ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯವು (IGNOU) ಮಾಸ್ಟರ್ ಆಫ್ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ (MBA) ಪ್ರವೇಶ 2022 ಗಾಗಿ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದು, ಅರ್ಜಿ ಸಲ್ಲಿಕೆಯ ಅವಧಿಯನ್ನು ವಿಸ್ತರಣೆ ಮಾಡಿದೆ.
ಇಗ್ನೋ, ಮನೆಯಲ್ಲೇ ಕುಳಿತು ದೂರಶಿಕ್ಷಣದ ಮೂಲಕ ಎಂಬಿಎ ಪದವಿ ಪಡೆಯಲು ಇಚ್ಚಿಸುವವರಿಗೆ ಉತ್ತಮ ಸಂಸ್ಥೆಯಾಗಿದ್ದು, ಎಂಬಿಎ ಪ್ರೋಗ್ರಾಂ ದೂರ ಕ್ರಮದಲ್ಲಿ ಮತ್ತು ಆನ್‌ಲೈನ್ ಮೋಡ್ ಎರಡರಲ್ಲೂ ಲಭ್ಯವಿದೆ. ಇಗ್ನೋ ಎಂಬಿಎ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 22 ಕೊನೆಯ ದಿನವಾಗಿತ್ತು. ಆದರೆ ಇದೀಗ ಅರ್ಜಿ ಸಲ್ಲಿಕೆಯ ಅವಧಿಯನ್ನು ಸೆಪ್ಟೆಂಬರ್ 30ರ ವರೆಗೆ ವಿಸ್ತರಿಸಲಾಗಿದೆ.
ಅರ್ಹತೆಗಳು :
*ಪದವಿಯಲ್ಲಿ ಶೇಕಡಾ 50 ಅಂಕಗಳನ್ನು ಪಡೆದಿರುವ ಅಭ್ಯರ್ಥಿಗಳು (ಮೀಸಲು ವರ್ಗಕ್ಕೆ ಶೇಕಡಾ 45) ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. *ಇಗ್ನೋ ಎಂಬಿಎ ಕಾರ್ಯಕ್ರಮವು ಐದು ವಿಶೇಷ ಕ್ಷೇತ್ರಗಳಲ್ಲಿ ಲಭ್ಯವಿದೆ.
ದಾಖಲೆಗಳು :
ಇಗ್ನೋ ಎಂಬಿಎ ಪ್ರವೇಶ 2022ಗೆ ಅರ್ಜಿ ಸಲ್ಲಿಸುವಾಗ ಅಭ್ಯರ್ಥಿಗಳು ಈ ಕೆಳಗಿನ ದಾಖಲೆಗಳ ಸ್ಕ್ಯಾನ್ ಮಾಡಿದ ಚಿತ್ರಗಳನ್ನು ಅಪ್‌ಲೋಡ್ ಮಾಡಬೇಕಾಗುತ್ತದೆ.
*ಅಭ್ಯರ್ಥಿಯ ಭಾವಚಿತ್ರ
*ಅಭ್ಯರ್ಥಿಯ ಸಹಿ
*ವಯಸ್ಸಿನ ಪುರಾವೆಗಾಗಿ ಜನ್ಮದಿನದ ಪ್ರಮಾಣಪತ್ರ (10 ನೇ ಪಾಸ್ ಪ್ರಮಾಣಪತ್ರ).
*ಅರ್ಹತಾ ಪ್ರಮಾಣಪತ್ರ (12ನೇ ತರಗತಿ ಅಂಕಪಟ್ಟಿ ಅಥವಾ ಪ್ರಮಾಣಪತ್ರ/ಪದವಿ ಉತ್ತೀರ್ಣ ಪ್ರಮಾಣಪತ್ರ)
*ಅನುಭವ ಪ್ರಮಾಣಪತ್ರ (ಯಾವುದಾದರೂ ಇದ್ದರೆ)
*ವರ್ಗ ಪ್ರಮಾಣಪತ್ರ (ಸಾಮಾನ್ಯ ಹೊರತುಪಡಿಸಿ)
*ಗುರುತಿನ ಪುರಾವೆ (ಆಧಾರ್ ಕಾರ್ಡ್/ಪಾಸ್‌ಪೋರ್ಟ್/ವೋಟರ್ ಐಡಿ/ಪ್ಯಾನ್ ಕಾರ್ಡ್/ಚಾಲನಾ ಪರವಾನಗಿ/ರೇಷನ್ ಕಾರ್ಡ್)
*ಬಿಪಿಎಲ್ ಪ್ರಮಾಣಪತ್ರ (ಬಡತನ ರೇಖೆಗಿಂತ ಕೆಳಗಿದ್ದರೆ)
ಆನ್‌ಲೈನ್‌ನಲ್ಲಿ ನೋಂದಾಯಿಸುವ ವಿಧಾನ :
ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ignou.ac.in ಗೆ ಭೇಟಿ ನೀಡಿ. ನೀವು ಬಯಸಿದ ಕೋರ್ಸ್ ಲಿಂಕ್ ಅನ್ನು ಆಯ್ಕೆ ಮಾಡಿ ಮತ್ತು ಮೂಲ ವಿವರಗಳೊಂದಿಗೆ ನೋಂದಾಯಿಸಿ. ದಾಖಲಾತಿ ಸಂಖ್ಯೆ ಸೇರಿದಂತೆ ವಿವರಗಳನ್ನು ಬಳಸಿ ಮತ್ತೊಮ್ಮೆ ಲಾಗಿನ್ ಮಾಡಿ. ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಮತ್ತು ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ. ಅರ್ಜಿಯ ವಿವರಗಳನ್ನು ಪರಿಶೀಲಿಸಿ ಮತ್ತು ಅರ್ಜಿ ಶುಲ್ಕವನ್ನು ಪಾವತಿಸಲು ಮುಂದುವರಿಯಿರಿ. ಅರ್ಜಿ ನಮೂನೆಯನ್ನು ಸಲ್ಲಿಸಿ ಮತ್ತು ದೃಢೀಕರಣ ಪುಟವನ್ನು ಡೌನ್‌ಲೋಡ್ ಮಾಡಿ. ಹೆಚ್ಚಿನ ಉಲ್ಲೇಖಕ್ಕಾಗಿ ಪ್ರಿಂಟ್ ಔಟ್ ತೆಗೆದುಕೊಳ್ಳಿ.
ಇಗ್ನೋ ಎಂಬಿಎ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅಧಿಕೃತ ವೆಬ್‌ಸೈಟ್ ignou.ac.in. ಗೆ ಭೇಟಿ ನೀಡುವ ಮೂಲಕ ನೋಂದಾಯಿಸಿಕೊಳ್ಳಬಹುದು.
ದೂರ ಶಿಕ್ಷಣದ ಮೂಲಕ ಎಂಬಿಎ ಕಾರ್ಯಕ್ರಮಕ್ಕೆ ಪ್ರವೇಶ ಪಡೆಯಲು ಇಚ್ಚಿಸುವ ಅಭ್ಯರ್ಥಿಗಳು ignouadmission.samarth.edu.in ವೆಬ್‌ಸೈಟ್ನಲ್ಲಿ ನೋಂದಾಯಿಸಿಕೊಳ್ಳಬೇಕು.
ಆನ್‌ಲೈನ್ ಮೋಡ್ ಮೂಲಕ ಇಗ್ನೋ ಎಂಬಿಎ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ignouiop.samarth.edu.in ವೆಬ್‌ಸೈಟ್ನಲ್ಲಿ ನೋಂದಾಯಿಸಿಕೊಳ್ಳಬೇಕು.
