Home » ರೈತನಿಗೆ ಕಾರ್ ಖರೀದಿಸೋ ವಿಷಯದಲ್ಲಿ ಅವಮಾನ ಮಾಡಿದ ಶೋರೂಂ ಸಿಬ್ಬಂದಿ|ಮುಂದೆ ರೈತ ಕೊಟ್ಟ ಶಾಕ್ ನೋಡಿ ತಲೆ ಮೇಲೆ ಕೈ ಇಟ್ಟು ಕೂತ ಬಡಪಾಯಿ

ರೈತನಿಗೆ ಕಾರ್ ಖರೀದಿಸೋ ವಿಷಯದಲ್ಲಿ ಅವಮಾನ ಮಾಡಿದ ಶೋರೂಂ ಸಿಬ್ಬಂದಿ|ಮುಂದೆ ರೈತ ಕೊಟ್ಟ ಶಾಕ್ ನೋಡಿ ತಲೆ ಮೇಲೆ ಕೈ ಇಟ್ಟು ಕೂತ ಬಡಪಾಯಿ

0 comments

ರೈತ ದೇವರಿಗೆ ಸಮಾನ. ನಾವೆಲ್ಲ ಈಷ್ಟು ಭರ್ಜರಿ ಆಗಿ ಊಟ ಸೇವಿಸಬೇಕಾದ್ರೆ ಇದರ ಹಿಂದೆ ರೈತನ ಕೈ ಇರಲೇಬೇಕು.ಇಂದಿನ ಯುವ ಪೀಳಿಗೆಯ ಯುವ ಜನತೆ ರೈತರನ್ನ ತಾತ್ಸಾರ ಮಾಡೋರೇ ಜಾಸ್ತಿ. ಯಾರೊಬ್ಬರನ್ನೇ ಆಗಲಿ ಗೌರವದಿಂದ ಕಾಣೋದು ಮುಖ್ಯ. ಆತನ ಗುಣ-ನಡತೆ ನೋಡಬೇಕೆ ವಿನಃ ಆತನ ಉಡುಗೆ-ತೊಡುಗೆ ಅಲ್ಲ.

ಇಷ್ಟೆಲ್ಲಾ ವಿವರಣೆಯ ಹಿಂದೆ ಒಂದು ನೀತಿ ಕಥೆಯೇ ಇದೆ.ನೀವೆಲ್ಲರೂ ದಿಗ್ಗಜರು ಸಿನಿಮಾದಲ್ಲಿ ಅಂಬರೀಷ್​ ಮತ್ತು ವಿಷ್ಣುವರ್ಧನ್​ ಕಾರು ಖರೀದಿಸಲೆಂದು ಶೋ ರೂಂಗೆ ಹೋದಾಗ ಇವರ ಉಡುಗೆತೊಡುಗೆ ನೋಡಿ ಅಲ್ಲಿನ ಸಿಬ್ಬಂದಿ ಕೀಳಾಗಿ ಕಾಣುವ ದೃಶ್ಯ ನೋಡೇ ಇರುತ್ತೀರಲ್ಲ.ಇದನ್ನ ಈಗ ಯಾಕೆ ಹೇಳ್ತಿದ್ದೀವಿ ಅಂದ್ರೆ ಇಂತಹದ್ದೇ ಘಟನೆ ನಿಜವಾಗಿಯೇ ತುಮಕೂರು ಜಿಲ್ಲೆಯಲ್ಲಿ ಸಂಭವಿಸಿದೆ.

