Home » Mummy In Bag: ಪೆರುವಿನ ಫುಡ್ ಡೆಲಿವರಿ ಬಾಯ್ ಬ್ಯಾಗ್​ನಲ್ಲಿತ್ತು 800 ವರ್ಷ ಹಳೆಯ ಮಮ್ಮಿ! ಈಕೆ ನನ್ನ ಗರ್ಲ್​ ಫ್ರೆಂಡ್ ಎಂದ!

Mummy In Bag: ಪೆರುವಿನ ಫುಡ್ ಡೆಲಿವರಿ ಬಾಯ್ ಬ್ಯಾಗ್​ನಲ್ಲಿತ್ತು 800 ವರ್ಷ ಹಳೆಯ ಮಮ್ಮಿ! ಈಕೆ ನನ್ನ ಗರ್ಲ್​ ಫ್ರೆಂಡ್ ಎಂದ!

by ಹೊಸಕನ್ನಡ
0 comments

Mummy in bag :ಈ ಜಗತ್ತಿನಲ್ಲಿ ಎಂತೆಂತ ವಿಚಿತ್ರ ವ್ಯಕ್ತಿಗಳು ಇರುತ್ತಾರೆ ಎಂದರೆ ಕೆಲವೊಮ್ಮೆ ಅವರ ಕಲ್ಪನೆಗಳಿಗೆ, ಭಾವನೆಗಳಿಗೆ ನಮ್ಮಲ್ಲಿ ಯಾವುದೇ ಪ್ರತಿಕ್ರಿಯೆಗಳಾಗಲಿ, ಉತ್ತರವಾಗಲಿ ಇರುವುದಿಲ್ಲ. ಅಲ್ಲದೆ ಅವರು ವಿಚಿತ್ರವಾಗಿ ವರ್ತಿಸಲು ಅದರ ಹಿಂದೆ ಬಲವಾದ ಕಾರಣಗಳಿದ್ದರೂ ನಮಗದು ತಿಳಿಯದಿರುವುದಿಲ್ಲ. ಅದೇನೇ ಇರಲಿ ಬಿಡಿ. ಆದ್ರೆ ಇಲ್ಲೊಂದು ದೇಶದ ವ್ಯಕ್ತಿ ಎಷ್ಟು ವಿಚಿತ್ರವಾಗಿದ್ದಾನೆ ಅಂದ್ರೆ ಸುಮಾರು 800 ವರ್ಷಗಳಷ್ಟು ಹಳೆಯ ಮಮ್ಮಿ(Mummy in bag) ಯೊಂದನ್ನು ತನ್ನ ಗೆಳತಿ ಎಂದು ಹೇಳಿಕೊಂಡು ತಿರುಗುತ್ತಿದ್ದಾನೆ. ಅರೆ! ಇದೇನಪ್ಪ ಆಶ್ಚರ್ಯ ಅನ್ಕೊಂಡ್ರಾ? ಹಾಗಿದ್ರೆ ಈ ಸ್ಟೋರಿ ನೋಡಿ

ಹೌದು, ಪೆರು(Peru)ವಿನಲ್ಲಿ ಫುಡ್ ಡೆಲಿವರಿ ಬಾಯ್​(Food Delivery boy) ಆದ ಜೂಲಿಯೋ ಸೀಸರ್​(Julius Sesur) ಎಂಬಾತ ತನ್ನ ಬ್ಯಾಗ್​ನಲ್ಲಿ ಬರೋಬ್ಬರಿ 800 ವರ್ಷಗಳಷ್ಟು ಹಳೆಯದಾದ ಮಮ್ಮಿ ಪತ್ತೆಯಾಗಿದೆ. ಅಲ್ಲದೆ ಆತ ಈ ಮಮ್ಮಿ ಸದಾ ನನ್ನ ಕೋಣೆಯಲ್ಲಿ ಇರುತ್ತದೆ. ಅವಳು ನನ್ನೊಂದಿಗೆ ಸದಾ ಇರುತ್ತಾಳೆ, ಅವಳೊಂದಿಗೆ ನಾನು ಮಲಗುತ್ತೇನೆ ಎಂದು ಹೇಳಿದ್ದಾನೆ!

ಸುಮಾರು 30 ವರ್ಷಗಳಿಂದ ಈ ಮಮ್ಮಿ ತಮ್ಮ ಮನೆಯಲ್ಲಿಯೇ ಇದೆ, ಆಕೆ ನನಗೆ ಗೆಳತಿ(Girl Friend) ಇದ್ದಂತೆ ಎಂದು ಆತ ಹೇಳಿದ್ದಾನೆ. ಈ ಮೊದಲು ಅದೇ ಬ್ಯಾಗ್​ ಅನ್ನು ಜನರಿಗೆ ಆಹಾರ ವಿತರಣೆ ಮಾಡಲು ಆತ ಬಳಸುತ್ತಿದ್ದನಂತೆ! ಆತ ಉದ್ಯಾನದಲ್ಲಿ ಆತ ತನ್ನ ಸ್ನೇಹಿತರೊಂದಿಗೆ ಓಡಾಡುತ್ತಿರುವಾಗ ಬೆನ್ನ ಹಿಂದೆ ಒಂದು ಬೃಹದಾಕಾರದ ಬ್ಯಾಗ್​ ಅನ್ನು ಪೊಲೀಸರು ನೋಡಿದ್ದಾರೆ. ನಂತರ ಅದನ್ನು ಪರಿಶೀಲಿಸಿದಾಗ ಅದರೊಳಗೆ ಬ್ಯಾಂಡೇಜ್(Bandage)ನಿಂದ ಸುತ್ತಲಾದ ಮಮ್ಮಿಯೊಂದು ಪತ್ತೆಯಾಗಿದೆ.

