ಸಾಮಾನ್ಯವಾಗಿ ಮನೆಯ ಸುತ್ತ ಮುತ್ತ ಹೂವಿನ ಗಿಡಗಳನ್ನು ಬೆಳೆಸುತ್ತಾರೆ. ಇದರ ಜೊತೆಗೆ ಆಕರ್ಷಣೀಯವಾದ ಕೆಲವು ಗಿಡಗಳನ್ನೂ ತಮ್ಮ ಗಾರ್ಡನ್ ನಲ್ಲಿ ಬೆಳೆಸುತ್ತಾರೆ. ಗಿಡಗಳು ಮನೆಯ ಸೌಂದರ್ಯವನ್ನು ಹೆಚ್ಚಿಸುತ್ತದೆ. ಆದರೆ ವಾಸ್ತು ಪ್ರಕಾರ ಮನೆಯಲ್ಲಿ ಕೆಲವು ರೀತಿಯ ಗಿಡಗಳನ್ನು ಬೆಳೆಸುವುದರಿಂದ ಆ ಮನೆಯಲ್ಲಿ ಸದಾ ನೆಮ್ಮದಿ, ಸಂತೋಷ ತುಂಬಿರುತ್ತದೆ. ಹಾಗೂ ಸಂಪತ್ತು ವೃದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ.
ಹಾಗೇ ಈ ಗಿಡಗಳು ಮನೆಯನ್ನು ಸ್ವಚ್ಛವಾಗಿಡುವುದರ ಜೊತೆಗೆ ನಕಾರಾತ್ಮಕ ಶಕ್ತಿಗಳು ಪ್ರವೇಶಿಸದಂತೆ ನೋಡಿಕೊಳ್ಳಬೇಕು. ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಕೆಲವು ಗಿಡಗಳನ್ನು ಇಟ್ಟರೆ ಶುಭ ಸಂಕೇತ, ಮನೆ ಸಮೃದ್ಧಿಯಾಗಿರುತ್ತದೆ ಎಂದು ಹೇಳುತ್ತಾರೆ. ಆದರೆ ಈ ಗಿಡಗಳನ್ನು ನೆಡಲು ಅಥವಾ ಇಡೋದಿಕ್ಕೆ ಕೆಲವು ನಿಯಮಗಳಿವೆ. ಕೆಲವು ಗಿಡಗಳನ್ನು ಮನೆಯ ಸೂಕ್ತ ದಿಕ್ಕಿನಲ್ಲಿಡಬೇಕು ಆಗ ಮಾತ್ರ ಮನೆಗೆ ಶುಭ. ಹಾಗಾದ್ರೆ ಮನೆಯ ಯಾವ ದಿಕ್ಕಿನಲ್ಲಿ ಈ ಗಿಡಗಳನ್ನು ಇಡಬೇಕು ಎಂದು ನೋಡೋಣ.
ಬಿದಿರಿನ ಗಿಡ :
ವಾಸ್ತು ದೋಷವಿರುವ ಮನೆಗಳಲ್ಲಿ ಬಿದಿರಿನ ಗಿಡಗಳನ್ನು ನೆಡಲು ವಾಸ್ತು ಶಾಸ್ತ್ರದ ತಜ್ಞರು ಸಲಹೆ ನೀಡುತ್ತಾರೆ. ವಾಸ್ತು ಶಾಸ್ತ್ರದಲ್ಲಿ ಬಿದಿರಿನ ಗಿಡ ಅಥವಾ ಬ್ಯಾಂಬೂ ಪ್ಲಾಂಟ್ ಅನ್ನು ಮಂಗಳಕರವೆಂದು ಪರಿಗಣಿಸಲಾಗಿದೆ. ಈ ಸಸ್ಯ ಪರಿಸರವನ್ನು ಶುದ್ಧೀಕರಿಸುತ್ತದೆ ಮತ್ತು ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ತುಂಬುತ್ತದೆ. ಮನೆಯಲ್ಲಿ ಸಂತೋಷ, ಶಾಂತಿ ಮತ್ತು ಆರ್ಥಿಕ ಸಮೃದ್ಧಿ ನೆಲೆಸಬೇಕು ಅಂದ್ರೆ ಈ ಗಿಡವನ್ನು ಮನೆಯ ಪೂರ್ವ ದಿಕ್ಕಿನಲ್ಲಿ ನೆಡಬೇಕು. ಇದಲ್ಲದೇ ಡ್ರಾಯಿಂಗ್ ರೂಂ, ಲಿವಿಂಗ್ ರೂಮ್ ನಲ್ಲೂ ಇಡಬಹುದು. ಇದು ಮನೆಯಲ್ಲಿ ಸುಖ- ಸಮೃದ್ಧಿ ನೆಲೆಸಲು ಸಹಕಾರಿಯಾಗಿದೆ.
