Hindu: ಪ್ರತಿಯೊಂದು ಧರ್ಮಕ್ಕೂ ತನ್ನದೇ ಆದ ಆಧ್ಯಾತ್ಮಿಕ ಸಂಕೇತಗಳಿರುತ್ತವೆ. ಅವು ಕೇವಲ ಚಿನ್ಹೆಗಳಲ್ಲ, ಬದುಕಿನ ತತ್ವ ಮತ್ತು ದೈವೀ ಶಕ್ತಿಯ ಪ್ರತಿನಿಧಿಗಳೂ ಆಗಿವೆ. ಹಿಂದು ಧರ್ಮದಲ್ಲಿಯೂ ಹಲವು ಆಧ್ಯಾತ್ಮಿಕ ಸಂಕೇತಗಳಿದ್ದು, ಪ್ರತಿಯೊಂದು ಸಂಕೇತಕ್ಕೂ ತನ್ನದೇ ಆದ ಕಥೆಗಳು, ತತ್ವಗಳು ಮತ್ತು ಧನಾತ್ಮಕ ಶಕ್ತಿಯ ಪರಿಚಯವಿದೆ. ಇಲ್ಲಿದೆ ಅಂತಹ ಕೆಲವು ಪ್ರಮುಖ ಸಂಕೇತಗಳ ವಿವರ.
ಸ್ವಸ್ತಿಕ್ :
ಹೊಸ ಆರಂಭಗಳ ಶುಭ ಸಂಕೇತವೆಂದರೆ ಸ್ವಸ್ತಿಕ್. ಯಾವುದೇ ಹೊಸ ಕಾರ್ಯಾರಂಭದಲ್ಲಿ ಇದನ್ನು ಬಳಸಿ ಧನಾತ್ಮಕ ಶಕ್ತಿ ಬಳಸಲಾಗುತ್ತೆ. ಇದು ಯಶಸ್ಸು ಹಾಗೂ ಸಮೃದ್ಧಿಯ ಸಂಕೇತವಾಗಿದೆ.
ಓಂಕಾರ:
ಹಿಂದು (Hindu) ಧರ್ಮದ ಮೂಲಭೂತ ಸಂಕೇತವೆಂದರೆ ಓಂಕಾರ. ಇದು ಜಗತ್ತಿನ ಮೊದಲ ಶಬ್ದ ಎಂದು ಪುರಾಣಗಳಲ್ಲಿ ಉಲ್ಲೇಖವಿದೆ. ಓಂಕಾರದ ಜಪದಿಂದ ದೇಹ ಮತ್ತು ಮನಸ್ಸಿಗೆ ಶಾಂತಿ ದೊರಕುತ್ತದೆ ಹಾಗೂ ಧನಾತ್ಮಕ ಶಕ್ತಿಯ ವಾತಾವರಣ ನಿರ್ಮಾಣವಾಗುತ್ತದೆ.
ತ್ರಿಶೂಲ:
ಭಗವಾನ್ ಶಿವನ ದೈವಿಕ ಆಯುಧವಾದ ತ್ರಿಶೂಲವು ನಿರ್ಭಯತೆ, ಸಂರಕ್ಷಣೆ ಹಾಗೂ ದುಷ್ಟ ಶಕ್ತಿಗಳ ನಾಶದ ಸಂಕೇತವಾಗಿದೆ.
ಅದರ ಮೂರು ಅಂಚುಗಳು ಸೃಷ್ಟಿ, ಸ್ಥಿತಿ ಮತ್ತು ಲಯವನ್ನು ಪ್ರತಿನಿಧಿಸುತ್ತವೆ. ಶಿವನ ಶಕ್ತಿಯ ಪ್ರತೀಕವಾಗಿ ಇದನ್ನು ಪೂಜಿಸಲಾಗುತ್ತದೆ.
ಶ್ರೀಯಂತ್ರ:
ಸಂಪತ್ತು, ಅದೃಷ್ಟ ಮತ್ತು ಸಮೃದ್ಧಿಯನ್ನು ತರಲು ಬಳಸುವ ಅತ್ಯಂತ ಶಕ್ತಿಶಾಲಿ ಸಂಕೇತವೆಂದರೆ ಶ್ರೀಯಂತ್ರ. ಮಹಾಲಕ್ಷ್ಮಿಯ ರೂಪವೆಂದು ಇದನ್ನು ಪೂಜಿಸಲಾಗುತ್ತದೆ.
ವಟವೃಕ್ಷ:
ಆಲದ ಮರ ದೀರ್ಘಾಯುಷ್ಯ, ಜ್ಞಾನ ಮತ್ತು ಆರೋಗ್ಯದ ಸಂಕೇತವಾಗಿದೆ. ಮಕ್ಕಳಾಗದ ಮಹಿಳೆಯರು ಸಂತಾನ ಭಾಗ್ಯಕ್ಕಾಗಿ ಇದನ್ನು ಆರಾಧಿಸುತ್ತಾರೆ.
ಶಂಖ:
ಪರಿಶುದ್ಧತೆ, ವಿಜಯ ಮತ್ತು ಹೊಸ ಆರಂಭದ ಸಂಕೇತವೆಂದರೆ ಶಂಖ. ವಿಷ್ಣುವಿನ ಕೈಯಲ್ಲಿ ಶಂಖವಿರುವುದು ದೈವೀ ಶಕ್ತಿಯ ಪ್ರತಿನಿಧಿ.
ಇದನ್ನೂ ಓದಿ;ಕಾಂತಾರ 1 ಸಿನೆಮಾದ ಆ 9 ಘೋರ ತಪ್ಪುಗಳು: ಅಂದುಕೊಂಡ ಹಾಗೆ ಚಿತ್ರ ಬಾರದೇ ಇದ್ದದ್ದಕ್ಕೆ ಅದೇ ಕಾರಣ?
