Home » New Delhi: ಪತಿ ಸ್ನಾನ ಮಾಡುವುದಿಲ್ಲ, ವಿಚ್ಛೇದನ ಕೊಡಿ ಎಂದ ಮಹಿಳೆ; ಕೋರ್ಟ್ ಕೊಟ್ಟ ವಿಶಿಷ್ಟ ತೀರ್ಪೇನು ಗೊತ್ತೇ?

New Delhi: ಪತಿ ಸ್ನಾನ ಮಾಡುವುದಿಲ್ಲ, ವಿಚ್ಛೇದನ ಕೊಡಿ ಎಂದ ಮಹಿಳೆ; ಕೋರ್ಟ್ ಕೊಟ್ಟ ವಿಶಿಷ್ಟ ತೀರ್ಪೇನು ಗೊತ್ತೇ?

1 comment
New Delhi

ನವದೆಹಲಿ: ಪ್ರತಿಯೊಬ್ಬ ಮನುಷ್ಯ ನು ತನ್ನನ್ನು ತಾನು ಸ್ವಚ್ಚವಾಗಿಟ್ಟುಕೊಳ್ಳುವುದು ಅವನ ಕರ್ತವ್ಯ. ಕಾಲಕ್ಕೆ ತಕ್ಕಂತೆ ಬೇಸಿಗೆಯಲ್ಲಿ ದಿನಕ್ಕೆ ಒಂದೆರಡ ಬಾರಿಯಾದರೂ ಜಳಕ ಮಾಡುವುದುಂಟು. ಚಳಿಗಾಲದಲ್ಲಿ ಇದರ ಪ್ರಮಾಣ ಗಣನೀಯವಾಗಿ ಕಡಿಮೆಯಾಗುತ್ತದೆ.

ಒಂದಷ್ಟು ಮಂದಿ 5-6 ದಿನಗಳಿಗೆ ಒಮ್ಮೆ ಸ್ನಾನ ಮಾಡುತ್ತಾರೆ. ಒಂದು ವೇಳೆ ನೀವು ಸ್ನಾನ ಮಾಡುವುದಿಲ್ಲ ಎಂದು ಪ್ರಕರಣ ದಾಖಲಿಸಿದರೆ ಏನಾಗುತ್ತದೆ ಎಂಬುದನ್ನು ನೋಡೋಣ.

ಕೆಲಸ ದಿನಗಳ ಹಿಂದೆ ಟರ್ಕಿಯ ಮಹಿಳೆಯೊಬ್ಬಳು ತನ್ನ ಗಂಡ ಸರಿಯಾಗಿ ಸ್ನಾನ ಮಾಡುವುದಿಲ್ಲ ಎಂದು ವಿರುದ್ಧವೇ ಪ್ರಕರಣ ದಾಖಲು ಮಾಡಿದ್ದಳು.

ಅವರು ವಾರಕ್ಕೆ 2 ಬಾರಿ ಮಾತ್ರ ಸ್ನಾನ ಮಾಡುತ್ತಾರೆ. ಇದರಿಂದಾಗಿ ಅವರ ದೇಹದಲ್ಲಿ ಬೆವರಿನ ವಾಸನೆ ಬರುತ್ತದೆ. ವಾರಕ್ಕೆ ಒಮ್ಮೆ ಹಲ್ಲು ಹುಜ್ಜುತ್ತಾರೆ ಎಂದು ಹೇಳಿಕೊಂಡಿದ್ದಾಳೆ. ವರದಿಯ ಪ್ರಕಾರ ವೈಯಕ್ತಿಕ ನೈರ್ಮಲ್ಯದ ಕೊರತೆಯನ್ನು ಉಲ್ಲೇಖ ಮಾಡಿ ತನ್ನ ಪತಿ ವಿರುದ್ಧ ವಿಚ್ಛೇದನ ಪ್ರಕರಣವನ್ನು ದಾಖಲಿಸಿರುವುದಾಗಿ’ ಮಹಿಳೆ ಟರ್ಕಿಶ್ ಮಾಧ್ಯಮಕ್ಕೆ ಹೇಳಿಕೊಂಡಿದ್ದಾರೆ. ಮಹಿಳೆಯ ಪರ ವಿರುವ ವಕೀಲ 19 ನೆ ಕೌಟುಂಬಿಕ ನ್ಯಾಯಾಲಯಕ್ಕೆ ಅವಳ ಪತಿ ಐದು ದಿನಗಳು ಕಳೆದರೂ ಸ್ನಾನ ಮಾಡಿಲ್ಲ. ಅದೇ ಬಟ್ಟೆಯಲ್ಲಿ ಇರುವುದರಿಂದ ಬೆವರಿನ ವಾಸನೆ ಬೀರುತ್ತಿದೆ ಎಂದು ಹೇಳಿಕೊಂಡಿದ್ದಾರೆ.

