Home » ವಿವಾಹಿತ ಮಹಿಳೆಯರು ಗೂಗಲ್ ನಲ್ಲಿ ಏನೆಲ್ಲ ವಿಷಯ ಹುಡುಕುತ್ತಾರೆ ಗೊತ್ತೇ ? ಇಲ್ಲಿದೆ ಓದಿ

ವಿವಾಹಿತ ಮಹಿಳೆಯರು ಗೂಗಲ್ ನಲ್ಲಿ ಏನೆಲ್ಲ ವಿಷಯ ಹುಡುಕುತ್ತಾರೆ ಗೊತ್ತೇ ? ಇಲ್ಲಿದೆ ಓದಿ

0 comments
Married Women

Married Women : ಇಂದಿನ ಕಾಲದಲ್ಲಿ ಜನರು ತಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರಗಳನ್ನು ತಿಳಿಯಲು ಗೂಗಲ್‌ನ ಸಹಾಯವನ್ನು ತೆಗೆದುಕೊಳ್ಳುತ್ತಾರೆ. ಗೂಗಲ್ ಆಪ್ತಮಿತ್ರನ ಥರ. ಏನೇ ಕೇಳಿದರೂ ಇಲ್ಲ ಎನ್ನದೆ, ಒಂದಷ್ಟು ಸಲಹೆ ನೀಡಿ ಸಲಹುವ ಸಲಹೆಗಾರ ಕೂಡಾ. ಈಗ ಮದುವೆಯಾಗಿರುವ ಅಥವಾ ಮದುವೆಯಾಗಲಿರುವ ಮಹಿಳೆಯರು ಖಂಡಿತವಾಗಿಯೂ ಗೂಗಲ್‌ನಲ್ಲಿ ಕೆಲವು ವಿಷಯಗಳನ್ನು ಹುಡುಕುತ್ತಾರೆ. ವಿವಾಹಿತ ಮಹಿಳೆಯರು( Married Women Married Women )ತಿಳಿದುಕೊಳ್ಳಲು ಬಯಸುವ ಗೂಗಲ್‌ನ ಹುಡುಕಾಟದ ಪಟ್ಟಿಯನ್ನು ಎತ್ತಿ ಕೊಟ್ಟಿದೆ ಗೂಗಲ್.

ಹಾಗಾದರೆ ಮಹಿಳೆಯರು ಗೂಗಲ್ಲಿನಲ್ಲಿ ಏನು ಹುಡುಕಿದ್ದಾರೆ ಎಂದು ನೋಡಿದರೆ, ಮಹಿಳೆಯರು ಗಂಡನ ಜೊತೆ ಹೇಗಿದ್ದರೆ ಚಂದ, ಅತ್ತೆಯೊಂದಿಗೆ ಹೇಗೆ ವರ್ತಿಸಬೇಕು, ಮನೆಯನ್ನು ನಿಭಾಯಿಸುವುದು ಹೇಗೆ ಮೊದಲಾದ ವಿಚಾರವನ್ನು ಮಹಿಳೆಯರು ಗೂಗಲ್ ನಲ್ಲಿ ಹುಡುಕುತ್ತಾರಂತೆ !

ವಿವಾಹಿತ ಮಹಿಳೆಯರು  ತಮ್ಮ ಪತಿಗೆ ಸಂಬಂಧಿಸಿದ ಮಾಹಿತಿಯನ್ನು ಗೂಗಲ್‌ನಲ್ಲಿ ಕಲೆ ಹಾಕಲು ಬಯಸುತ್ತಾರೆ ಎಂಬುದು ಗೂಗಲ್ ನೀಡಿದ ಮಾಹಿತಿಯಿಂದ ಬಹಿರಂಗವಾಗಿದೆ. ಅಷ್ಟೇ ಅಲ್ಲದೆ ಕೆಲವು ವಿವಾಹಿತ ಮಹಿಳೆಯರು ತಮ್ಮ ಪತಿ, ತನ್ನ ಮಾತನ್ನು ಕೇಳುವ ಹಾಗೆ ಏನು ಮಾಡುವುದು ? ಎಂದೂ ಬಹುಮಂದಿ ಹುಡುಕಿದ್ದಾರಂತೆ. ಜತೆಗೆ ಆ ಮಹಿಳೆಯರು ಪುರುಷರ ಸ್ವಭಾವ, ಪುರುಷರ ಇಷ್ಟ ಕಷ್ಟಗಳ ಬಗ್ಗೆ ಗೂಗಲ್‌ನಲ್ಲಿ ಹುಡುಕಿ ತಿಳಿದುಕೊಳ್ಳಲು ಯತ್ನಿಸುತ್ತಾಳಂತೆ !

ವಿವಾಹಿತ ಮಹಿಳೆಯರು ತಮಗೆ ಮಗುವಾಗಲು ಯಾವ ಸಮಯ ಸರಿಯಾಗಬಹುದು, ಮಗು ಯಾವಾಗ ಬೇಕು ಎಂಬ ನಿರ್ಧಾರ ಹೇಗೆ ಮಾಡುವುದು ಎಂದು ಹುಡುಕುತ್ತಾರಂತೆ.

ಅಲ್ಲದೆ, ಇನ್ನೇನು ವಿವಾಹವಾಗಿ ಗಂಡನ ಮನೆಗೆ ಸೇರಿಕೊಳ್ಳಬೇಕಾದ ಮಹಿಳೆ, ಹೊಸ ವಾತಾವರಣದಲ್ಲಿ ಹೊಂದಿಕೊಳ್ಳುವುದು ಹೇಗೆ, ಮನೆಯವರ ಜೊತೆ ಬೆರೆತು ಸುಖವಾಗಿ ಸಂಸಾರ ನಡೆಸುವುದು, ಅಲ್ಲದೆ ಗಂಡನನ್ನು ತನ್ನ ಕಂಟ್ರೋಲ್ನಲ್ಲಿ ಇಟ್ಟುಕೊಳ್ಳುವುದು ಹೇಗೆ ? ಇದರೆಲ್ಲರ ಬಗ್ಗೆ ಕೂಡಾ ಗೂಗ್ಲ್ ಮಾಡ್ತಾಳಂತೆ.

ಒಟ್ಟಾರೆಯಾಗಿ ವಿವಾಹಿತ ಮಹಿಳೆ ತನ್ನ ಕುಟುಂಬ ನಿರ್ವಹಣೆ ಮತ್ತು ಹೇಗೆ ಹಸ್ಬೆಂಡ್ ಮ್ಯಾನೇಜ್ಮೆಂಟ್ ಮಾಡಬೇಕೆನ್ನುವುದನ್ನು ತಿಳಿದುಕೊಳ್ಳಲು, ಕಲಿಯಲು ಉತ್ಸುಕಳಾಗಿರುವ ವಿಷಯವನ್ನು ಗೂಗಲ್ ಈಗ ಹಂಚಿಕೊಂಡಿದೆ.

You may also like

Leave a Comment