Home » ಲವರ್ ಬೆನ್ನಿಗೆ ಜೋತು ಬಿದ್ದು ಪತ್ನಿಯ ಜಾಲಿ ರೈಡ್ | ಸ್ಕೂಟಿ ಚೇಸ್ ಮಾಡಿ ಪ್ರಿಯಕರನಿಗೆ ಏಟು ನೀಡಿದ ಪತಿ

ಲವರ್ ಬೆನ್ನಿಗೆ ಜೋತು ಬಿದ್ದು ಪತ್ನಿಯ ಜಾಲಿ ರೈಡ್ | ಸ್ಕೂಟಿ ಚೇಸ್ ಮಾಡಿ ಪ್ರಿಯಕರನಿಗೆ ಏಟು ನೀಡಿದ ಪತಿ

0 comments

ತನ್ನ ಪ್ರಿಯಕರನೊಂದಿಗೆ ಓಡಾಡುತ್ತಿದ್ದ ಪತ್ನಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ನಡುರಸ್ತೆಯಲ್ಲಿ ಕಪಾಳ ಮೋಕ್ಷ ಮಾಡಿದ ಘಟನೆ ನಡೆದಿದೆ.

ಆ ದಂಪತಿಗೆ ಮದುವೆಯಾಗಿ ಈಗಾಗಲೇ 10 ವರ್ಷಗಳಾಗಿದೆ. ಅವರಿಬ್ಬರ ದಾಂಪತ್ಯಕ್ಕೆ ಓರ್ವ ಮಗಳು ಕೂಡಾ ಇದ್ದಾಳೆ. ಭಾನುವಾರ ಆತನ ಪತ್ನಿ ಇಲ್ಲೇ ಮನೆಗೆ ಶಾಪಿಂಗ್ ಮಾಡಿ ಕೊಂಡು ಬರ್ತೇನೆ ಅಂತ ಮನೆಯಿಂದ ಹೊರಗೆ ಹೋಗಿದ್ದಾಳೆ. ಮೊದಲೇ ಆಕೆಯ ಮೇಲೆ ಅನುಮಾನ ಇದ್ದ ಆಕೆಯ ಪತಿ, ಪತ್ನಿ ಎಲ್ಲಿ ಹೋಗ್ತಾಳೆ ಎಂದು ಕಂಡು ಹಿಡಿಯಲೇಬೇಕೆಂದು ನಿರ್ಧರಿಸಿ ತನ್ನ ಪುತ್ರಿಯನ್ನು ತನ್ನ ದ್ವಿಚಕ್ರ ವಾಹನದಲ್ಲಿ ಹತ್ತಿಸಿಕೊಂಡು ಸುತ್ತ ಮುತ್ತಲೂ ಬೀದಿ ಬೀದಿ ಸುತ್ತಿದ್ದಾನೆ. ಪತ್ನಿಗಾಗಿ ಎಲ್ಲಾ ಕಡೆ ಹುಡುಕಾಟ ನಡೆಸಲು ಆರಂಭಿಸಿದ್ದಾನೆ.

ಆಗ, ಅಲ್ಲಿನ ಮಂದಿರ ಒಂದರ ಬಳಿ ಅಪರಿಚಿತ ವ್ಯಕ್ತಿಯ ಜತೆ ವ್ಯಕ್ತಿಯೊಂದಿಗೆ ಸ್ಕೂಟಿಯಲ್ಲಿ, ಆತನ ಬೆನ್ನಿಗೆ ಜೋತುಬಿದ್ದು ತನ್ನ ಪತ್ನಿ ಡಬಲ್ ರೈಡಿಂಗ್ ಹೋಗುತ್ತಿರುವುದನ್ನು ಗಂಡ ನೋಡಿ ಶಾಕ್ ಆಗಿದ್ದಾನೆ. ಆತ ಆ ಗಾಡಿಯನ್ನು ಫಾಲೋ ಮಾಡಿಕೊಂಡು ಹೋಗಿದ್ದು, ಅದರ ವೀಡಿಯೋವನ್ನು ತನ್ನ ಮೊಬೈಲ್‍ನಲ್ಲಿ ಸೆರೆ ಹಿಡಿದುಕೊಂಡಿದ್ದಾನೆ. ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಪತ್ನಿಯ ಪ್ರಿಯಕರನಿಗೆ ಅಡ್ಡಹಾಕಿ ಕಪಾಳಮೋಕ್ಷ ಮಾಡಿದ ಕಾರಣಕ್ಕೆ ಮತ್ತು ಸಾರ್ವಜನಿಕ ಶಾಂತಿ ಕದಡಿದ ಕಾರಣಕ್ಕಾಗಿ ಪತ್ನಿಯ ಲವರ್ ಗೆ, ಹೀಗೆ ಇಬ್ಬರಿಗೂ ದಂಡ ವಿಧಿಸಲಾಗಿದೆ. ಆದರೆ ಘಟನೆಗೆ ಮೂಲ ಕಾರಣ ಆದ ಮಹಿಳೆ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ.

You may also like

Leave a Comment