Birds Vastu: ಸನಾತನ ಧರ್ಮದಲ್ಲಿ ಭೂಮಿಯ ಮೇಲಿನ ಎಲ್ಲಾ ಜೀವಿಗಳಿಗೆ ವಿಶೇಷ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಅದರಲ್ಲಿ ಪಕ್ಷಿಗಳು ಸಹ ಮನುಷ್ಯರ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಹೌದು, ಹಿಂದೂ ಧರ್ಮದಲ್ಲಿ ದೇವರುಗಳಲ್ಲದೆ, ಭೂಮಿ-ಆಕಾಶ, ಮರ-ಗಿಡಗಳು, ಪ್ರಾಣಿಗಳು ಮತ್ತು ಪಕ್ಷಿಗಳನ್ನು (Birds vastu) ಸಹ ಪೂಜಿಸಲಾಗುತ್ತದೆ.
ವಾಸ್ತು ಶಾಸ್ತ್ರವು ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ತರಲು ಮತ್ತು ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಪವಿತ್ರವೆಂದು ಪರಿಗಣಿಸಲಾದ ಕೆಲವು ಪಕ್ಷಿಗಳು ನಿಮ್ಮ ಅದೃಷ್ಟವನ್ನು ಬೆಳಗಿಸುವ ಸೂಚನೆಗಳನ್ನು ಸಹ ನೀಡುತ್ತವೆ ಎಂದು ಜ್ಯೋತಿಷಿಗಳು ತಿಳಿಸಿದ್ದಾರೆ . ಅಂತೆಯೇ ಅದೃಷ್ಟದ (Luck) ಪಕ್ಷಿಗಳು ಯಾವುವು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ(Vastu Tips).
ನೀವು ಗಿಳಿಗಳನ್ನು ನೋಡುವುದರಿಂದ ನಿಮ್ಮ ಅದೃಷ್ಟದ ಬಾಗಿಲು ತೆರೆಯುತ್ತೆ. ಗಿಳಿ ನೋಡುವುದು ಶಕುನ ಶಾಸ್ತ್ರದ ಪ್ರಕಾರ ಮಂಗಳಕರ ಸಂಕೇತವಾಗಿದೆ. ಇದರಿಂದ ಮನೆಯಲ್ಲಿ ಶುಭ ಕಾರ್ಯಗಳು ನಡೆಯುತ್ತವೆ.ವೈವಾಹಿಕ ಜೀವನದಲ್ಲಿ ಪ್ರೀತಿ ಹೆಚ್ಚಾಗಲಿದೆ.
ವಾಸ್ತು ಶಾಸ್ತ್ರದ ಪ್ರಕಾರ, ಕ್ವಿಲ್ ಪಕ್ಷಿ (Indian roller) ನಮ್ಮ ಮನೆಗೆ ಭೇಟಿ ನೀಡುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ನೀಲಿ ಗಂಟಲಿನ ಹಕ್ಕಿಯನ್ನು ಹಾಲು ಕ್ವಿಲ್ ಎಂದು ಕರೆಯಲಾಗುತ್ತದೆ.
ಸಾಮಾನ್ಯವಾಗಿ ಗೂಬೆಯನ್ನು ಮಹಾಲಕ್ಷ್ಮಿಯ ವಾಹನವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ನಿಮ್ಮ ಮನೆ, ಅಂಗಡಿ ಅಥವಾ ಇನ್ನಾವುದೇ ಆಸ್ತಿಯ ಬಳಿ ನೀವು ಗೂಬೆಯನ್ನು ಕಂಡರೆ, ಅಂದು ನಿಮಗೆ ಏನಾದರೂ ಒಳ್ಳೆಯದು ಸಂಭವಿಸುತ್ತದೆ ಎಂಬುದರ ಸಂಕೇತವಾಗಿದೆ.
ವಾಸ್ತು ಶಾಸ್ತ್ರದ ಪ್ರಕಾರ ಗುಬ್ಬಿ ಹಕ್ಕಿ ಶುಭ ವಾರ್ತೆ ನೀಡುವ ಮುನ್ಸೂಚನೆ ನೀಡುತ್ತದೆ. ನಿಮ್ಮ ಮನೆಯಲ್ಲಿ ಹಕ್ಕಿಯೊಂದು ಗೂಡುಕಟ್ಟಿದರೆ ಆ ಮನೆಯು ಶೀಘ್ರದಲ್ಲೇ ಸಂತೋಷದ ವಾತಾವರಣವನ್ನು ಹೊಂದಿರುತ್ತದೆ ಎಂಬುದರ ಸಂಕೇತವಾಗಿದೆ. ಅಂದರೆ ಮಗು ಹುಟ್ಟುವುದನ್ನು ಸಾಂಕೇತಿಕವಾಗಿ ಸೂಚಿಸುತ್ತದೆ.
ವಾಸ್ತು ಶಾಸ್ತ್ರದ ಪ್ರಕಾರ, ನೀವು ಕೋಳಿ ಕೂಗುವುದನ್ನು ಕೇಳಿದರೆ, ನೀವು ಶೀಘ್ರದಲ್ಲೇ ನಿಮ್ಮ ಹಳೆಯ ಸ್ನೇಹಿತರನ್ನು, ಹಳೆಯ ಸಹೋದ್ಯೋಗಿಗಳನ್ನು ಭೇಟಿಯಾಗುತ್ತೀರಿ ಎಂಬುದರ ಸಂಕೇತವಂತೆ!
ಇನ್ನು ಕಾಗೆಯು ಮನೆಗೆ ಅತಿಥಿಗಳು ಆಗಮಿಸುವುದನ್ನು ಸೂಚಿಸುತ್ತದೆ. ಕೆಲವು ಜ್ಯೋತಿಷಿಗಳ ಪ್ರಕಾರ ಕಾಗೆಗಳು ಮನೆಯೊಳಗೆ ಪ್ರವೇಶಿಸುವುದನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ.
ಇದನ್ನೂ ಓದಿ: Cat: ದಾರಿಯಲ್ಲಿ ಬೆಕ್ಕು ಅಡ್ಡಬಂದರೆ ನಿಜವಾಗಲೂ ಅಪಶಕುನವೇ! ಇದಕ್ಕೆ ಕಾರಣವೇನು ಗೊತ್ತಾ!
