Home » ಈ ‘ ಭೀಮ’ನ ಬೆಲೆ ಬರೋಬ್ಬರಿ 10 ಕೋಟಿ!!!

ಈ ‘ ಭೀಮ’ನ ಬೆಲೆ ಬರೋಬ್ಬರಿ 10 ಕೋಟಿ!!!

0 comments

ದಸರಾ ಅಂಗವಾಗಿ ರಾಜ್ಯಮಟ್ಟದ ಶ್ವಾನ ಪ್ರದರ್ಶನವನ್ನು ಶಿವಮೊಗ್ಗದಲ್ಲಿ ಸ್ಪರ್ಧೆಯೊಂದನ್ನು ಏರ್ಪಡಿಸಲಾಗಿತ್ತು. ರವಿವಾರ ನಡೆದ ಶ್ವಾನ ಪ್ರಿಯರ ಆಕರ್ಷಣೆಯ ತಾಣವಾಗಿದ್ದ ಶಿವಮೊಗ್ಗದ ಗಾಂಧಿ ಪಾರ್ಕ್ ನಲ್ಲಿ ಉಡುಪಿ, ಮಂಗಳೂರು, ದಾವಣಗೆರೆ, ಹುಬ್ಬಳ್ಳಿ, ಭದ್ರಾವತಿಯಿಂದ ಹಲವು ಜನರು ತಮ್ಮ ನಾಯಿಗಳೊಂದಿಗೆ ಭಾಗವಹಿಸಿದ್ದರು.ಹಲವಾರು ಜಾತಿಯ ನಾಯಿಗಳಿದ್ದು ಇಲ್ಲಿ ಹಕ್ಕಿ, ಜರ್ಮನ್ ಶೆಫರ್ಡ್, ಪಮೋರಿಯನ್ ಮುಧೋಳ, ಗೋಲ್ಡನ್ ರಿಟ್ರೇವರ್, ರಾಟ್ ವಿಲ್ಲರ್ ಫಗ್ ಸಹಿತ ಪ್ರಮುಖವಾದ 15 ಬಗೆಯ ನಾಯಿಗಳಿದ್ದವು.ವಿಶೇಷವೆಂದರೆ ಬೆಂಗಳೂರಿನ ನಟ ಹಾಗೂ ಇಂಡಿಯನ್ ಡಾಗ್ ಬ್ರಿಡರ್ ಅಸೋಸಿಯೇಶನ್ಸ್ ಅಧ್ಯಕ್ಷ ಸತೀಶ್ ಅವರು ಕರೆತಂದ ಟಿಬೇಟಿಯನ್ ಮೂಲದ ಮಸ್ತಿಫ್ ‘ಭೀಮ’ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದು, ಸುಮಾರು 10 ಕೋಟಿ ರೂ. ಬೆಲೆಬಾಳುವ ನಾಯಿಯಾಗಿತ್ತು. ಈ ‘ಭೀಮ’ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದು, ಇದನ್ನು ನೋಡಲು ಸಾವಿರಾರು ಜನ ಆಗಮಿಸಿದ್ದರು. ಭೀಮನಿಗೆ ತಿಂಗಳಿಗೆ ಸುಮಾರು 50 ಸಾವಿರ ಖರ್ಚು ಮಾಡುವುದಾಗಿ ಮತ್ತು ಬೀಜಿಂಗ್‌ನಿಂದ ತರಿಸಿಕೊಂಡಿದ್ದೇನೆ. ಅಲ್ಲದೆ ಈ ನಾಯಿಗೆ ಎರಡೂವರೆ ವರ್ಷ ವಯಸ್ಸು ಆಗಿರುತ್ತದೆ. ಪ್ರತಿ ದಿನ ಚಿಕನ್ ನೀಡುತ್ತೇನೆ ಹಾಗೂ ಯಾವಾಗಲೂ ಎಸಿ ರೂಮ್‌ನಲ್ಲೇ ಇರಿಸಬೇಕು ಎಂದು ನಾಯಿಯ ಮಾಲೀಕ ಸತೀಶ್ ಅವರು ಮಾಹಿತಿ ನೀಡಿದ್ದಾರೆ.

You may also like

Leave a Comment