Home » ನೀವು ಕೂಡ ಇನ್‌ಸ್ಟಾಗ್ರಾಮ್‌ ಬಳಕೆದಾರರೇ?? |ಹಾಗಿದ್ದಲ್ಲಿ ನಿಮಗಾಗಿ ಸದ್ಯದಲ್ಲೇ ಬರಲಿದೆ ಹೊಸ ಫೀಚರ್

ನೀವು ಕೂಡ ಇನ್‌ಸ್ಟಾಗ್ರಾಮ್‌ ಬಳಕೆದಾರರೇ?? |ಹಾಗಿದ್ದಲ್ಲಿ ನಿಮಗಾಗಿ ಸದ್ಯದಲ್ಲೇ ಬರಲಿದೆ ಹೊಸ ಫೀಚರ್

by ಹೊಸಕನ್ನಡ
0 comments

ಈಗಿನ ಕಾಲದಲ್ಲಿ ಸಾಮಾಜಿಕ ಜಾಲತಾಣ ಬಳಸದವರಿಲ್ಲ. ಎಲ್ಲರೂ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿ ಇರುತ್ತಾರೆಯೇ. ಅದರಲ್ಲೂ ಈಗ ಇನ್‌ಸ್ಟಾಗ್ರಾಮ್‌ ತುಂಬಾ ಟ್ರೆಂಡ್ ನಲ್ಲಿದೆ. ನೀವು ಕೂಡ ಇನ್‌ಸ್ಟಾಗ್ರಾಮ್‌ನ ಸಕ್ರಿಯ ಬಳಕೆದಾರರೇ? ನಿಮಗೂ ಇನ್‌ಸ್ಟಾಗ್ರಾಮ್‌ನಲ್ಲಿ ಅತೀ ಹೆಚ್ಚು ಸ್ಟೋರಿಗಳನ್ನು ಹಾಕುವ ಹವ್ಯಾಸವಿದೆಯಾ? ಹಾಗಿದ್ದರೆ ಇನ್‌ಸ್ಟಾಗ್ರಾಮ್ ಕಡೆಯಿಂದ ನಿಮಗೊಂದು ಸಿಹಿ ಸುದ್ದಿ ಇಲ್ಲಿದೆ.

ಮೆಟಾ ಮಾಲೀಕತ್ವದ ಫೋಟೋ ಹಂಚಿಕೆ ಪ್ಲಾಟ್‌ಫಾರ್ಮ್ ಇನ್‌ಸ್ಟಾಗ್ರಾಮ್‌ನಲ್ಲಿ ಬಳಕೆದಾರರು ತಮ್ಮ ಸ್ಟೋರಿಗಳಲ್ಲಿ 1 ನಿಮಿಷದ ವೀಡಿಯೋಗಳನ್ನು ಹಾಕಲು ಶೀಘ್ರವೇ ಸಾಧ್ಯವಾಗಲಿದೆ. ಇದರ ಬಗ್ಗೆ ಇನ್‌ಸ್ಟಾಗ್ರಾಮ್ ಕಾರ್ಯ ನಿರ್ವಹಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಬಳಕೆದಾರರು ಸದ್ಯ ತಮ್ಮ ಒಂದು ಸ್ಟೋರಿಯಲ್ಲಿ 15 ಸೆಕೆಂಡುಗಳ ವೀಡಿಯೋವನ್ನಷ್ಟೇ ಹಾಕಬಹುದಿತ್ತು. ಒಂದು ವೇಳೆ ಅದಕ್ಕಿಂತಲೂ ಹೆಚ್ಚಿನ ಸಮಯದ ವೀಡಿಯೋಗಳನ್ನು ಸ್ಟೋರಿಯಲ್ಲಿ ಹಾಕಲು ಬಯಸಿದರೆ ಅದು 15 ಸೆಕೆಂಡುಗಳ ವಿಭಜನೆಯೊಂದಿಗೆ ಹಲವು ಸ್ಟೋರಿಗಳಾಗಿ ತೋರಿಸುತ್ತಿತ್ತು. ಈ ಹೊಸ ಬದಲಾವಣೆಯಿಂದ ಬಳಕೆದಾರರು 1 ನಿಮಿಷದ ವೀಡಿಯೋವನ್ನು ವಿಭಜಿಸದೇ ಸ್ಟೋರಿಯಲ್ಲಿ ಪೋಸ್ಟ್ ಮಾಡಲು ಸಾಧ್ಯವಾಗಲಿದೆ.

ಇದಿಷ್ಟು ಮಾತ್ರ ಇನ್‌ಸ್ಟಾಗ್ರಾಮ್‌ನ ಹೊಸ ಸೇರ್ಪಡೆಯಾಗಿರದೇ ಪೋಸ್ಟ್ ಮಾಡಲು ಬಯಸುವ ಸ್ಟೋರಿಯನ್ನು ರಚಿಸುವ ಇಂಟರ್‌ಫೇಸ್ ಕೂಡಾ ಬದಲಾಗಲಿದೆ. ಈ ಹೊಸ ಇಂಟರ್‌ಫೇಸ್ ಬಳಕೆದಾರರಿಗೆ ಲೊಕೇಶನ್ ಹಾಗೂ ಟ್ಯಾಗ್‌ಗಳನ್ನು ಸೇರಿಸುವ ಅಂಶವನ್ನು ಮೊದಲಿಗಿಂತ ಸುಲಭಗೊಳಿಸಲಿದೆ ಎಂದು ತಿಳಿದು ಬಂದಿದೆ.

ಈ ಎಲ್ಲಾ ಅಂಶಗಳು ಸದ್ಯ ಪರೀಕ್ಷಾ ಹಂತದಲ್ಲಿದ್ದು, ಇದರ ಬಗ್ಗೆ ನಿಖರವಾಗಿ ತಿಳಿದುಕೊಳ್ಳಲು ಮುಂದಿನ ಅಪ್‌ಡೇಟ್ ವರೆಗೆ ಕಾಯಬೇಕಿದೆ. ಇನ್ಸ್ಟಾಗ್ರಾಮ್ ಬಳಕೆದಾರರ ಅಂತೂ ಈ ಹೊಸ ಫೀಚರ್ ಗಾಗಿ ತುದಿಗಾಲಲ್ಲಿ ಕಾಯುತ್ತಿದ್ದಾರೆ. ಆದಷ್ಟು ಬೇಗನೆ ಈ ಹೊಸ ಅಪ್‌ಡೇಟ್ ಗ್ರಾಹಕರಿಗೆ ಸಿಗಬಹುದು.

You may also like

Leave a Comment