Home » Virgin crocodile give birth: ಗಂಡಿಲ್ಲದೆ ಗರ್ಭ ಧರಿಸಿದ ಹೆಣ್ಣು!

Virgin crocodile give birth: ಗಂಡಿಲ್ಲದೆ ಗರ್ಭ ಧರಿಸಿದ ಹೆಣ್ಣು!

by ಹೊಸಕನ್ನಡ
0 comments
Virgin crocodile give birth

Virgin crocodile give birth: ಕ್ಯಾಲಿಫೋರ್ನಿಯಾ: ಗಂಡು ಸಂಗಾತಿ ಇಲ್ಲದೇ ಹೆಣ್ಣು ಒಬ್ಬಳು ಗರ್ಭವತಿಯಾಗಿದ್ದಾಳೆ. ಗಂಡು ಮೊದಲ ಹೆಣ್ಣು ಮೊದಲ ಜಗಳ ಇತ್ಯರ್ಥ ಆಗಿಲ್ಲ. ನಾನಾ ನೀನಾ ಅಂತಿದ್ದ ಗಂಡು ಹೆಣ್ಣುಗಳ ಮಧ್ಯೆ ಹೆಣ್ಣು ಗೆಲ್ಲುವ ಲಕ್ಷಣ ತೋರಿಸಿದ್ದಾಳೆ. ಗಂಡು ಜೀವಿಯ ಅಗತ್ಯ ಇಲ್ಲದೆ ಹೆಣ್ಣೊಂದು ಗರ್ಭ ಧರಿಸಿದೆ (Virgin crocodile give birth). ಪ್ರಾಣಿಗಳು ಸ್ವಯಂ ಸಂತಾನೋತ್ಪತಿ ಮಾಡಬಹುದು ಎಂಬ ಸಿದ್ಧಾಂತವನ್ನು ಬೆಂಬಲಿಸಲು ಇದು ಸಹಾಯ ಮಾಡುತ್ತದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅಮೆರಿಕಾದ 18 ವರ್ಷದ ಈ ಹೆಣ್ಣು ಮೊಸಳೆ 16 ವರ್ಷಗಳ ಕಾಲ ಸಂಗಾತಿ ಇಲ್ಲದೇ ಒಂಟಿಯಾಗಿ ಬದುಕಿತ್ತು. ಅದನ್ನು ಅಲ್ಲಿರುವ ಪಾರ್ಕೊಂದರಲ್ಲಿ ಇರಿಸಲಾಗಿತ್ತು. ಆದರೆ ಅಚ್ಚರಿ ಎಂಬಂತೆ 2018 ರಲ್ಲಿ ಪಾರ್ಕ್‌ನಲ್ಲಿ ಇದರ ಮೊಟ್ಟೆಯೊಂದು ಪತ್ತೆಯಾಗಿತ್ತು.

