Dr Broo: ಡಾಕ್ಟರ್ ಬ್ರೋ ಅಲಿಯಾಸ್ ಗಗನ್ ಶ್ರೀನಿವಾಸ್ ಎಂದರೆ ಕನ್ನಡಿಗರಿಗೆಲ್ಲ ಅದೇನೋ ಅಚ್ಚುಮೆಚ್ಚು. ನಮಸ್ಕಾರ ದೇವರು ಎನ್ನುತ್ತಾ ಇಡೀ ವಿಶ್ವವನ್ನು ಕನ್ನಡಿಗರಿಗೆ ತೋರಿಸಿದ ಹೆಮ್ಮೆಯ ಯುವಕ ಈತ. ಈತನ ಮಾತು ಕೇಳುತ್ತ ಆತ ಮಾಡುವ ಫ ವಿಡಿಯೋ ನೋಡುವುದೇ ಕನ್ನಡಿಗರಿಗೆ ಒಂದು ಖುಷಿ. ಡಾಕ್ಟರ್ ಬ್ರೋ(Dr Broo) ವಿಡಿಯೋ ಅಪ್ಲೋಡ್ ಮಾಡಿದ ಕೆಲವೇ ಕ್ಷಣಗಳಲ್ಲಿ ಅದು ಲಕ್ಷಗಟ್ಟಲೆ ವೀವ್ಸ್ ಪಡೆಯುತ್ತದೆ.
ಇದುವರೆಗೂ ಕೇವಲ ವಿಡಿಯೋ ಕ್ರಿಯೇಟರ್ ಆಗಿದ್ದ ಡಾ. ಬ್ರೋ ಅವರು ಇದೀಗ ಡಾಕ್ಟರ್ ಬ್ರೋ ಅವರು ಇದೀಗ ದೊಡ್ಡ ಉದ್ಯಮಿಯೂ ಕೂಡ ಹೌದು. ಬರೀ ಕ್ಯಾಮೆರಾ ಹಿಡ್ಕೊಂಡು ಟ್ರಾವೆಲ್ (Travel) ಮಾಡಿ ಜಗತ್ತು ತೋರಿಸೋದು ಮಾತ್ರ ಅಲ್ಲ, ಇವತ್ತು ಇವರು ಕೋಟಿ ಕೋಟಿ ವ್ಯವಹಾರ ನಡೆಸೋ ಉದ್ಯಮಿ ಕೂಡ ಆಗಿದ್ದಾರೆ. ಇದೀಗ ಈ ಎಲ್ಲ ವಿಚಾರವನ್ನು ಇಟ್ಟುಕೊಂಡು ಡಾಕ್ಟರ್ ಗುರು ಅವರ ಗಳಿಕೆ ಎಷ್ಟು ಎಂಬ ವಿಚಾರವನ್ನು ಚರ್ಚೆಯಾಗುತ್ತಿದೆ.
ಡಾ. ಬ್ರೋ ಅವರು ಸುಮ್ಮನೆ ವಿಡಿಯೋ ಮಾಡಿ ದುಡ್ಡು ಎಣಿಸ್ತಾ ಕೂರಲಿಲ್ಲ. ತಮ್ಮದೇ ಆದ ‘ಗೋ ಪ್ರವಾಸ’ (GoPravasa) ಅನ್ನೋ ಟ್ರಾವೆಲ್ ಕಂಪನಿ ಶುರು ಮಾಡಿದ್ರು. ಕಳೆದ ಎರಡು ವರ್ಷದಲ್ಲಿ ಬರೋಬ್ಬರಿ 3,000ಕ್ಕೂ ಹೆಚ್ಚು ಜನರಿಗೆ ದೇಶ-ವಿದೇಶ ಸುತ್ತಿಸಿದ್ದಾರೆ. ಸಿಕ್ಕಿರೋ ಮಾಹಿತಿ ಪ್ರಕಾರ, 2025ರ ಸಾಲಿನಲ್ಲಿ ಈ ಕಂಪನಿಯ ಆದಾಯ (Revenue) ಬರೋಬ್ಬರಿ 10 ಕೋಟಿ ರೂಪಾಯಿ ಮುಟ್ಟಿದೆಯಂತೆ!
ಈಗ ಅಸಲಿ ವಿಷ್ಯಕ್ಕೆ ಬರೋಣ. 2025ರಲ್ಲಿ ಡಾ. ಬ್ರೋ ಒಟ್ಟು ಗಳಿಕೆ ಎಷ್ಟಿರಬಹುದು? ಒಂದು ಕಡೆ ಕಂಪನಿಯ 10 ಕೋಟಿ ವಹಿವಾಟು. ಇನ್ನೊಂದೆಡೆ ಯೂಟ್ಯೂಬ್ ಮತ್ತು ಫೇಸ್‌ಬುಕ್ ವಿಡಿಯೋಗಳಿಂದ ಬರುವ ಜಾಹೀರಾತು ಹಣ. ಜೊತೆಗೆ ಬ್ರ್ಯಾಂಡ್ ಪ್ರಮೋಷನ್ ಬೇರೆ. ಇದೆಲ್ಲಾ ಲೆಕ್ಕ ಹಾಕಿದ್ರೆ, ಅವರ ವಾರ್ಷಿಕ ಗಳಿಕೆ ಆರಾಮಾಗಿ ಹಲವು ಕೋಟಿಗಳನ್ನ ಮೀರುತ್ತೆ
ಇನ್ನೂ ಈ ಯಶಸ್ಸಿನ ಹಿಂದಿರೋದು ಡಾ. ಬ್ರೋ ಅವರ ತಮ್ಮ ವಿಘ್ನೇಶ್. ಕೇವಲ 23 ವರ್ಷದ ವಿಘ್ನೇಶ್ ಈ ಕಂಪನಿಯ ಸಿಇಒ ಆಗಿ ಅದ್ಭುತವಾಗಿ ಕೆಲಸ ಮಾಡ್ತಿದ್ದಾರೆ. ಯುವಕರ ಟೀಮ್ ಕಟ್ಕೊಂಡು, ಜನರಿಗೆ ಬೆಸ್ಟ್ ಟ್ರಾವೆಲ್ ಅನುಭವ ನೀಡ್ತಿದ್ದಾರೆ. ಅಣ್ಣನ ಕ್ರೇಜ್ ಮತ್ತು ತಮ್ಮನ ಬ್ಯುಸಿನೆಸ್ ಮೈಂಡ್ ಸೇರಿದ್ರೆ ಏನಾಗುತ್ತೆ ಅನ್ನೋದಕ್ಕೆ ಇದೇ ಸಾಕ್ಷಿ.
