Puc Results 2024: ಕರ್ನಾಟಕ ಶಾಲಾ ಪರೀಕ್ಷಾ ಹಾಗೂ ಮೌಲ್ಯಾಂಕನ ಮಂಡಳಿ (KSEAB) ಯು 2023-24 ನೇ ಸಾಲಿನ ಫಸ್ಟ್ ಪಿಯುಸಿ ಪರೀಕ್ಷೆ ಫಲಿತಾಂಶವು ಮಾ.30 (ನಾಳೆ) ಪ್ರಕಟಿಸಲಿದೆ.
ಇದನ್ನೂ ಓದಿ: Crime: ಸ್ನೇಹಿತನ ಗುದದ್ವಾರಕ್ಕೆ ಗಾಳಿ ಬಿಟ್ಟ ಇನ್ನೋರ್ವ ಸ್ನೇಹಿತ; ಕರುಳು ಬ್ಲಾಸ್ಟ್, ಯುವಕ ಸಾವು
ವಿದ್ಯಾರ್ಥಿಗಳು ಮಂಡಳಿಯ ವೆಬ್‌ಸೈಟ್ karresults.nic.in ನಲ್ಲಿ ಫಲಿತಾಂಶವನ್ನು ಬೆಳಿಗ್ಗೆ 9 ರಿಂದ 11 ರೊಳಗೆ ಪ್ರಕಟವಾಗಲಿದೆ. ಫೆ.12 ರಿಂದ 27 ರವರೆಗೆ ಪಿಯುಸಿ ಪರೀಕ್ಷೆ ನಡೆದಿತ್ತು. ಇದೀಗ ಮೌಲ್ಯಮಾಪನ ಮುಗಿದಿದ್ದು, ಫಲಿತಾಂಶ ಪ್ರಕಟಿಸಲು ಮಂಡಳಿ ಮುಂದಾಗಿದೆ. ಮಂಡಳಿಯ ವೆಬ್‌ಸೈಟ್‌ನಲ್ಲಿಯೇ ಫಲಿತಾಂಶಗಳು ಲಭ್ಯವಿದೆ.
ಇದನ್ನೂ ಓದಿ: Bengaluru: ಬೆಂಗಳೂರಿನಲ್ಲಿ ಮೊತ್ತ ಮೊದಲ ಹಾರಾಟ ನಡೆಸಿದ LCA ತೇಜಸ್ ಮಾರ್ಕ್ 1A ಫೈಟರ್ ಏರ್ ಕ್ರಾಫ್ಟ್
ಮೊಬೈಲ್ ಇಲ್ಲವೇ ಇಂಟರ್‌ನೆಟ್ ಸೆಂಟರ್‌ನಲ್ಲಿ ಅಥವಾ ಮನೆಯಲ್ಲಿಯೇ ಕುಳಿತು ವಿದ್ಯಾರ್ಥಿಗಳು ಮಾ.30 ರಂದು ಫಲಿತಾಂಶ ವೀಕ್ಷಿಸಲು ಸಾಧ್ಯವಿದೆ. ನಾಳೆ ಕಾಲೇಜುಗಳಲ್ಲಿಯೂ ಫಲಿತಾಂಶಗಳನ್ನು ವಿದ್ಯಾರ್ಥಿಗಳು ವೀಕ್ಷಣೆ ಮಾಡಲು ಅವಕಾಶವಿದೆ.
ಮೇ ತಿಂಗಳಲ್ಲಿ ಅನುತ್ತೀರ್ಣರಾದವರಿಗೆ, ಅಥವಾ ಪರೀಕ್ಷೆ ಬರೆಯಲಾಗದವರಿಗೆ ಸಪ್ಲಿಮೆಂಟರಿ ಪರೀಕ್ಷೆ ನಡೆಯಲಿದೆ. ಈ ಕುರಿತು ಈಗಾಗಲೇ ವೇಳಾಪಟ್ಟಿ ಪ್ರಕಟ ಮಾಡಲಾಗಿದೆ. ಎ.20 ರವರೆಗೆ ಈ ಪರೀಕ್ಷೆಯ ಶುಲ್ಕ ಭರಿಸಲು ಅವಕಾಶ ಮಾಡಿಕೊಡಲಾಗಿದೆ ಎಂದು ಮಂಡಳಿ ಅಧಿಕಾರಿಗಳು ಹೇಳಿದ್ದಾರೆ.
