Home » ವಧುವನ್ನೇ ಮೂಕವಿಸ್ಮಿತಗೊಳಿಸುವ ಅದ್ಭುತವಾದ ಸರ್ಪ್ರೈಸ್ ನೀಡಿದ ವರ! | ನೆರೆದ ಜನರನ್ನೂ ಖುಷಿ ಪಡಿಸಿದ ಆ ಸ್ಪೆಷಲ್ ಗೆಸ್ಟ್ ಯಾರು ಗೊತ್ತಾ?

ವಧುವನ್ನೇ ಮೂಕವಿಸ್ಮಿತಗೊಳಿಸುವ ಅದ್ಭುತವಾದ ಸರ್ಪ್ರೈಸ್ ನೀಡಿದ ವರ! | ನೆರೆದ ಜನರನ್ನೂ ಖುಷಿ ಪಡಿಸಿದ ಆ ಸ್ಪೆಷಲ್ ಗೆಸ್ಟ್ ಯಾರು ಗೊತ್ತಾ?

0 comments

ಮದುವೆ ಎಂಬುದು ಪ್ರತಿಯೊಬ್ಬರ ಜೀವನದ ಮುಖ್ಯವಾದ ಘಟ್ಟ. ಆದ್ದರಿಂದ ಪ್ರತಿಯೊಂದು ಜೋಡಿಯೂ ತಮ್ಮ ವಿವಾಹ, ಜೀವನ ಪರಿಯಂತ ಪ್ರತಿಯೊಂದು ಹೆಜ್ಜೆಯೂ ನೆನಪು ಉಳಿಯುವಂತೆ ಇರಬೇಕೆಂದು ಬಯಸುತ್ತಾರೆ. ಮದುವೆಯಂತೆಯೇ ನಿಶ್ಚಿತಾರ್ಥ ಕೂಡ, ಅಲ್ಲಿ ಖುಷಿ ಸಂಭ್ರಮ ಮನೆ ಮಾಡಿರುತ್ತದೆ. ಹೊಸ ಪರಿಚಯದ ಜನರೊಂದಿಗೆ ಹೊಸಜೀವನವನ್ನು ಪ್ರಾರಂಭಿಸುವ ನವಜೋಡಿಗೆ ಇದೊಂದು ಸಂತೋಷದ ದಿನವಾಗಿರುತ್ತದೆ. ಹೀಗಾಗಿ ಜೋಡಿಗಳು ಎಲ್ಲಾ ರೀತಿಯ ಪ್ಲಾನ್ ಗಳನ್ನು ಮುಂಚಿತವಾಗಿ ಮಾಡುತ್ತಾರೆ. ಕೆಲವರಿಗೆ ಬಂದ ಅತಿಥಿಗಳಿಗೆ ಯಾವ ರೀತಿ ಉಪಚಾರ ನೀಡುವುದು ಎಂದಾದರೆ, ಇನ್ನೂ ಕೆಲವರಿಗೆ ತಮ್ಮ ಡ್ರೆಸ್ಸಿಂಗ್, ಫೋಟೋಗ್ರಾಫರ್ ಬಗ್ಗೆ ಚಿಂತೆ.

ಅದರಂತೆ ವರ ವಧುವಿಗೆ ಸರ್ಪ್ರೈಸ್ ನೀಡುವ ಮೂಲಕ ಸ್ಪೆಷಲ್ ಗಿಫ್ಟ್ ಕೂಡ ನೀಡುತ್ತಾರೆ. ಆದ್ರೆ, ಇಲ್ಲೊಂದು ಕಡೆ ವರ ನೀಡಿರುವ ಸರ್ಪ್ರೈಸ್ ನೋಡಿ ಹುಡುಗಿಯೇ ಗಳ-ಗಳನೆ ಅತ್ತಿದ್ದಾಳೆ. ಅಷ್ಟೇ ಅಲ್ಲದೆ, ಇತರರ ಮನಸ್ಸಲ್ಲೂ ಉತ್ತಮವಾದ ಸ್ಥಾನವನ್ನು ವರ ಗಳಿಸಿಕೊಂಡಿದ್ದಾನೆ ಎಂದರೆ  ತಪ್ಪಾಗಲಾರದು. ಅಷ್ಟಕ್ಕೂ ಆತ ನೀಡಿದ ಸರ್ಪ್ರೈಸ್ ಏನು ಎಂಬುದನ್ನು ನೀವೇ ನೋಡಿ..