ಹೌದು.ಕಾರು ನೋಡಲು ಶೋ ರೂಂಗೆ ಸ್ನೇಹಿತರೊಂದಿಗೆ ಬಂದಿದ್ದ ಯುವ ರೈತನಿಗೆ ಸಿಬ್ಬಂದಿ ಅವಮಾನಿಸಿದ್ದಾರೆ. ಯುವಕನ ಬಟ್ಟೆ, ವೇಷಭೂಷಣ ನೋಡಿ ಹೀಯಾಳಿಸಿದ ಸಿಬ್ಬಂದಿ, ’10 ರೂಪಾಯಿ ಹಣ ಕೊಡುವ ಯೋಗ್ಯತೆ ಇಲ್ಲ, ನೀನು ಕಾರು ಖರೀದಿ ಮಾಡ್ತೀಯಾ?’ ಅಂತ ವ್ಯಂಗ್ಯವಾಡಿದ್ದಾರೆ. ಇವರ ಮಾತಿಗೆ ಸಿಟ್ಟಾದ ಯುವಕ, ‘ಒಂದೇ ಗಂಟೆಯಲ್ಲಿ ಹಣ ತರಿಸುವೆ. ಕಾರು ಡೆಲಿವರಿ ಕೊಡ್ತೀರಾ?’ ಎಂದು ಚಾಲೆಂಜ್ ಹಾಕಿದ್ದಾನೆ. ಅದರಂತೆ ಒಂದೇ ಗಂಟೆಯಲ್ಲಿ 10 ಲಕ್ಷ ಹಣ ತಂದು ಕಾರು ಡೆಲಿವರಿ ಕೊಡುವಂತೆ ಪಟ್ಟು ಹಿಡಿದ ಘಟನೆ ತುಮಕೂರಿನ ಮಹೇಂದ್ರಾ ಕಾರು ಶೋ ರೂಂನಲ್ಲಿ ನಿನ್ನೆ ಸಂಭವಿಸಿದೆ.

ಕಾರು ಖರೀದಿಸಲೆಂದು ತುಮಕೂರಿನ ಶೋ ರೂಂಗೆ ಬಂದ ವೇಳೆ ಸಿಬ್ಬಂದಿ ಮಾಡಿದ ಅವಮಾನಕ್ಕೆ ಪ್ರತ್ಯುತ್ತರ ಕೊಡಲು ಹೆಬ್ಬೂರು ಹೋಬಳಿಯ ರಾಮನಪಾಳ್ಯದ ಯುವಕ ಕೆಂಪೇಗೌಡ, ಒಂದೇ ಗಂಟೆಯಲ್ಲಿ 10 ಲಕ್ಷ ಹಣ ತರಿಸಿಬಿಟ್ಟ. ಇದನ್ನು ಕಂಡ ಶೋ ರೂಂ ಸಿಬ್ಬಂದಿ ಶಾಕ್​ ಆದರು. ಮೂರ್ನಾಲ್ಕು ದಿನಗಳ ಬಳಿಕ ಕಾರು ಡೆಲಿವರಿ ಕೊಡೋದಾಗಿ ಸಿಬ್ಬಂದಿ ಹೇಳುತ್ತಿದ್ದಂತೆ, ಗರಂ ಆದ ಯುವಕ, ಅವಮಾನಿಸುವ ಮುನ್ನ ಇದರ ಬಗ್ಗೆ ಅರಿವು ಇರಬೇಕಿತ್ತು. ನನಗೀಗ ಕಾರು ಬೇಕೇಬೇಕು ಅಂತಾ ಪಟ್ಟು ಹಿಡಿದಿದ್ದ.

ಈ ವೇಳೆ ಸಿಬ್ಬಂದಿ ಹಾಗೂ ಯುವಕನ ನಡುವೆ ಮಾತಿನ ಚಕಮಕಿ ನಡೆದಿದ್ದು, ಸ್ಥಳಕ್ಕೆ ಬಂದ ತಿಲಕ್ ಪಾರ್ಕ್ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು. ಸಿಬ್ಬಂದಿ ಹಾಗೂ ಯುವಕನ ಬಳಿ ಮುಚ್ಚಳಿಕೆ ಪತ್ರ ಬರೆಸಿಕೊಂಡು ಪ್ರಕರಣ ಇತ್ಯರ್ಥ ಪಡಿಸಿದರು.ಇದೇ ನೋಡಿ ನಾವು ಕಲಿಯಬೇಕಾದ ನೀತಿ..

You may also like

Leave a Comment