Gold-Silver Price : ಚಿನ್ನದ ಬೆಲೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಈಗಾಗಲೇ ಚಿನ್ನದ ದರಗು ಒಂದು ಲಕ್ಷವನ್ನು ಮೀರಿ ಏರಿಕೆ ಕಂಡಿದೆ. ಆದರೆ ಚಿನ್ನದ ದರ ಎಷ್ಟೇ ಏರಿಕೆ ಕಂಡರೂ ಕೂಡ ಅದನ್ನು ಕೊಳ್ಳುವವರ ಸಂಖ್ಯೆ ಹೆಚ್ಚುತ್ತಲೇ ಇದೆಯೇ ಹೊರತು ಕಡಿಮೆಯಾಗುತ್ತಿಲ್ಲ. ಈ ನಡುವೆ ಅಚ್ಚರಿ ವಿಚಾರವೊಂದು ಬಹಿರಂಗವಾಗಿದ್ದು ಇನ್ನೂ ಕೆಲವೇ ಸಮಯದಲ್ಲಿ ಚಿನ್ನ, ಬೆಳ್ಳಿಯ ದರ ಗಣನೀಯವಾಗಿ ಇಳಿಕೆ ಕಾಣಲಿದೆ ಎಂದು ಹೇಳಲಾಗುತ್ತಿದೆ.
ಹೌದು, ಚಿನ್ನದ ಬೆಲೆ ದಿನ ಹೋದಂತೆ ಏರಿಕೆಯಾಗುತ್ತಿರುವ ಬೆನ್ನಲ್ಲೇ, ತಜ್ಞರು ಶಾಕಿಂಗ್ ಹೇಳಿಕೆಯೊಂದನ್ನು ಕೊಟ್ಟಿದ್ದಾರೆ. ಅಂದ್ರೆ ಚಿನ್ನದ ಬೆಲೆ ಶೀಘ್ರದಲ್ಲೇ ಕುಸಿಯುವ ಸಾಧ್ಯತೆಯಿದೆ ಎಂದು ತಜ್ಞರು ಭವಿಷ್ಯ ನುಡಿದಿದ್ದಾರೆ. ಪೇಸ್ 360 ಸಂಸ್ಥೆಯ ಸಹ-ಸಂಸ್ಥಾಪಕ ಹಾಗೂ ಮುಖ್ಯ ಜಾಗತಿಕ ತಂತ್ರಜ್ಞಾನಿ ಅಮಿತ್ ಗೋಯಲ್ ಅವರು ಈ ಬೆಲೆಗಳ ಹೆಚ್ಚಳವು ದೀರ್ಘಕಾಲ ಉಳಿಯುವುದಿಲ್ಲ ಬೆಲೆ ನಿಗದಿಪಡಿಸುವ ವ್ಯವಸ್ಥೆಯಲ್ಲಿ ಬದಲಾವಣೆಯಾಗಿ ಪ್ರಮುಖ ಕುಸಿತ ಕಾಣಲಿದೆ ಎಂದು ಅವರು ಅಂದಾಜಿಸಿದ್ದಾರೆ.
ಜೂಲಿಯಸ್ ಬಾಯರ್ ಸಂಸ್ಥೆಯ ಎಕ್ಸಿಕ್ಯೂಟಿವ್ ಡೈರೆಕ್ಟರ್ ಮಿಲಿಂದ್ ಮುಚ್ಚಾಲ ಅವರ ಪ್ರಕಾರ ಚಿನ್ನದ ಬೆಲೆ ತೀಕ್ಷ್ಣವಾಗಿ ಇಳಿಕೆ ಆಗುವ ಸಾಧ್ಯತೆ ಕಡಿಮೆ. ಹೆಚ್ಚೆಂದರೆ 10-20 ಪ್ರತಿಶತದಷ್ಟು ಬೆಲೆ ಕಡಿಮೆ ಆಗಬಹುದು. ಜಾಗತಿಕ ಪರಿಸ್ಥಿತಿಯನ್ನು ಗಮನಿಸಿದರೆ ಇದಕ್ಕಿಂತ ಹೆಚ್ಚು ಬೆಲೆ ಇಳಿಕೆ ಸಾಧ್ಯತೆ ಇಲ್ಲ ಎಂಬುದು ಅವರ ಅನಿಸಿಕೆ. ಇನ್ನೊಂದು ಸಂಗತಿ ಎಂದರೆ, ಚಿನ್ನದ ಬೆಲೆ ಇಳಿಕೆ ಆದರೆ, ಬಹಳ ಬೇಗ ಮತ್ತೆ ಹೊಸ ಎತ್ತರಕ್ಕೆ ಹೋಗುವ ಅವಕಾಶ ಹೆಚ್ಚು ಎಂದಿದ್ದಾರೆ.
ಅಲ್ಲದೆ ಬೆಳ್ಳಿ ಬೆಲೆ ಇಳಿಕೆ ಸಾಧ್ಯತೆ ವಿಚಾರಕ್ಕೆ ಬರುವುದಾದರೆ, ಪ್ರಸಕ್ತ ಬೆಲೆಯುಬ್ಬರಕ್ಕೆ ಕಾರಣವಾಗಿರುವುದು ಹೂಡಿಕೆಗಳೆಯೇ. ಈ ಹೂಡಿಕೆ ವಾಪಸ್ ಹೋದರೆ ಬೆಳ್ಳಿ ಬೆಲೆ ಝರ್ರೆಂದು ಜಾರಬಹುದು. ಇಷ್ಟು ದಿಢೀರನೆ ಬೆಳ್ಳಿ ಬೆಲೆ ಜಾರದಂತೆ ಸೆಂಟ್ರಲ್ ಬ್ಯಾಂಕುಗಳು ಬಿಡದೇ ಹೋಗಬಹುದು ಎಂದು ಹೇಳಿದ್ದಾರೆ.
