UT Khadar: ಈಗಾಗಲೇ ನೂತನ ಸ್ಪೀಕರ್ ಆಗಿರುವ ಯು.ಟಿ ಖಾದರ್ (UT Khadar) ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ್ದ ಹಿನ್ನೆಲೆಯಲ್ಲಿ, ಶ್ರೀರಾಮಸೇನೆಯ ಮುಖಂಡನ ವಿರುದ್ಧ ಕಾಂಗ್ರೆಸ್ ದೂರು ದಾಖಲಿಸಿರುವ ಮಾಹಿತಿ ಬೆಳೆಕಿಗೆ ಬಂದಿದೆ.
ಹೌದು, ಶ್ರೀರಾಮಸೇನೆಯ ಮುಖಂಡ ಪ್ರೀತೇಶ್ ಎಂಬವರು ಯು.ಟಿ ಖಾದರ್ ಬಗ್ಗೆ, ಯುಟಿ ಖಾದರ್ ಅವರ ಹೆಸರಿನಲ್ಲಿ ಟ್ಯಾಗ್ ಬಳಸಿ `ಸದನದಲ್ಲಿ ಮಾನ್ಯ ಸಭಾಧ್ಯಕ್ಷರೇ ಅನ್ನಬೇಕಾ? ಸಾಬಾಧ್ಯಕ್ಷರೇ ಅನ್ನಬೇಕಾ?’ ಎಂದು ಬರೆದುಕೊಂಡಿದ್ದರು.
ಈಗಾಗಲೇ ಈ ಸಂಬಂಧ ಚಿಕ್ಕಮಗಳೂರು ನಗರದ ಸೈಬರ್ ಕ್ರೈಮ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಈ ಹಿನ್ನೆಲೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ಅಲ್ಲದೆ ಈ ರೀತಿ ಪೋಸ್ಟ್ ಮಾಡಿರುವುದು, ಕೋಮು ದ್ವೇಷ ಹಾಗೂ ಜನಾಂಗದ ನೋವಿಗೆ ಪ್ರೀತೇಶ್ ಕಾರಣರಾಗಿದ್ದಾರೆ. ಈ ರೀತಿ ಸಂವಿಧಾನಾತ್ಮಕ ಹುದ್ದೆಗೆ ಅಗೌರವ ತೋರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪಕ್ಷದ ಐಟಿ ಸೆಲ್‍ನ ಜಿಲ್ಲಾ ಕಾರ್ಯದರ್ಶಿ ಎಂಎಲ್‍ಎ ಮಂಜು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನು ಓದಿ: Election Announcement: ಜಿ.ಪಂ, ತಾಪಂ ಚುನಾವಣೆ ಘೋಷಣೆ : ತಯಾರಿಗೆ ಚುನಾವಣೆ ಆಯೋಗ ಸಿದ್ಧತೆ
