Fire Breathing Peacock: ರಾಷ್ಟ್ರ ಪಕ್ಷಿ ನವಿಲನ್ನು ನೋಡುವುದೇ ಒಂದು ಚಂದ. ಗರಿ ಬಿಚ್ಚಿ ನರ್ತಿಸುವಾಗ ಇದರ ಸುಂದರ ರೂಪ ನೋಡಲು ಎರಡು ಕಣ್ಣು ಸಾಲದು. ಹೀಗೆ ತನ್ನ ಸುಂದರಿ ಮೈ ಬನ್ಣದಿಂದ ತನ್ನ ನಾಟ್ಯದಿಂದ ಎಲ್ಲರನ್ನು ಬೆಗಾಗಿಸುವ ನವಿಲು, ಬಾಯಲಿ ಬೆಂಕಿ ಉಗುಳುವುದನ್ನು(A (fire-breathing peacock )ನೀವು ಎಂದಾದರು ನೋಡಿದ್ದೀರಾ? ಇಲ್ಲವಾದಲ್ಲಿ ಈ ವಿಡಿಯೋ ನೋಡಿ ನೀವು ಕೂಡ ಶಾಕ್ ಆಗ್ತೀರ!
ಹೌದು, ಪುರಾಣ, ಸಿನಿಮಾ, ಕಥೆ, ಕಾರ್ಟೂನ್ ಗಳಲ್ಲಿ ಡ್ರ್ಯಾಗನ್, ಡೈನೋಸಾರ್ ನಂತಹ ಪ್ರಾಣಿಗಳು ಬೆಂಕಿ ಉಗುಳುವುದನ್ನು ನೋಡಿದ್ದೇವೆ. ಇದು ನಿಜವೋ ಸುಳ್ಳೋ ಎಂಬುದು ಸ್ಪಷ್ಟವಾಗಿಲ್ಲವಾದರೂ, ಈ ಪ್ರಾಣಿಗಳ ಅಸ್ತಿತ್ವದ ಕುರಿತು ಈಗಲೂ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಆದರೆ ಈ ನಡುವೆ, ಇಂದಿನ ಕಾಲದಲ್ಲಿ ಇದೇ ರೀತಿ ನವಿಲೊಂದು ಬಾಯಲ್ಲಿ ಬೆಂಕಿ ಉಗುಳುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಇದು ನೋಡುಗರನ್ನು ಮೂಕವಿಸ್ಮಿತರನ್ನಾಗಿಸಿದೆ.
ಅಂದಹಾಗೆ ವೈರಲ್ ಆದ ವಿಡಿಯೋದಲ್ಲಿರುವಂತೆ ನವಿಲು ಮೇಲಕ್ಕೆ ನೋಡಿ ಜೋರಾಗಿ ಕೂಗುತ್ತದೆ, ಈ ವೇಳೆ ಅದರ ಬಾಯಿಯಿಂದ ಬೆಂಕಿ ಹೊರಬರುತ್ತದೆ. ಈ ವಿಡಿಯೋ ಶೇರ್ ಆದ ಕೆಲವೇ ನಿಮಿಷಗಳಲ್ಲಿಯೇ ಸಿಕ್ಕಾಪಟ್ಟೆ ವೈರಲ್ ಆಗಿದ್ದು ತ್ವರಿತವಾಗಿ 1 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ, ಇನ್ನೂ ಈ ವಿಡಯೋ ನೋಡಿ ಅಚ್ಚರಿಗೊಂಡಿರುವ ನೆಟ್ಟಿಗರು ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.
ವಾಸ್ತವ ಏನು?
ನವಿಲು ವಾಸ್ತವವಾಗಿ ಬೆಂಕಿಯನ್ನು ಹೊರಸೂಸುವುದಿಲ್ಲ. ಅದು ಕಿರುಚಿದಾಗ ಸೂರ್ಯನ ಬೆಳಕಿನಿಂದ ಉಂಟಾದ ಪ್ರತಿಫಲನಗಳು ಬೆಂಕಿಯಂತೆ ಕಾಣುತ್ತವೆ ಎಂದು ಹೇಳಲಾಗಿದೆ. ಸಾಮಾನ್ಯವಾಗಿ ಚಳಿಗಾಲದಲ್ಲಿ ನಾವು ಉಸಿರಾಡಿದಾಗ ಬಾಯಿಂದ ಹೊಗೆ ಬರುತ್ತದೆ. ಇದೇ ರೀತಿಯ ನವಿಲಿನ ಶ್ವಾಸ ಮತ್ತು ಸೂರ್ಯ ಬೆಳಕು ನಮಗೆ ಬೆಂಕಿಯಂತೆ ಭಾಸವಾಗುತ್ತದೆ ಎಂದು ಹೇಳಲಾಗಿದೆ.
https://www.instagram.com/reel/CqwbFUqLJ9w/?igsh=Ym04NjFqemR5N3dx
