Marriage: ಸೋಷಿಯಲ್ ಮೀಡಿಯಾದಲ್ಲಿ ದಿನನಿತ್ಯ ಒಂದಲ್ಲ ಒಂದು ವಿಚಾರಗಳು ಹರಿದಾಡುತ್ತಲೇ ಇರುತ್ತವೆ. ಇದೀಗ ವೈರಲ್ ಆಗಿರುವ ವಿಚಾರದ ಬಗ್ಗೆ ಮಾಹಿತಿ ತಿಳಿದ್ರೆ ಬೆಚ್ಚಿಬೀಳ್ತೀರಾ!!. ಹೌದು, ಇಲ್ಲೊಬ್ಬ ವ್ಯಕ್ತಿ ಮಗ ಸತ್ತು ಹೋದ ನಂತರ ಆತನ ಪತ್ನಿ ಅಂದ್ರೆ ತನ್ನ ಸೊಸೆಯನ್ನೇ ಮದುವೆಯಾಗಿದ್ದಾನೆ.
ಮದುವೆ (Marriage) ಅನ್ನೋದು ಜೀವನದಲ್ಲಿ ಒಂದೇ ಬಾರಿ ಘಟಿಸುವ ಸುಂದರ ಘಟನೆ. ಇತ್ತೀಚೆಗೆ ಈ ಮದುವೆ ಕೆಲವರ ಜೀವನದಲ್ಲಿ ಒಂದಲ್ಲ ಹಲವು ಬಾರಿ ನಡೆಯುತ್ತಿದೆ. ಅದರಲ್ಲೂ ಈತ ತನ್ನ ಸೊಸೆಯನ್ನೇ ಮದುವೆಯಾಗಿರೋದು ಆಶ್ಚರ್ಯವೇ ಸರಿ. ಹೌದು, ಇವರ ಮದುವೆಯ ಫೋಟೋ ಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅಷ್ಟೇ ಅಲ್ಲಾ ವಿಡಿಯೋ ಕೂಡ. ವಿಡಿಯೋದಲ್ಲಿ ಮದುವೆ ಬಗ್ಗೆ ಏನು ಹೇಳಿದ್ದಾರೆ ಗೊತ್ತಾ?
ವಧು-ವರರಂತೆ ಮಾವ-ಸೊಸೆ ಗಂಡ ಹೆಂಡತಿಯಾಗಿ (husband and wife) ಕುತ್ತಿಗೆಗೆ ಹಾರ ಹಾಕಿಕೊಂಡಿದ್ದಾರೆ. ಇವರನ್ನು ಯಾರೋ ಮದುವೆಯ ಬಗ್ಗೆ ಪ್ರಶ್ನಿಸಿದ್ದು, ಅದಕ್ಕೆ ಉತ್ತರಿಸಿದ ಹುಡುಗಿ, “ ನನ್ನನ್ನು ನೋಡಿಕೊಳ್ಳಲು ಯಾರೂ ಇಲ್ಲದ ಕಾರಣ, ತನ್ನ ಇಚ್ಛೆಯ ಮೇರೆಗೆ ಮಾವನನ್ನು ಮದುವೆಯಾಗಿದ್ದೇನೆ” ಎಂದು ಹೇಳಿಕೊಂಡಿದ್ದಾಳೆ.
ಈ ಮಾತುಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದ್ದು, ವಿಡಿಯೋವನ್ನು ಯೂಟ್ಯೂಬ್ ನಲ್ಲಿ (youtube) ಅಪ್ಲೋಡ್ ಮಾಡಲಾಗಿದೆ. ನೆಟ್ಟಿರುವ ಆಶ್ಚರ್ಯ ಪಟ್ಟು ವಿಡಿಯೋ ವೀಕ್ಷಿಸುತ್ತಿದ್ದಾರೆ. ಹಾಗೇ ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ.
ಇದನ್ನು ಓದಿ: Karnataka Election: ಮೇ.10ರಂದು ಮತದಾನ ಮಾಡದವರಿಗೆ ಪ್ರವಾಸಿ ತಾಣಕ್ಕೆ ಪ್ರವೇಶ ಇಲ್ಲ
