Home » Liquor: ಹೊಸ ವರ್ಷಕ್ಕೆ ಭರ್ಜರಿ ಮದ್ಯ ಮಾರಾಟ – ರಾಜ್ಯ ಸರ್ಕಾರಕ್ಕೆ ಹರಿದು ಬಂದ ಆದಾಯ ಕೇಳಿದ್ರೆ ಶಾಕ್ ಆಗ್ತೀರಿ !!

Liquor: ಹೊಸ ವರ್ಷಕ್ಕೆ ಭರ್ಜರಿ ಮದ್ಯ ಮಾರಾಟ – ರಾಜ್ಯ ಸರ್ಕಾರಕ್ಕೆ ಹರಿದು ಬಂದ ಆದಾಯ ಕೇಳಿದ್ರೆ ಶಾಕ್ ಆಗ್ತೀರಿ !!

0 comments

Liquor : ಇಡೀ ಜಗತ್ತು ಹೊಸ ವರ್ಷವನ್ನು ಅದ್ದೂರಿಯಾಗಿ ಬರಮಾಡಿಕೊಂಡು ಸಂಭ್ರಮವನ್ನು ಆಚರಿಸಿದೆ. ಅದರಲ್ಲೂ ಮದ್ಯಪ್ರಿಯರ ಸಂಭ್ರಮಕಂತೂ ಪಾರವೇ ಇರಲಿಲ್ಲ. ರಾಜ್ಯದಲ್ಲಂತೂ ಮದ್ಯಪ್ರಿಯರಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಭರ್ಜರಿ ಆದಾಯ ಹರಿದು ಬಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿಯ ಇನ್ಕಮ್ ದುಪ್ಪಟ್ಟು ಎನ್ನಬಹುದು.

ಹೌದು, ಕಳೆದ ಮೂರು ವರ್ಷಗಳಲ್ಲಿ ಈ ಬಾರಿ ಅತಿ ಹೆಚ್ಚು ಮದ್ಯ ಮಾರಾಟವಾಗಿದ್ದು, ಅಬಕಾರಿ ಇಲಾಖೆಗೆ ₹587.51 ಕೋಟಿ ಆದಾಯ ಬಂದಿದೆ. ಇಂಡಿಯನ್ ಮೇಡ್ ಲಿಕ್ಕರ್ ಮತ್ತು ಬಿಯರ್ ಮಾರಾಟದಲ್ಲಿ ದಾಖಲೆ ಸೃಷ್ಟಿಯಾಗಿದೆ. ನಿರೀಕ್ಷೆಗೂ ಮೀರಿ ಮಾರಾಟವಾಗಿದ್ದು, ಇಲಾಖೆಯ ಖಜಾನೆ ತುಂಬಿದೆ. 

ಹೊಸ ವರ್ಷಾಚರಣೆ ಹಿನ್ನೆಲೆ ಮದ್ಯ ಮಾರಾಟಕ್ಕೆ ನಿಗದಿತ ಸಮಯವನ್ನು ಬೆಳಿಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 1 ಗಂಟೆಯವರೆಗೆ ವಿಸ್ತರಿಸಲಾಗಿತ್ತು. ಆ ಮೂಲಕ ಮದ್ಯ ಪ್ರಿಯರಿಗೆ ಗುಡ್​ ನ್ಯೂಸ್​​ ಸಿಕ್ಕಿತ್ತು. ಸೂರ್ಯೋದಕ್ಕೂ ಮುನ್ನವೇ ಬಾರ್​​​​​ಗಳು ಓಪನ್ ಆಗಿದ್ದವು. ಹಾಗಾಗಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಹೆಚ್ಚಿನ ಮದ್ಯ ಮಾರಾಟ ಆಗಿದೆ.ಕಳೆದ ವರ್ಷಕ್ಕೆ ಹೋಲಿಸಿದರೆ ಹೆಚ್ಚುವರಿಯಾಗಿ 166.74 ಕೋಟಿ ರೂ ಈ ವರ್ಷ ಅಬಕಾರಿ ಇಲಾಖೆ ಬೊಕ್ಕಸಕ್ಕೆ ಭರ್ಜರಿ ಆದಾಯ ಹರಿದುಬಂದಿದೆ.

ಕಳೆದ ವರ್ಷ-ಈ ವರ್ಷದ ಹೋಲಿಕೆ

2024ರ ಡಿ.29, 30, 31:

8.25 ಲಕ್ಷ ಬಾಕ್ಸ್ ಐಎಂಎಲ್

5.03 ಲಕ್ಷ ಬಾಕ್ಸ್ ಬಿಯರ್

ಒಟ್ಟು ಆದಾಯ: ₹420.77 ಕೋಟಿ

2025ರ ಡಿ.29, 30, 31:

9.84 ಲಕ್ಷ ಬಾಕ್ಸ್ ಐಎಂಎಲ್ (1.59 ಲಕ್ಷ ಬಾಕ್ಸ್ ಹೆಚ್ಚುವರಿ)

6.64 ಲಕ್ಷ ಬಾಕ್ಸ್ ಬಿಯರ್ (1.61 ಲಕ್ಷ ಬಾಕ್ಸ್ ಹೆಚ್ಚುವರಿ)

ಒಟ್ಟು ಆದಾಯ: ₹587.51 ಕೋಟಿ

You may also like