ಈ ಘಟನೆ ಸಂಬಂಧ 26 ವರ್ಷದ ಜೂಲಿಯೋ ಸೀಸರ್​ ಬರ್ಮೆಜೊ ಅವನನ್ನು ಬಂಧಿಸಲಾಗಿದೆ ಎಂದು ಪೆರು ಪೊಲೀಸರು(Police) ತಿಳಿಸಿದ್ದಾರೆ. ಆತ ಯಾಕೆ ಅದನ್ನು ತನ್ನ ಬಳಿ ಇಟ್ಟುಕೊಂಡಿದ್ದಾನೆ, ಅದನ್ನು ಗೆಳತಿ ಎಂದು ಯಾಕೆ ಹೇಳುತ್ತಿದ್ದಾನೆ ಎಂಬುದಾಗಿ ತಿಳಿದು ಬಂದಿಲ್ಲ. ಇನ್ನು ವಿಚಾರಣೆ ನಡೆಯಬೇಕಷ್ಟೆ. ಆದರೆ ಅದನ್ನು ಯಾರಿಗಾದರೂ ಮಾರಲು ಆತ ಕೊಂಡೋಗುತ್ತಿದ್ದನೋ ಎಂದು ಪೋಲೀಸರು ಕೇಳಿದ್ದಕ್ಕೆ ಅದನ್ನು ನಾನು ಮಾರಾಟ ಮಾಡಲು ಹೋಗುತ್ತಿರಲಿಲ್ಲ, ನನ್ನ ಸ್ನೇಹಿತರಿಗೆ ತೋರಿಸಲು ಹೋಗುತ್ತಿದ್ದೆ ಎಂದಷ್ಟೇ ಹೇಳಿದ್ದಾನೆ.

ಅಲ್ಲದೆ ಆರಂಭದಲ್ಲಿ ತಿಳಿಸಿದಂತೆ ಮಮ್ಮಿ ಸದಾ ನನ್ನ ಕೋಣೆಯಲ್ಲಿ ಇರುತ್ತದೆ, ಅವಳು ನನ್ನೊಂದಿಗೆ ಸದಾ ಇರುತ್ತಾಳೆ, ಅವಳೊಂದಿಗೆ ನಾನು ಮಲಗುತ್ತೇನೆ, ಆಕೆ ನನ್ನ ಗೆಳತಿ ಎಂದಷ್ಟೇ ವಿಚಿತ್ರವಾದ ಉತ್ತರವನ್ನು ಜೂಲಿಯೋ ಹೇಳಿದ್ದಾನೆ. ಸದ್ಯ ಪೆರುವಿನ ಸಂಸ್ಕೃತಿ ಸಚಿವಾಲಯವು ಅದನ್ನು ಸಂರಕ್ಷಿಸುವ ಉದ್ದೇಶದಿಂದ ರಕ್ಷಿತ ಅವಶೇಷಗಳನ್ನು ವಶಕ್ಕೆ ಪಡೆದಿದೆ ಎಂದು ವರದಿಗಳು ತಿಳಿಸಿವೆ.

ಯಾವುದೇ ಮನುಷ್ಯ ಅಥವಾ ಪ್ರಾಣಿಯು ಸಾವನ್ನಪ್ಪಿದ ನಂತರ ಅದರ ದೇಹವು ಕೊಳೆಯಲಾರಂಭಿಸುತ್ತದೆ. ಆದರೆ, ಮೃತ ದೇಹಗಳನ್ನು ಈ ರೀತಿಯಾಗಿ ನಶಿಸಿಹೋಗಲು ಬಿಡದೆ, ಹಲವು ವರ್ಷಗಳ ಕಾಲ ಅವು ಕ್ಷಯಿಸಿ ಹೋಗದಂತೆ ಸಂರಕ್ಷಿಸಿಡುವ ವಿಶಿಷ್ಟ ಪದ್ಧತಿಯನ್ನು ಪ್ರಾಚೀನ ಈಜಿಫ್ಟ್(Egyt) ಹಾಗೂ ಇತರ ಕೆಲವು ದೇಶಗಳ ಜನರು ರೂಢಿಸಿ ಕೊಂಡಿದ್ದರು ಅದಕ್ಕೆ ಮಮ್ಮಿ ಎಂದು ಕರೆಯಲಾಗುತ್ತದೆ.

You may also like

Leave a Comment