Home » Optical illusion: ಓದುಗರೇ ನಿಮಗೊಂದು ಸವಾಲ್ ; 10 ಸೆಕೆಂಡ್’ನಲ್ಲಿ ಎಲೆಗಳ ಮಧ್ಯೆ ಅಡಗಿರುವ ಹಾವನ್ನು ಪತ್ತೆ ಹಚ್ಚಿ!!

Optical illusion: ಓದುಗರೇ ನಿಮಗೊಂದು ಸವಾಲ್ ; 10 ಸೆಕೆಂಡ್’ನಲ್ಲಿ ಎಲೆಗಳ ಮಧ್ಯೆ ಅಡಗಿರುವ ಹಾವನ್ನು ಪತ್ತೆ ಹಚ್ಚಿ!!

0 comments
Optical illusion

Optical illusion: ನಮ್ಮ ಕಣ್ಣುಗಳಿಗೆ ಸವಾಲು ಎಸೆಯುವಂತಹ ಚಿತ್ರಗಳು ಸೋಷಿಯಲ್ ಮೀಡಿಯಾದಲ್ಲಿ (Social Media) ಆಗಾಗ ಕಾಣ ಸಿಗುತ್ತವೆ. ಈಗಾಗಲೇ ಹಲವು ಆಪ್ಟಿಕಲ್ ಇಲ್ಯೂಷನ್ (Optical illusion) ಚಾಲೆಂಜ್ ಗಳನ್ನು ನೀವು ನೋಡಿರಬಹುದು. ಇದೀಗ ನಿಮ್ಮ ಚಾಣಾಕ್ಷತನವನ್ನು ಪರೀಕ್ಷಿಸುವ ಆಪ್ಟಿಕಲ್ ಇಲ್ಯೂಷನ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಆಪ್ಟಿಕಲ್ ಇಲ್ಯೂಷನ್ ಚಿತ್ರಣಗಳು ನೆಟ್ಟಿಗರ ತಲೆಗೆ ಹುಳ ಬಿಡುವ ಜೊತೆಗೆ ಕಣ್ಣಿಗೆ ಮತ್ತು ಬುದ್ಧಿವಂತಿಕೆಗೆ ಸವಾಲು ಹಾಕುವುದಂತು ನಿಜ. ಇದೀಗ ವೈರಲ್ ಆಗಿರುವ ಫೋಟೋ (photo) ನಿಮ್ಮ ವೀಕ್ಷಣಾ ಕೌಶಲ್ಯ ಮತ್ತು ಏಕಾಗ್ರತೆಯನ್ನು ಸುಧಾರಿಸುವಲ್ಲಿ ಸಹಕಾರಿಯಾಗಲಿದೆ. ಹಾಗಿದ್ರೆ ಇನ್ನೇಕೆ ತಡ, ಈ ಟ್ರಿಕಿ ಪರೀಕ್ಷೆಯನ್ನು ಪರಿಹರಿಸಿ!.

ಮೇಲಿನ ಫೋಟೋದಲ್ಲಿ ನೆಲದ ಮೇಲೆ ಒಣಗಿದ ಎಲೆಗಳು ಬಿದ್ದಿರುವುದನ್ನು ನೋಡಬಹುದು. ಫೋಟೋದಲ್ಲಿ ಕೇವಲ ಎಲೆಗಳು ಮಾತ್ರ ಇಲ್ಲ, ಅದರ ಮಧ್ಯೆ ಒಂದು ಹಾವು ಅಡಗಿದೆ. ನೀವು ಆ ಹಾವನ್ನು ಕಂಡುಹಿಡಿಯಬೇಕು. ಇದು ಸುಲಭದ ಕೆಲಸವೇನಲ್ಲ. ನೋಡಲು ಪೂರ್ತಿ ಎಲೆಗಳೇ ತುಂಬಿರುವ ಫೋಟೋದಲ್ಲಿ ಹಾವನ್ನು ಹುಡುಕುವುದು ಕಷ್ಟವೇ. ಆದರೂ ನೀವು ಈ ಸವಾಲು ಸ್ವೀಕರಿಸಿ ಹಾವನ್ನು ಪತ್ತೆ ಹಚ್ಚುವಿರಿ ಎಂದಾದರೆ ನಿಮಗೆ 10 ಸೆಕೆಂಡ್​ ಸಮಯ ಕೊಡಲಾಗುತ್ತದೆ. ನಿಮ್ಮ ಸಮಯ‌ ಈಗ ಶುರು!.

ಹತ್ತು ಸಮಯದ ಬಳಿಕವೂ ನಿಮಗೆ ಹಾವನ್ನು ಪತ್ತೆ ಹಚ್ಚಲು ಸಾಧ್ಯವಾಗದೇ ಇದ್ದರೆ ಈ ಕೆಳಗಿನ ಫೋಟೋದಲ್ಲಿ ಉತ್ತರವಿದೆ. ಒಂದು ವೇಳೆ ನೀವು ಮೊದಲೇ ಫೋಟೋದಲ್ಲಿರುವ ಹಾವನ್ನು ಗುರುತಿಸಿದ್ದರೆ ನಿಮ್ಮ ಕಣ್ಣಿನ ಸಾಮರ್ಥ್ಯ ಮತ್ತು ಬುದ್ಧಿಮತ್ತೆಗೆ ನೀವೇ ಫುಲ್​ ಮಾರ್ಕ್ಸ್​ ಕೊಟ್ಟುಬಿಡಿ.

Optical illusion

Image Source: vijayavani

 

ಇದನ್ನೂ ಓದಿ: Post Office Recruitment 2023: ಅಂಚೆ ಇಲಾಖೆ ಹುದ್ದೆಯ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ ; ಕೊನೆಯ ಅವಕಾಶ ಮಿಸ್ ಮಾಡ್ಕೋಬೇಡಿ, ತಕ್ಷಣ ಅರ್ಜಿ ಸಲ್ಲಿಸಿ !!

You may also like

Leave a Comment