ಪರಿಹಾರ ಒದಗಿಸುವಂತೆ ಕೋರ್ಟ್ ಆದೇಶ:

ವರದಿಗಳ ಪ್ರಕಾರ ಪತಿಯೊಂದಿಗೆ ಜೊತೆಗಿದ್ದ ಸಹೋದ್ಯೋಗಿಗಳು ಮತ್ತು ಇತರ ಸ್ನೇಹಿತರನ್ನು ಸಾಕ್ಷಿಗಳಾಗಿ ನ್ಯಾಯಾಲಯಕ್ಕೆ ಕರೆಯಲಾಗಿದೆ. ಇವರೆಲ್ಲರೂ ಪತಿಯ ನೈರ್ಮಲ್ಯವನ್ನು ಸತ್ಯ ಎಂದು ಸಾಕ್ಷ ನೀಡಿ ಪರಿಗಣಿಸಿದರು. ನಂತರ ನ್ಯಾಯಾಲಯವು ಮಹಿಳೆಗೆ ವಿಚ್ಛೇದನವನ್ನು ನೀಡಿತು. ಅಲ್ಲದೆ 16,500 ಡಾಲರ್ ಪಾವತಿಸುವಂತೆ ಅಂದರೆ ಸುಮಾರು ರೂ. ಪರಿಹಾರವಾಗಿ 13 ಲಕ್ಷ 69 ಸಾವಿರ ರೂ. ಪತಿಗೆ ನೀಡುವಂತೆ ತೀರ್ಪು ನೀಡಿತು.

ವಾರಕ್ಕೆ ಒಂದೆರಡು ಬಾರಿ ಬ್ರಷ್

ಮಹಿಳೆಯ ಪತಿ ಆರು ಏಳು ದಿನಗಳಿಗೆ ಒಮ್ಮೆ ಸ್ನಾನ ಮಾಡುತ್ತ, ವಾರಕ್ಕೆ ಎರಡು ಬಾರಿ ಅಥವಾ ಒಂದು ಬಾರಿ ಹಲ್ಲು ಹುಜ್ಜುತ್ತಿದ್ದರು. ಇದರಿಂದ ದುರ್ವಾಸನೆ ಬರುತ್ತಿತ್ತು. ಇದರಿಂದ ಮಹಿಳೆಯ ಬದುಕು ದುಸ್ತರ ಗೊಳಿಸಿದೆ ಎಂದು ನ್ಯಾಯಾಲಯವು ಸಾಕ್ಷಾಧಾರಗಳನ್ನು ಪರಿಗಣಿಸಿ ತೀರ್ಪು ನೀಡಿತು. ಮಹಿಳಾ ಪರ ವಕೀಲರು ಟರ್ಕಿಯ ಪತ್ರಿಕೆಯೊಂದಕ್ಕೆ ಮಾಹಿತಿ ನೀಡಿ, ಗಂಡ ಹೆಂಡತಿ ಇಬ್ಬರೂ ಜೀವನದಲ್ಲಿ ತಮ್ಮ ತಮ್ಮ ಜವಾಬ್ದಾರಿಗಳನ್ನು ಪೂರೈಸಬೇಕು. ವ್ಯಕ್ತಿಯಿಂದ ಅಸಹನೆ ಮೂಡಿದರೆ ವಿಚ್ಛೇದನಕ್ಕೆ ಅರ್ಜಿ ಹಾಕಲು ಅವಕಾಶವಿದೆ. ಮಾನವ ಸಂಬಂಧದಲ್ಲಿ ನಾವೆಲ್ಲರೂ ಜಾಗರೂಕರಾಗಬೇಕು ಎಂದು ತಿಳಿಸಿದ್ದಾರೆ.

You may also like

Leave a Comment