ಮನಿ ಪ್ಲಾಂಟ್ :
ಮನಿ ಪ್ಲಾಂಟ್ ಹೆಸರೇ ಸೂಚಿಸುವಂತೆ ಹಣದ ಗಿಡ. ಇದರಲ್ಲಿ ಹಣ ಬೆಳೆಯದಿದ್ದರೂ, ನಿಮ್ಮನ್ನು ಶ್ರೀಮಂತರನ್ನಾಗಿ ಮಾಡುತ್ತದೆ. ವಾಸ್ತು ಶಾಸ್ತ್ರದಲ್ಲಿ ಮನಿ ಪ್ಲಾಂಟ್ ಅನ್ನು ಬಹಳ ವಿಶೇಷವೆಂದು ಪರಿಗಣಿಸಲಾಗುತ್ತದೆ. ಅದರ ಸ್ಥಿತಿ ಮತ್ತು ದಿಕ್ಕು ಸರಿಯಾಗಿದ್ದರೆ ನಿಮ್ಮ ಮನೆ ಹಣದಿಂದ ತುಂಬುತ್ತದೆ ಎಂದು ಹೇಳಲಾಗುತ್ತದೆ. ಇನ್ನು ಈ ಮನಿ ಪ್ಲಾಂಟ್ ಅನ್ನು ಆಗ್ನೇಯ ಮತ್ತು ಈಶಾನ್ಯ ದಿಕ್ಕಿನಲ್ಲಿ ನೆಡಬೇಕು. ಈ ದಿಕ್ಕಿನಲ್ಲಿ ನೆಟ್ಟರೆ ಶುಭವಾಗುತ್ತದೆ ಎಂಬ ನಂಬಿಕೆ. ಮತ್ತು ಇದು ನಿಮ್ಮ ಜೀವನದಲ್ಲಿ ಸಕಾರಾತ್ಮಕತೆಯನ್ನು ತರುತ್ತದೆ ಎಂದು ಹೇಳಲಾಗುತ್ತದೆ.
ಸ್ನೇಕ್ ಪ್ಲಾಂಟ್ :
ವಾಸ್ತು ಪ್ರಕಾರ, ಸಂತೋಷ ಮತ್ತು ಸಮೃದ್ಧಿಗಾಗಿ ಈ ಗಿಡವನ್ನು ಯಾವಾಗಲೂ ಒಳಾಂಗಣ ಮತ್ತು ಹೊರಾಂಗಣದಲ್ಲಿ ನೆಡಬಹುದು.
ಮನೆಯಲ್ಲಿ ನಿಮ್ಮ ಅಧ್ಯಯನ ಕೊಠಡಿಯಲ್ಲಿ ಈ ಗಿಡವನ್ನು ಇಟ್ಟುಕೊಳ್ಳುವುದರಿಂದ ಏಕಾಗ್ರತೆ ಹೆಚ್ಚಾಗಲಿದೆ. ಯಾವುದೇ ಕೆಲಸದಲ್ಲಿ ನಿಮ್ಮ ಗಮನವನ್ನು ಹೆಚ್ಚಿಸಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಈ ಸ್ನೇಕ್ ಪ್ಲಾಂಟ್ ನಿಂದ ಮನೆಯಲ್ಲಿನ ಅನೇಕ ಸಮಸ್ಯೆಗಳು ದೂರಾಗುತ್ತದೆ. ನೀವು ಆರ್ಥಿಕ ಪ್ರಯೋಜನಗಳನ್ನು ಪಡೆಯಲು ಇದು ಸಹಕಾರಿಯಾಗಿದೆ. ಸ್ನೇಕ್ ಪ್ಲಾಂಟ್ ಮನೆಯಿಂದ ನಕಾರಾತ್ಮಕತೆಯನ್ನು ತೆಗೆದುಹಾಕುವ ಮೂಲಕ ಧನಾತ್ಮಕ ಶಕ್ತಿಯನ್ನು ವಿಸ್ತರಿಸುತ್ತದೆ.
ಆರ್ಕಿಡ್ ಸಸ್ಯ :
ಆರ್ಕಿಡ್ ಸಸ್ಯಗಳನ್ನು ಯಶಸ್ಸು ಮತ್ತು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇದನ್ನು ಮನೆಯಲ್ಲಿ ನೆಡುವುದರಿಂದ ನಿಮ್ಮ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ. ಶಾಸ್ತ್ರದ ಪ್ರಕಾರ ಈ ಗಿಡವನ್ನು ಮನೆಯ ಉತ್ತರ ದಿಕ್ಕಿನಲ್ಲಿ ಇಡಬೇಕು ಎಂದು ಹೇಳಲಾಗುತ್ತದೆ.
