Home » Interesting Rituals : ಈ ಊರಲ್ಲಿ ನೀವೇನಾದರೂ ಯುವತಿಯರಿಗೆ ಬಣ್ಣ ಹಾಕಿದ್ರೋ, ಅಲ್ಲೇ ಮದುವೆ ಗ್ಯಾರಂಟಿ!!

Interesting Rituals : ಈ ಊರಲ್ಲಿ ನೀವೇನಾದರೂ ಯುವತಿಯರಿಗೆ ಬಣ್ಣ ಹಾಕಿದ್ರೋ, ಅಲ್ಲೇ ಮದುವೆ ಗ್ಯಾರಂಟಿ!!

1 comment

Holi fest :ದೇಶದಾದ್ಯಂತ ಹೋಳಿ(Holi) ಹಬ್ಬವನ್ನು ಆಚರಿಸುತ್ತಾರೆ. ವಿವಿಧ ಬಣ್ಣಗಳನ್ನು ಎರಚಿಕೊಂಡು ಆಡುವ ಆಟ, ನೋಡಲು ಆಕರ್ಷಣಿಯ ಎನಿಸುತ್ತದೆ. ಕೆಲವೊಂದು ಪ್ರದೇಶಗಳಲ್ಲಿ ಹೋಳಿಯನ್ನು ವಿಭಿನ್ನವಾಗಿ ಆಚರಿಸುತ್ತಾರೆ. ಹಾಗೆಯೇ ವಿವಿಧ ಪ್ರದೇಶಗಳಲ್ಲಿ ಹೋಳಿಗೆ ವಿಭಿನ್ನ ಹೆಸರುಗಳಿವೆ. ಆದರೆ ಇಲ್ಲೊಂದು ಊರಲ್ಲಿ ಹೋಳಿ ಹಬ್ಬದ (Holi fest) ಆಚರಣೆ ವಿಭಿನ್ನವಾಗಿದೆ. ಈ ಊರಲ್ಲಿ ಯುವತಿಯರ ಮೇಲೆ ಯುವಕರು ಬಣ್ಣ ಎರಚಿದ್ರೆ ಮದುವೆ ಖಂಡಿತ!. ಇದೆನಪ್ಪಾ ವಿಚಿತ್ರವಾಗಿದೆ? ಎಲ್ಲಿ ಇಂತಹ ಸಂಪ್ರದಾಯ? ಕಂಪ್ಲೀಟ್ ಸ್ಟೊರಿ ಇಲ್ಲಿದೆ.

ಜಾರ್ಖಂಡ್‌(Jharkhand) ನ ಬುಡಕಟ್ಟು ಪ್ರದೇಶದಲ್ಲಿನ ಸಂತಾಲ್ ಸಮುದಾಯದಲ್ಲಿ ಇಂತಹ ಸಂಪ್ರದಾಯವಿದೆ. ಸಂತಾಲ್ ಬುಡಕಟ್ಟು ಸಮುದಾಯದಲ್ಲಿ ಹೋಳಿಗೆ 15 ದಿನದ ಮೊದಲೇ ಹೋಳಿ ಹಬ್ಬ ಆರಂಭವಾಗುತ್ತದೆ. ಇಲ್ಲಿನ ಜನರು ಹೋಳಿಯನ್ನು ನೀರು(water) ಮತ್ತು ಹೂವುಗಳಿಂದ ಆಡುತ್ತಾರೆ. ಇದನ್ನು ಬಹ ಪರ್ವ ಎಂದು ಕರೆಯಲಾಗುತ್ತದೆ. ಈ ಹಬ್ಬದಲ್ಲಿ ಪ್ರಕೃತಿಯನ್ನು ಪೂಜಿಸಲಾಗುತ್ತದೆ. ಡೊಳ್ಳು ಬಾರಿಸುತ್ತಾ, ಕುಣಿಯುತ್ತಾ, ಪರಸ್ಪರ ನೀರು ಎರಚಿಕೊಂಡು ಭಾರೀ ಮೋಜಿನಲ್ಲಿ ಹೋಳಿ ಆಡುತ್ತಾರೆ.

ಆದರೆ, ಆಶ್ಚರ್ಯವೆಂಬಂತೆ, ಈ ಪ್ರದೇಶದಲ್ಲಿ ಪುರುಷರು ಮತ್ತು ಮಹಿಳೆಯರು ಒಬ್ಬರಿಗೊಬ್ಬರು ಬಣ್ಣ(color) ಹಚ್ಚಬಾರದು. ಒಂದು ವೇಳೆ ಯುವಕ ಹುಡುಗಿಗೆ ಬಣ್ಣ ಹಚ್ಚಿದರೆ, ಅವರಿಬ್ಬರು ಮದುವೆ ಆಗಬೇಕು. ಇಲ್ಲಿ ಹುಡುಗಿಗೆ ಹುಡುಗ ಏನಾದ್ರೂ ಮೋಸ ಮಾಡಿದ್ರೆ ಹುಡುಗನ ಆಸ್ತಿಗಳೆಲ್ಲಾ ಬರೆದು ಕೊಡಬೇಕು. ಇದು ಜಾರ್ಖಂಡ್‌ನ ಸಂಪ್ರದಾಯವಾಗಿದೆ.

ಬಹ ಪರ್ವದ ಉತ್ಸವದಲ್ಲಿ, ಸಂತಾಲರು ಸಾಲ್ ಮರದ ಹೂವುಗಳು ಮತ್ತು ಎಲೆಗಳನ್ನು ಧರಿಸುತ್ತಾರೆ. ಈ ವೇಳೆ ಪೂಜಿಸುವ ವ್ಯಕ್ತಿಯನ್ನು ನಾಯಕಿ ಬಾಬಾ ಎಂದು ಕರೆಯಲಾಗುತ್ತದೆ. ಪೂಜೆಯ ನಂತರ ಸುಖ, ಮೋಹ ಮತ್ತು ಸಾಲ್ ಮರದ ಹೂವುಗಳನ್ನು ನೀಡಲಾಗುತ್ತದೆ. ಈ ಎಲ್ಲಾ ಪೂಜೆ ಮುಗಿದ ನಂತರ ಮದುವೆಗಳೂ ನಡೆಯುತ್ತವೆ. ಒಟ್ಟಾರೆ ಇಲ್ಲಿನ ಯುವಕರು ಯುವತಿಯರ ಜೊತೆ ಬಣ್ಣ ಎರಚಿಕೊಂಡು ಹೋಳಿ ಆಡುವಂತಿಲ್ಲ.

You may also like

Leave a Comment