ಇದಕ್ಕೆ ಜೀವ ವಿಜ್ಞಾನಿಗಳು ‘ ವರ್ಜಿನ್ ಬರ್ತ್ಸ್’ ಅಂದರೆ, ಕನ್ಯಾ ತಾಯ್ತನ ಎಂದು ಕರೆದಿದ್ದಾರೆ. ಈ ವಿದ್ಯಮಾನಕ್ಕೆ ವೈಜ್ಞಾನಿಕವಾಗಿ ‘ಫ್ಯಾಕಲ್ಟೇಟಿವ್ ಪಾರ್ಥೆನೋಜೆನೆಸಿಸ್’ ಎಂದು ಕೂಡ ಕರೆಯಲಾಗುತ್ತದೆ. ಇದರ ಪ್ರಕಾರ ಕೆಲವು ಪಕ್ಷಿಗಳು ಹಾಗೂ ಸರೀಸೃಪಗಳು ಗಂಡಿನ ಸಂಪರ್ಕವಿಲ್ಲದೇ ಸಂತಾನೋತ್ಪತಿ ನಡೆಸುತ್ತವೆ. ಇದರ ಪ್ರಕಾರ, ಹೆಣ್ಣು ಮೊಟ್ಟೆಯ ಕೋಶವು ಫಲವತ್ತಾಗದೆ ಭ್ರೂಣವಾಗಿ ಬೆಳೆದಾಗ ಈ ರೀತಿಯ ಪ್ರಕ್ರಿಯೆ ಸಂಭವಿಸುತ್ತದೆ. ಇಲ್ಲಿ ಮೊಟ್ಟೆಯೂ ರೂಪುಗೊಂಡು ಜೊತೆಗೆ ಉಳಿದಿರುವ ಆನುವಂಶಿಕ ಜೀವ ವಸ್ತುಗಳೊಂದಿಗೆ ಬೆಸೆಯುವಿಕೆಯಿಂದ ಇದು ಉಂಟಾಗುತ್ತದೆ ಎಂದು ಭಾವಿಸಲಾಗಿದೆ. ಅಮೆರಿಕಾದ ವರ್ಜೀನಿಯಾದ ಪಾಲಿಟೆಕ್ನಿಕ್‌ ಒಂದರ ಸಂಶೋಧಕರ ವಿಶ್ಲೇಷಣೆಯ ಪ್ರಕಾರ ಈ ಕನ್ಯಾ ಭ್ರೂಣವು ತಳಿಯ ಆಧಾರದ ಮೇಲೆ 99.9% ಕ್ಕಿಂತಲೂ ಹೆಚ್ಚು ತಾಯಿಯನ್ನು ಹೋಲುತ್ತದೆ. ಯಾಕೆಂದರೆ ಗಂಡು ಇಲ್ಲದೆ ಆದ ಫಲವಂತಿಕೆಯದು.

ರಾಯಲ್ ಸೊಸೈಟಿ ಜರ್ನಲ್ ಬಯಾಲಜಿ ಲೆಟರ್ಸ್‌ನಲ್ಲಿ ಸಂಶೋಧಕರ ತಂಡ ಬರೆದಿರೋದು ವಿಶೇಷವಾಗಿದೆ. ಅಲ್ಲಿ ಬರೆದಿರುವಂತೆ, ಬಂಧನದಲ್ಲಿರುವ ಸರೀಸೃಪಗಳು ಗಂಡಿಲ್ಲದೇ ಮೊಟ್ಟೆಗಳನ್ನು ಇಡುವುದು ಅಸಾಮಾನ್ಯವೇನಲ್ಲವಂತೆ. ಈ ರೀತಿ ಅವುಗಳಿಗೆ ಧೀರ್ಘಕಾಲ ಸಂಗಾತಿಯ ಸಂಪರ್ಕವನ್ನೇ ನೀಡದಿದ್ದರೆ ( ಬರಗೆಟ್ಟ ಸ್ಥಿತಿಯಲ್ಲಿ ?!!) ಇವುಗಳು ಗಂಡನ್ನು ತಿರಸ್ಕರಿಸುತ್ತವೆಯಂತೆ. ಆದ್ದರಿಂದ ಗಂಡಿನ ಸಂಪರ್ಕವಿಲ್ಲದೇ ಸೃಷ್ಟಿಯಾದ ಮೊಟ್ಟೆಗಳನ್ನು ಮೌಲ್ಯಮಾಪನ ಮಾಡಬೇಕು ಎಂದು ಸಂಶೋಧಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ :ನೀವು ಬೆಳಿಗ್ಗೆ ಎದ್ದಾಗ ಬ್ಲಾಕ್‌ ಚಹಾ ಕುಡಿಯುತ್ತೀರಾ? ಈ ಗಂಭೀರ ಆರೋಗ್ಯ ಸಮಸ್ಯೆ ತಪ್ಪಿದಲ್ಲ ..!

You may also like

Leave a Comment