Home » Girlfriend on Rent: ಅಬ್ಬಬ್ಬಾ!! ಹೀಗೂ ಉಂಟಾ? ಇಲ್ಲಿ ಬಾಯ್‌ಫ್ರೆಂಡ್, ಗರ್ಲ್‌ಫ್ರೆಂಡ್, ಪತ್ನಿ ಬಾಡಿಗೆಗೆ ಸಿಗ್ತಾರೆ !!

Girlfriend on Rent: ಅಬ್ಬಬ್ಬಾ!! ಹೀಗೂ ಉಂಟಾ? ಇಲ್ಲಿ ಬಾಯ್‌ಫ್ರೆಂಡ್, ಗರ್ಲ್‌ಫ್ರೆಂಡ್, ಪತ್ನಿ ಬಾಡಿಗೆಗೆ ಸಿಗ್ತಾರೆ !!

0 comments
Girlfriend on rent

Girlfriend on Rent: ಹಣ ಕೊಟ್ಟರೆ ಎಲ್ಲವೂ ಸಿಗುತ್ತದೆ ಅನ್ನೋದು ನಿಜವಾಗುತ್ತಿದೆ. ಹಣ ಕಂಡರೆ ಹೆಣ ಕೂಡ ಬಾಯಿ ಬಿಡುತ್ತಂತೆ!!. ಆಶ್ಚರ್ಯಕರ ಎನಿಸಿದರೂ ಸತ್ಯವೇ. ಹೌದು, ಚೀನಾದಲ್ಲಿ ಬಾಯ್‌ಫ್ರೆಂಡ್, ಗರ್ಲ್‌ಫ್ರೆಂಡ್, ಪತ್ನಿ ಎಲ್ಲರೂ ಬಾಡಿಗೆಗೆ ಸಿಗ್ತಾರಂತೆ (Girlfriend on Rent). ಅಬ್ಬಬ್ಬಾ!!, ಏನಿದು ಹೀಗೂ ಉಂಟಾ? ಅಂತ ಅನಿಸಬಹುದು. ಹಾಗಿದ್ದರೆ ಬನ್ನಿ ಪೂರ್ತಿ ಸ್ಟೋರಿ ಓದಿ.

ಹಲವು ವೆಬ್‌ಸೈಟ್‌ಗಳಲ್ಲಿ ಜನರು ಗರ್ಲ್‌ಫ್ರೆಂಡ್ (girlfriend), ಪತ್ನಿಯನ್ನು (wife) ಬಾಡಿಗೆಗೆ ಪಡೆಯಲು ಹೆಸರು ನೋಂದಾಯಿಸುತ್ತಿದ್ದಾರೆ. ಈ ಬ್ಯುಸಿನೆಸ್ ಇದೀಗ ಕೋಟ್ಯಾಂತರ ರೂಪಾಯಿ ಗಳಿಸುತ್ತಿದೆ ಎಂದು ವರದಿ ತಿಳಿಸಿದೆ. ಈಗಾಗಲೇ ಚೀನಾದ ವ್ಯಕ್ತಿಯೊಬ್ಬ ನೋಂದಾವಣೆ ಮಾಡಿದ್ದು, ಇಲ್ಲಿ ಗರ್ಲ್‌ಫ್ರೆಂಡ್ ಮಾತ್ರವಲ್ಲ ಬಾಯ್‌ಫ್ರೆಂಡ್ (boyfriend) ಕೂಡ ಬಾಡಿಗೆಗೆ ಸಿಗುತ್ತಾರೆ ಎಂದು ಹೇಳಿದ್ದಾರೆ.

ಬಾಯ್‌ಫ್ರೆಂಡ್, ಗರ್ಲ್‌ಫ್ರೆಂಡ್, ಪತ್ನಿಯನ್ನು ಬಾಡಿಗೆ ಪಡೆಯುವ ಪ್ರವೃತ್ತಿ ಯುವ ಜನತೆಯನ್ನು ಬೇರೆಯದ್ದೇ ರೀತಿಯಲ್ಲಿ ಆಕರ್ಷಿಸುತ್ತಿದೆ. ಕೆಲ ಉದ್ಯೋಗಸ್ಥರು ಕೆಲಸ ತೊರೆದು ಇಂತಹ ಪ್ರವೃತ್ತಿಯಲ್ಲಿ ತೊಡಗಿದ್ದರೆ, ಇನ್ನೂ ಕೆಲವರಿಗೆ ಇದು ಅರೆಕಾಲಿಕ ಉದ್ಯೋಗವಾಗಿ ಮಾರ್ಪಟ್ಟಿದೆ. ಗರ್ಲ್‌ಫ್ರೆಂಡ್ ಇಲ್ಲದೇ ಇರುವ ಅದೆಷ್ಟೋ ಜನರು ಈ ಮೂಲಕ ಗರ್ಲ್‌ಫ್ರೆಂಡ್ ಪಡೆದಿದ್ದಾರೆ. ಸದ್ಯ ಈ ವಿಚಾರ ವಿಚಿತ್ರ ಎನಿಸುವುದು ಸಹಜವೇ.

ಇಲ್ಲಿ ಬಾಯ್‌ಫ್ರೆಂಡ್, ಗರ್ಲ್‌ಫ್ರೆಂಡ್ ಪಡೆಯಲು ಪ್ರೀತಿ ಮಾಡಬೇಕಿಲ್ಲ. ಹಣ ಒಂದಿದ್ದರೆ ಸಾಕು. ಹಣ (money) ಕೊಟ್ಟರೆ ಬಾಡಿಗೆಗೆ ಸಿಗುತ್ತಾರೆ. ಈಗಾಗಲೇ ಚೀನಾದ (china) ವೀಚಾಟ್‌ನಲ್ಲಿ, ಮುಮು (29) ಎಂಬ ಯುವತಿ ತಾನು ಪದವೀಧರೆ, ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದು, ಬಿಡುವಿನ ವೇಳೆಯಲ್ಲಷ್ಟೇ ಈ ಕೆಲಸ ಮಾಡುತ್ತೇನೆ. ಎಂದು ತನ್ನ ಹಲವು ಮಾಹಿತಿಯನ್ನು ತಿಳಿಸಿ ತನ್ನನ್ನು ಪರಿಚಯಿಸಿಕೊಂಡಿದ್ದಾರೆ.

ಆಕೆ ಬಾಡಿಗೆಗೆ ಗರ್ಲ್‌ಫ್ರೆಂಡ್ ಅಗಿರಲು 1000 ಯುವಾನ್ ಅಂದ್ರೇ 12000 ರೂಪಾಯಿ ಶುಲ್ಕ ತೆಗೆದುಕೊಳ್ಳುತ್ತಾಳೆ ಎನ್ನಲಾಗಿದೆ. ಹೆಚ್ಚು ಕಾಲ ಮಾತನಾಡುವುದಕ್ಕೆ ಸಮಯಕ್ಕೆ 6,000ರೂ. ಶುಲ್ಕವಾಗಿದೆ.
ಡ್ರೈವ್‌ಗಳಿಗೆ ಹೋಗಲು ಹೆಚ್ಚುವರಿಯಾಗಿ 4,000 ಶುಲ್ಕ ಎಂದು ತಿಳಿಸಿದ್ದಾಳೆ. ನಿಮಗೂ ಬಾಡಿಗೆಗೆ ಗರ್ಲ್‌ಫ್ರೆಂಡ್ ಬೇಕೆಂದಾದರೆ, ಇಲ್ಲಿದೆ ನೋಡಿ.

You may also like

Leave a Comment