Home » Ram Idol :ರಾಮ ಮೂರ್ತಿ ಸಿಕ್ಕ ಜಾಗದಲ್ಲಿ ಮಂದಿರ ನಿರ್ಮಾಣ ಮಾಡಲು ಚಿಂತನೆ!!

Ram Idol :ರಾಮ ಮೂರ್ತಿ ಸಿಕ್ಕ ಜಾಗದಲ್ಲಿ ಮಂದಿರ ನಿರ್ಮಾಣ ಮಾಡಲು ಚಿಂತನೆ!!

1 comment
Ram Idol

Mysore :ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿಟಿ ದೇವೇಗೌಡ ಅಯೋಧ್ಯೆ ರಾಮ ಮಂದಿರದಲ್ಲಿ (Ayodhya Ram Mandir)ಪ್ರತಿಷ್ಠಾಪಿಸಲು ಕೆತ್ತಲಾಗಿರುವ ರಾಮಲಲ್ಲಾ ಮೂರ್ತಿಗೆ (Ram Lalla Idol)ಶಿಲೆ ಸಿಕ್ಕಿರುವ ಹಾರೋಹಳ್ಳಿಯ ಸ್ಥಳ ಇದೀಗ ಧಾರ್ಮಿಕ ಸ್ಥಳವಾಗಿ ಬದಲಾಗಿದೆ. ಜನರು ಈಗಾಗಲೇ ಸ್ಥಳಕ್ಕೆ ಬಂದು ಪೂಜೆ ಮಾಡುತ್ತಿದ್ದಾರೆ. ಇದೀಗ ಈ ಜಾಗದಲ್ಲಿ ಮಂದಿರ ನಿರ್ಮಾಣ ಮಾಡಲಾಗುವುದು ಎಂದು ಶಾಸಕ ಜಿಟಿ ದೇವೇಗೌಡ ಘೋಷಿಸಿದ್ದಾರೆ.

ಮೈಸೂರಿನ ಜನದರ್ಶಿನಿಯಲ್ಲಿರುವ ಶಾಸಕರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದು, ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗಿದೆ. ದೇಶದ ಜನರು ಎದುರು ನೋಡುತ್ತಿರುವ ಬಾಲ ರಾಮನ ವಿಗ್ರಹವು ಮೈಸೂರು ತಾಲ್ಲೂಕು ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯ ಹಾರೋಹಳ್ಳಿಯ ದಲಿತ ಸಮುದಾಯದ ಮುಖಂಡ ರಾಮದಾಸ್ ಜಮೀನಿನಲ್ಲಿ ಸಿಕ್ಕ ಕೃಷ್ಣ ಶಿಲೆಯಾಗಿದೆ. ರಾಮಲಲ್ಲಾ ಮೂರ್ತಿಗೆ ಶಿಲೆ ಕೊಟ್ಟ ಜನರಿಗೆ ದೇವರ ದರ್ಶನ ಮಾಡಿಸುವ ವ್ಯವಸ್ಥೆ ಮಾಡಲಾಗುತ್ತದೆ. ಜನವರಿ 27ಕ್ಕೆ ಅರುಣ್ ಯೋಗಿರಾಜ್ ಮೈಸೂರಿಗೆ ಬರಲಿದ್ದಾರೆ. ಜನರಿಗೆ 22 ರಂದು ಇವರೆಲ್ಲರಿಗೂ ಗೌರವ ಸಲ್ಲಿಸುವ ಕೆಲಸ ಮಾಡುತ್ತೇವೆ ಎಂದು ಶಾಸಕ ಜಿಟಿ.ದೇವೇಗೌಡ ಹೇಳಿದ್ದಾರೆ.

ಇದನ್ನು ಓದಿ: ಅಜ್ಜಿಯ ಶವವನ್ನು ಕೊಂಡೊಯ್ಯುವ ವೇಳೆ ಟೈರ್‌ ಬ್ಲಾಸ್ಟ್‌ ಆಗಿ ಕಾರು ಪಲ್ಟಿ; ಅಜ್ಜಿ ಜೊತೆ ಮೂವರು ಮೊಮ್ಮಕ್ಕಳು ಸಾವು!!!

ಪ್ರಧಾನಿ ನರೇಂದ್ರ ಮೋದಿಯವರು ಮೈಸೂರಿಗೆ ಬಂದಿದ್ದ ವೇಳೆ ಚಾಮುಂಡೇಶ್ವರಿ ಸನ್ನಿದಾನದಲ್ಲಿ ಪ್ರಾರ್ಥನೆ ಮಾಡಿದ್ದರು. ಈಗ ಅದೇ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ರಾಮಲಲ್ಲಾ ಮೂರ್ತಿಗೆ ಶಿಲೆ ದೊರೆತಿದೆ. ಜ 22 ರಂದು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಾಗಲಿದ್ದು, ಅದೇ ವೇಳೆ ಕೃಷ್ಣ ಶಿಲೆ ಸಿಕ್ಕ ಸ್ಥಳದಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಜನವರಿ 22ರಂದು ಶಿಲೆ ಸಿಕ್ಕ ಜಾಗದಲ್ಲಿ ಭೂಮಿ ಪೂಜೆ ಮಾಡುತ್ತೇವೆ. ಇದಾದ ಬಳಿಕ ಎಲ್ಲಾ ಜನರ ಬಳಿ ದೇಣಿಗೆ ಸಂಗ್ರಹ ಮಾಡಿ ಮಂದಿರ ನಿರ್ಮಾಣ ಮಾಡಲಾಗುತ್ತದೆ. ಇದಕ್ಕೆ ಜಮೀನು ಮಾಲೀಕ ರಾಮದಾಸ್ ಕೂಡ ಸಮ್ಮತಿ ಸೂಚಿಸಿದ್ದಾರೆ ಎಂದು ಶಾಸಕ ಜಿಟಿ ದೇವೇಗೌಡ ಹೇಳಿದ್ದಾರೆ.

You may also like

Leave a Comment