Home » Marriage: ಹಿಂದೂ-ಮುಸ್ಲಿಂ ಮದುವೆ ಮಾನ್ಯವಲ್ಲ- ಹೈಕೋರ್ಟ್ ಮಹತ್ವದ ತೀರ್ಪು

Marriage: ಹಿಂದೂ-ಮುಸ್ಲಿಂ ಮದುವೆ ಮಾನ್ಯವಲ್ಲ- ಹೈಕೋರ್ಟ್ ಮಹತ್ವದ ತೀರ್ಪು

0 comments
Marriage

Marriage: ವಿಶೇಷ ವಿವಾಹ ಕಾಯಿದೆ ಅಡಿ ಹಿಂದೂಯುವತಿಯ ಜತೆಗೆ ಮುಸ್ಲಿಂ ಯುವಕನ ವಿವಾಹ ಮುಸ್ಲಿಂ ವೈಯಕ್ತಿಕ ಕಾನೂನಿನ ಪ್ರಕಾರ ಮಾನ್ಯವಲ್ಲ ಎಂದು ಮಧ್ಯಪ್ರದೇಶ ಹೈಕೋರ್ಟ್ ತೀರ್ಪು ನೀಡಿದೆ.

ಇದನ್ನೂ ಓದಿ: Prajwal Revanna: ಪೆನ್ ಡ್ರೈವ್ ಪ್ರಜ್ವಲ್ ಅರೆಸ್ಟ್, ಮಧ್ಯರಾತ್ರಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅರೆಸ್ಟ್ ಆದ ಸಂಸದ !

ವಿಶೇಷ ವಿವಾಹ ಕಾಯಿದೆ ಅಡಿಯಲ್ಲಿ ಮದುವೆಯಾಗಲು ಮತ್ತು ವಿವಾಹ ನೋಂದಣಿ ಮಾಡಿಕೊಳ್ಳಲು ಪೊಲೀಸ್ ರಕ್ಷಣೆ ಬೇಕು ಎಂದು ಕೋರಿ ಅಂತರ್‌ಧರ್ಮೀಯ ಜೋಡಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿರುವ ಹೈಕೋರ್ಟ್, ಮುಸ್ಲಿಂ ಹುಡುಗ ಮತ್ತು ಹಿಂದೂ ಹುಡುಗಿ ವಿಶೇಷ ವಿವಾಹ ಕಾಯಿದೆಯಡಿ ಮದುವೆಯಾದರೂ ವಿವಾಹವನ್ನು ಮುಸ್ಲಿಂ ವೈಯಕ್ತಿಕ ಕಾನೂನಿನ ಅಡಿಯಲ್ಲಿ ಫಾಸಿದ್ (ದೋಷಯುಕ್ತ ) ಎಂದು ಪರಿಗಣಿಸಲಾಗುತ್ತದೆ ಎಂದು ನ್ಯಾ.ಗುರ್ಪಾಲ್ ಸಿಂಗ್ ಅಹ್ಲುವಾಲಿಯಾ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ: Mumbai: ಅಂಡರ್ ವರ್ಲ್ಡ್ ಡಾನ್ ಛೋಟಾ ರಾಜನ್‌ಗೆ ಜೀವಾವಧಿ ಶಿಕ್ಷೆ

ವಿವಾಹ ನೋಂದಣಿ ಬಯಸಿದ್ದ ಜೋಡಿ ಮದುವೆಯಾಗದೆಯೇ ಲಿವ್ ಇನ್ ಸಂಬಂಧದಲ್ಲಿ ಇರಲು ಸಿದ್ಧರಿಲ್ಲ ಹುಡುಗಿ (ಹಿಂದೂ) ಹುಡುಗನ ಧರ್ಮಕ್ಕೆ (ಮುಸ್ಲಿಂ) ಮತಾಂತರಗೊಳ್ಳಲು ಸಿದ್ಧಳಿಲ್ಲ ಎಂಬುದನ್ನು ಗಮನಿಸಿದ ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿತು.

You may also like

Leave a Comment