Home » ನಾಯಿ ಜೊತೆ ಕಪ್ಪೆಯ ಕಾದಾಟ| ಕಡೆಗೂ ಈ ಜಗಳದಲ್ಲಿ ಗೆದ್ದವರು ಯಾರು ?

ನಾಯಿ ಜೊತೆ ಕಪ್ಪೆಯ ಕಾದಾಟ| ಕಡೆಗೂ ಈ ಜಗಳದಲ್ಲಿ ಗೆದ್ದವರು ಯಾರು ?

0 comments

ಸಾಮಾಜಿಕ ಜಾಲತಾಣದಲ್ಲಿ ಪ್ರಾಣಿಗಳ ಕಾದಾಟದ ಹಲವು ವೀಡಿಯೋಗಳನ್ನು ನಾವು ಕಂಡಿದ್ದೇವೆ. ಕೆಲವೊಂದು ಎಷ್ಟೊಂದು ಸ್ವಾರಸ್ಯಕರವಾಗಿರುತ್ತದೆ ಅಂದರೆ ಅದನ್ನೇ ಮತ್ತೆ ಮತ್ತೆ ನೋಡು ಎಂದನಿಸುತ್ತದೆ. ಅಂಥದ್ದೇ ಒಂದು ವೀಡಿಯೋ ಈ ನಾಯಿ- ಕಪ್ಪೆ ಜಗಳದ್ದು.

ಈ ವೀಡಿಯೋದಲ್ಲಿ ಚಿಕ್ಕ ಕಪ್ಪೆ ಕಾಲು ಕೆರೆದು ನಾಯಿ ಮುಂದೆ ಜಗಳಕ್ಕೆ ನಿಲ್ಲುತ್ತದೆ. ಕಪ್ಪೆ ನಾಯಿಯೊಂದಿಗೆ ಜಗಳವಾಡುತ್ತಿರುವುದನ್ನು ಈ ವೀಡಿಯೋದಲ್ಲಿ ಕಾಣಬಹುದು. ಸಣ್ಣ ಕಪ್ಪೆಯೊಂದು ನಾಯಿಯನ್ನು ನಿಂತಲ್ಲಿ ಕುಂತಲ್ಲಿ‌ ಉಪದ್ರ ಕೊಡುತ್ತನೇ ಇದೆ. ಕಾಲು ಕೆರೆದು ಜಗಳಕ್ಕೇ ಬರುತ್ತಿದೆ. ನಾಯಿ ಪಾಡು ಮಾತ್ರ ನಗು ತರಿಸುತ್ತಿದೆ. ಮೊದಲು ನಾಯಿ ಕೂಡಾ ಕಪ್ಪೆಯ ಮೇಲೆ ಎರಗಲು ಬರುತ್ತದೆ. ಆದರೆ ಕಪ್ಪೆ ಸ್ವಲ್ಪವೂ ಹೆದರದೆ ಮತ್ತೆ ಮತ್ತೆ ನಾಯಿಯ ಮುಖದ ಮೇಲೆ ಹಾರಲು ಶುರು ಮಾಡುತ್ತದೆ.

ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.ಆತ್ಮವಿಶ್ವಾಸವಿದ್ದರೆ ಏನು ಬೇಕಾದರೂ ಸಾಧಿಸಬಹುದು ಎಂದು ಬರೆದಿದ್ದಾರೆ ಅನೇಕ ಮಂದಿ. ಅದರ ಜೊತೆ ಜೊತೆಗೆ ಕಪ್ಪೆಯ ಧೈರ್ಯವನ್ನು ಕೂಡಾ ಮೆಚ್ಚಿದ್ದಾರೆ.

You may also like

Leave a Comment