುಕ್ಕಲು, ಆಕ್ರಮಣ (Crows Attack) ಮಾಡಲು ಬಂದರೆ ಈ ಕೆಳಗಿನ ಸೂಚನೆ ನೀಡುತ್ತಿದೆ ಎಂದರ್ಥ.

ಸಾಮಾನ್ಯವಾಗಿ ಹಿಂದೂ ಶಾಸ್ತ್ರ ಪ್ರಕಾರ, ಕುಟುಂಬದಲ್ಲಿ ಸಾವು ಸಂಭವಿಸಿದ್ದಾಗ ಅವರ ಅಂತಿಮ ವಿಧಿವಿಧಾನ ಮುಗಿಯುವುದೇ ಅಲ್ಲಿ ಕಾಗೆ ಪ್ರತ್ಯಕ್ಷ ಆದ ಮೇಲೆ. ತಿಥಿ ಕಾರ್ಯದಲ್ಲಿ ಕಾಗೆ ಬಂದ ಮೇಲೆ ಸತ್ತವರ ಆತ್ಮಕ್ಕೆ ಶಾಂತಿ ಸಿಗುವುದು, ಪೂಜೆ ಮುಗಿದು ಬಂದವರಿಗೆ ಊಟ ಸಿಗುವುದು. ಹಾಗಿದ್ರೆ ಕಾಗೆಗೂ ಮನುಷ್ಯರಿಗೂ ಏನು ಸಂಬಂಧ?

ಮಹಾವಿದ್ಯೆಯಲ್ಲಿ ಬರುವ 10 ಹಿಂದು ತಾಂತ್ರಿಕ ದೇವಿಗಳಲ್ಲಿ ಒಬ್ಬರಾದ ಧೂಮಾವತಿ ಹಿಂದೂ ಧರ್ಮದಲ್ಲಿ ಆಕೆ ಕಾಗೆಗಳ ಜೊತೆ ಸಂಪರ್ಕ ಹೊಂದಿರುತ್ತಾಳೆ, ಹಾಗೂ ಕಾಗೆಗಳನ್ನು ಹಿಡಿತದಲ್ಲಿ ಇಟ್ಟುಕೊಂಡಿದ್ದಾಳೆ ಎನ್ನಲಾಗಿದೆ. ಈಕೆ ಕಾಗೆ ಮೇಲೆ ಸವಾರಿ ಮಾಡುತ್ತಿರುವ ದೇವಿ ಎನ್ನಲಾಗಿದೆ. ಮನುಷ್ಯರ ತೊಂದರೆಗಳಿಂದ ರಕ್ಷಿಸುವುರು ಹಾಗೂ ಮೋಕ್ಷ ದೊರಕುವಂತೆ ಮಾಡುತ್ತಾಳೆ ಎನ್ನಲಾಗತ್ತದೆ.

ಮನುಷ್ಯರು- ಕಾಗೆ :

‘ಕಾಗೆಗಳು ತುಂಬಾನೇ ಸ್ಮಾರ್ಟ್‌ ಪಕ್ಷಿಗಳು. ವಿದ್ಯೆಯಲ್ಲಿ ಬರುವ ಧೂಮಾವತಿ ಎಲ್ಲಾ ಕಾಗೆಗಳನ್ನು ಕಂಟ್ರೋಲ್ ಮಾಡುತ್ತಾರೆ. ಪಿತೃಪಕ್ಷದ ದಿನ ನಾವು ಅನ್ನದ ಉಂಡೆಯನ್ನು ಇಡುತ್ತೀವಿ. ಪೂರ್ವಜ್ಜರ ಜೊತೆ ಸಂಪರ್ಕ ಮಾಡಲು ಸಹಾಯ ಮಾಡುವುದೇ ಕಾಗೆಗಳು. ಒಂದು ಕಡೆ ಸಾವು ಸಂಬವಿಸುತ್ತದೆ ಅನ್ನೋ ಸಮಯದಲ್ಲಿ ಅಲ್ಲಿ  ದೊಡ್ಡ ಗಾತ್ರದ ಕಾಗೆ ಕಾಣಿಸಿಕೊಳ್ಳುತ್ತದೆ.

ಹೌದು, ಪ್ರತಿಯೊಂದು ಪ್ರಾಣಿ ಪಕ್ಷಿಗೂ ಪ್ರಕೃತಿ ಒಂದು ಕೆಲಸ ಕೊಟ್ಟಿರುತ್ತದೆ. ಕಾಗೆಗಳಲ್ಲಿ ತುಂಬಾ ಶಕ್ತಿ ಇರುತ್ತದೆ. ಧೂಮವತಿ ಕಾಗೆಗಳ ಮೂಲಕ ಸಂಪರ್ಕ ಮಾಡುವುದರಲ್ಲಿ ಎತ್ತಿದ ಕೈ. ಸಾಕಷ್ಟು ಸಲ ಕಾಗೆಗಳನ್ನು ಕುಕ್ಕುವುದನ್ನು ನೋಡಿದ್ದೀವಿ, ಹೀಗೆ ವರ್ತಿಸಲು ಬಲವಾದ ಕಾರಣ ಇರುತ್ತದೆ. ಕಾಗೆಗಳು ದ್ವೇಷ ಇಟ್ಟಿಕೊಳ್ಳುವುದರಲ್ಲಿ ಎತ್ತಿದ ಕೈ ಅಂತೆಯೇ ನಮ್ಮ ಪೂರ್ವಜ್ಜರ ಕರ್ಮವನ್ನು ನಮ್ಮ ಮೇಲೆ ಸಾಧಿಸುತ್ತದೆ. ಅದಕ್ಕಾಗಿ ಒಬ್ಬ ವ್ಯಕ್ತಿ ಹಿಂದೆ ಕಾಗೆ ಪದೇ ಪದೇ ಹೋಗುತ್ತಿದೆ ಅಂದ್ರೆ ಏನೋ ಸೂಚನೆ ನೀಡುತ್ತಿದೆ ಎಂದು ಅರ್ಥ ಎಂದು ಭವೇಶ್ ಭೀಮಾನಾಥನಿ  ಹೇಳಿದ್ದಾರೆ.

You may also like

Leave a Comment