ಎಂಗೇಜ್‌ಮೆಂಟ್ ವೀಡಿಯೋವೊಂದು ಆನ್‌ಲೈನ್‌ನಲ್ಲಿ ವೈರಲ್ ಆಗುತ್ತಿದ್ದು, ಈ ದೃಶ್ಯದಲ್ಲಿ ವರನು ಮುಗುಳ್ನಗುತ್ತಿದ್ದರೆ, ವಧು ಕಣ್ಣೀರಿನಿಂದ ಕಣ್ತುಂಬಿಕೊಂಡಿದ್ದಾಳೆ. ಯಾಕಂದ್ರೆ ಅಲ್ಲಿ ನಡೆದಿದ್ದು ಅಂತಹ ಅದ್ಭುತವಾದ ಸಂಭ್ರಮ. ವರ ಕರೆಸಿದ ಅತಿಥಿಗಳು ಎಲ್ಲರ ಮನಸ್ಸಿಗೂ ಖುಷಿ ನೀಡುವವರಾಗಿದ್ದರು. ಹೌದು. ಟ್ವಿಟ್ಟರ್‌ನಲ್ಲಿ ದಿ ಫಿಗನ್‌ ಎಂಬ ಪುಟದಲ್ಲಿ ಹಂಚಿಕೊಂಡಿರುವ ವೀಡಿಯೋದಲ್ಲಿ ವರ, ವಧು ಎಂಗೇಜ್‌ಮೆಂಟ್‌ಗೆ ಸಿದ್ಧವಾಗಿ ನಿಂತಿರುತ್ತಾರೆ. ಈ ಸಂದರ್ಭದಲ್ಲಿ ವರ ಕೆಲವೊಬ್ಬರನ್ನು ವೇದಿಕೆಗೆ ಆಹ್ವಾನಿಸಿದ್ದು, ವಿಶೇಷ ಚೇತನ ಮಕ್ಕಳು ಹಾರವನ್ನು ಹಿಡಿದುಕೊಂಡು ಸ್ಟೇಜ್‌ಗೆ ಬರುತ್ತಾರೆ.

ವಿಶೇಷ ಚೇತನ ಮಕ್ಕಳು ಉಂಗುರ, ಹಾರಗಳನ್ನು ತಂದು ವಧು ವರರಿಗೆ ನೀಡುತ್ತಾರೆ. ವರ ಮತ್ತು ವಧು ಇಬ್ಬರೂ ಉಂಗುರ ತಂದ ಮಕ್ಕಳನ್ನು ಸಂತೋಷದಿಂದ ಬರಮಾಡಿಕೊಳ್ಳುತ್ತಾರೆ. ಪೋಸ್ಟ್‌ಗೆ ‘ ವಿಶೇಷ ಚೇತನ ಮಕ್ಕಳಿಗೆ ವರ, ಉಂಗುರಗಳನ್ನು ಒಯ್ಯುವ ಕೆಲಸವನ್ನು ನೀಡಿದ್ದಾನೆ. ಈ ಕ್ಷಣ ಎಷ್ಟು ಸುಂದರವಾಗಿದೆ’ ಎಂಬ ಶೀರ್ಷಿಕೆ ನೀಡಲಾಗಿದೆ. ವೀಡಿಯೊ ಈಗಾಗಲೇ 2 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ವೀಡಿಯೋ ನೋಡಿ ವಧುವಿನ ಜೊತೆಗೆ ಅಂತರ್ಜಾಲದ ಜನರೂ ಭಾವುಕರಾಗಿದ್ದಾರೆ.

https://twitter.com/TheFigen_/status/1584883247489888257?s=20&t=iW23mfbia5562ssuhJaEgQ

You may also like

Leave a Comment