Vastu Tips: ಮನೆಯಲ್ಲಿ ನೆಟ್ಟ ಮರಗಳು (Tree) ಮತ್ತು ಗಿಡಗಳು ಸಂತೋಷ, ಸಮೃದ್ಧಿ ಮತ್ತು ಪ್ರಗತಿಯನ್ನು ತರುತ್ತವೆ ಎಂದು ನಂಬಲಾಗಿದೆ. ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ನಾಶಮಾಡಲು, ಸರಿಯಾದ ದಿಕ್ಕಿನಲ್ಲಿ ಮತ್ತು ಸರಿಯಾದ ಸ್ಥಳದಲ್ಲಿ ಸಸ್ಯಗಳನ್ನು ನೆಡುವುದು ಅವಶ್ಯಕ. ವಾಸ್ತು ತಜ್ಞರ ಪ್ರಕಾರ, ಕೆಲವು ಗಿಡಗಳನ್ನು ಮನೆಯೊಳಗೆ ಮತ್ತು ಕೆಲವು ಗಿಡಗಳನ್ನು ಮನೆಯ ಹೊರಗೆ ನೆಡಬೇಕಂತೆ. ಅಂದಹಾಗೆ ಸರಿಯಾದ ದಿಕ್ಕಿನಲ್ಲಿ ಈ ಗಿಡ (Vastu Tips) ಇಟ್ಟರೆ, ನಕಾರಾತ್ಮಕ ಶಕ್ತಿ ನಾಶವಾಗುತ್ತದೆ. ನಿಮ್ಮ ಮನೆಯ ಅದೃಷ್ಟದ ಬಾಗಿಲು ತೆರೆಯುತ್ತೆ ಎನ್ನಲಾಗಿದೆ.
ಹಿಂದೂ ಧರ್ಮದಲ್ಲಿ, ಅನೇಕ ಸಸ್ಯಗಳೊಂದಿಗೆ, ಹೂವುಗಳಿಗೂ ವಿಶೇಷ ಪ್ರಾಮುಖ್ಯತೆ ಇದೆ. ದಾಸವಾಳದ (Hibiscus) ಹೂವು ಅನೇಕ ಹೂವುಗಳಲ್ಲಿ (flower) ಒಂದಾಗಿದೆ. ದಾಸವಾಳದ ಹೂವನ್ನು ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರದಲ್ಲಿ ಮಂಗಳಕರವೆಂದು ಪರಿಗಣಿಸಲಾಗಿದೆ. ದೀರ್ಘಕಾಲದವರೆಗೆ ಬಡತನ ಅಥವಾ ಯಾವುದೇ ರೀತಿಯ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದರೆ, ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ದಾಸವಾಳದ ಹೂವುಗಳನ್ನು ನೆಡುವುದು ಸೂಕ್ತ ಎಂದು ಹೇಳಲಾಗಿದೆ. ದಾಸವಾಳ ಹೂವು ಆರ್ಥಿಕ ಬಿಕ್ಕಟ್ಟನ್ನು ನಿವಾರಿಸುತ್ತದೆ.
ಕೆಂಪು (Red) ಬಣ್ಣವನ್ನು ಧೈರ್ಯದ (Courage) ಸಂಕೇತವೆಂದು ಪರಿಗಣಿಸಲಾಗುತ್ತದೆ. ಕೆಂಪು ದಾಸವಾಳ ಮನೆಯಲ್ಲಿದ್ದರೆ ನಿಮ್ಮ ಮನೆಯಲ್ಲಿ ಧನಾತ್ಮಕ ಶಕ್ತಿ (Positive Energy ) ವೃದ್ಧಿಯಾಗುತ್ತದೆ.
ವ್ಯಕ್ತಿಯ ಜಾತಕದಲ್ಲಿ ಸೂರ್ಯನ ದೋಷವಿದ್ದರೆ, ಅವನು ಮನೆಯ ಪೂರ್ವ ದಿಕ್ಕಿನಲ್ಲಿ ಕೆಂಪು ದಾಸವಾಳದ ಹೂವಿನ ಗಿಡವನ್ನುವನ್ನು ನೆಡಬೇಕು. ಇದು ಶೀಘ್ರದಲ್ಲೇ ವ್ಯಕ್ತಿಗೆ ಪ್ರಯೋಜನವನ್ನು ನೀಡುತ್ತದೆ.
ದಾಸವಾಳದ ಸಸ್ಯವು ಅಂಗರಾಕ ದೋಷವನ್ನು ತೊಡೆದುಹಾಕಲು ಕೂಡಾ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಮಂಗಳನು ಜಾತಕದಲ್ಲಿ ದುರ್ಬಲವಾಗಿದ್ದಾಗ, ವ್ಯಕ್ತಿಯು ಮದುವೆಯಲ್ಲಿ ವಿಳಂಬವಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ದಾಸವಾಳದ ಗಿಡವನ್ನು ಮನೆಯಲ್ಲಿ ನೆಟ್ಟರೆ ಶೀಘ್ರವೇ ಶುಭ ಫಲ ಸಿಗುತ್ತದೆ.
ದಾಸವಾಳದ ಹೂವು ಹನುಮಂತ ಮತ್ತು ಎಲ್ಲ ದೇವತೆಗಳಿಗೆ ತುಂಬಾ ಪ್ರಿಯವೆಂದು ನಂಬಲಾಗಿದೆ. ನೀವು ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಮಂಗಳವಾರ ಹನುಮಂತನಿಗೆ ದಾಸವಾಳದ ಹೂವನ್ನು ಅರ್ಪಿಸಬೇಕು. ಇದ್ರಿಂದ ಆರ್ಥಿಕ ಸಮಸ್ಯೆ ದೂರವಾಗುತ್ತದೆ.
ನೀವು ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದರೆ ಮನೆಯಲ್ಲಿ ದಾಸವಾಳ ಹೂವಿನ ಗಿಡವನ್ನು ನೆಡಬೇಕು. ಇದರಿಂದ ಲಕ್ಷ್ಮೀ ದೇವಿ ಪ್ರಸನ್ನಳಾಗುತ್ತಾಳೆ. ಲಕ್ಷ್ಮೀ ಅನುಗ್ರಹದಿಂದ ಮನೆಯಲ್ಲಿ ಸಂಪತ್ತಿನ ಹರಿವು ಹೆಚ್ಚಾಗುತ್ತದೆ. ಅದರಲ್ಲೂ ಕೆಂಪು ದಾಸವಾಳ ಹೂವು ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲು ವಿಶೇಷವಾಗಿ ಪ್ರಯೋಜನಕಾರಿಯಾಗಿದೆ.
ಇದನ್ನೂ ಓದಿ: Man Billionaire Overnight: ಅಪ್ಪನ ಹಳೆ ಪಾಸ್’ಬುಕ್ ಮಗನ ಬದುಕು ಬದಲಿಸಿತು ; ರಾತ್ರೋರಾತ್ರಿ ಕೋಟ್ಯಾಧಿಪತಿಯಾದ ಮಗ!
