Home » ಮಗಳು ಬೇಕೆಂದು ನಿರಂತರವಾಗಿ ಮಕ್ಕಳನ್ನು ಹೆತ್ತ ಮಹಾತಾಯಿ!! ಕೊನೆಗೂ ಹುಟ್ಟಿದ್ಯಾರು ?

ಮಗಳು ಬೇಕೆಂದು ನಿರಂತರವಾಗಿ ಮಕ್ಕಳನ್ನು ಹೆತ್ತ ಮಹಾತಾಯಿ!! ಕೊನೆಗೂ ಹುಟ್ಟಿದ್ಯಾರು ?

0 comments

Pregnant: ಮನೆಯಲ್ಲೊಂದು ಪುಟ್ಟ ಮಗು ಇರಬೇಕು. ದಂಪತಿಗಳಿಬ್ಬರ ಪ್ರೀತಿಯ ಕರುಳು ಕುಡಿ ಮನೆ ಬೆಳಗಬೇಕೆಂದು ಇಬ್ಬರ ಆಸೆ ಇರುತ್ತದೆ. ಅದರಲ್ಲೂ ಕೆಲವರಿಗೆ ಗಂಡು ಮಗು ಬೇಕೆಂದು, ಇನ್ನು ಕೆಲವರಿಗೆ ಹೆಣ್ಣು ಮಗು ಬೇಕೆಂದು ಹಂಬಲ ಇರುತ್ತದೆ. ಇನ್ನು ಕೆಲವು ಮನೆಯಲ್ಲಿ ಆರತಿಗೊಬ್ಬ ಮಗಳು, ಕೀರ್ತಿಗೊಬ್ಬ ಮಗ ಇದ್ದರೆ ಸಾಕು ಎನ್ನುವವವರು, ಇನ್ನು ಕೆಲವರು ನಮ್ಮ ಪ್ರೀತಿಯ ಮಗು ಹೆಣ್ಣಾಗ್ಲಿ ಗಂಡಾಗ್ಲಿ ಆರೋಗ್ಯವಾಗಿರಲಿ ಎಂದು ಬಯಸ್ತಾರೆ. ಈ ಪೈಕಿಯಲ್ಲಿ ಹೆಣ್ಣು ಮಗು ಬೇಕೆಂಬ ಹಂಬಲದಿಂದ ಇಲ್ಲೊಬ್ಬಳು 9ಮಕ್ಕಳನ್ನು ಹೆತ್ತಿದ್ದಾಳೆ.

ಹೌದು, ಈ ಮಹಿಳೆ ಮಗಳೊಬ್ಬಳು ಮನೆಗೆ ಬರಬೇಕೆಂಬ ಆಸೆಯಿಂದ 9 ಗಂಡು ಮಕ್ಕಳನ್ನು ಈ ಮಹಿಳೆ ಪಡೆದಿದ್ದಾರೆ. ವಿಶೇಷ ಅಂದರೆ 9 ಮಕ್ಕಳ ತಾಯಿ ಈಗ ಮತ್ತೊಮ್ಮೆ ಗರ್ಭಿಣಿಯಾಗಿದ್ದು 30 ವರ್ಷದ ಮಹಿಳೆಯ ಹೆಸರು ಯಲಾನ್ಸಿಯಾ ರೊಸಾರಿಯೊ ಆಗಿದೆ. ಈಕೆಗೆ ಯಲಾನ್ಸಿಯಾಗೆ ಹೆಣ್ಣು ಮಗು ಬೇಕಂತೆ. ಆದರೆ ಅವರ ಆಸೆ ಇನ್ನೂ ಈಡೇರುತ್ತಿಲ್ಲ.

ಯಲಾನ್ಸಿಯಾ ಪ್ರಕಾರ, ಅವಳಿ ಗರ್ಭ ಧರಿಸಿದ್ದು, ಅವಳಿ ಮಕ್ಕಳಿಗೆ ಜನ್ಮ ನೀಡಲಿದ್ದೇನೆ ಎಂದು ಹೇಳಿದ್ದಾರೆ. ಅಲ್ಲದೆ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅವಳಿಗಳ ಸ್ಕ್ಯಾನ್ ಪೋಸ್ಟ್ ಅನ್ನು ಕೂಡ ಹಂಚಿಕೊಂಡಿದ್ದಾರೆ. ಹೆಣ್ಣು ಮಗು ಹುಟ್ಟುವವರೆಗೂ ನಾನು ಮಕ್ಕಳನ್ನು ಪಡೆಯುತ್ತಲೇ ಇರುತ್ತೇನೆ ಎನ್ನುತ್ತಾರೆ ಯಲಾನ್ಸಿಯಾ.

ಈಗಾಗಲೇ ಯಲಾನ್ಸಿಯಾ ಮೊದಲ ಮಗುವಿನ ವಯಸ್ಸು 12 ವರ್ಷ. ಜಮೆಲ್ ದೊಡ್ಡ ಮಗ. ಮೈಕೆಲ್ ಜೂನಿಯರ್ ಗೆ 9 ವರ್ಷ. ಏಂಜೆಲೋಗೆ 8 ವರ್ಷ. ಅರ್ಮಾನಿಗೆ 6 ವರ್ಷ. ಪ್ರಿನ್ಸ್ ಗೆ 5 ವರ್ಷ. ಸಿನ್ಸಿರ್ ಗೆ 3 ವರ್ಷ. ಇನ್ನೊಂದು ಮಗನಿಗೆ 2 ವರ್ಷ. ಇನ್ನು ಗಿಮಾನಿಗೆ 1 ವರ್ಷವಾದ್ರೆ ಕೈರೋಗೆ 2 ತಿಂಗಳು ಆಗಿದೆ.

ರೊಸಾರಿಯೊ ಅವರು 18 ನೇ ವಯಸ್ಸಿನಲ್ಲಿ ತನ್ನ ಮೊದಲ ಮಗನಿಗೆ ಜನ್ಮ ನೀಡಿದರು. ಅಂದಿನಿಂದ ಅವರು ಪ್ರತಿ ವರ್ಷ ನಿರಂತರವಾಗಿ ಗರ್ಭಿಣಿಯಾಗುತ್ತಿದ್ದಾರೆ. ಗರ್ಭಾವಸ್ಥೆಯಲ್ಲಿ ಆಗುವ ಏರಿಳಿತಗಳ ಬಗ್ಗೆಯೂ ಅವರು ಇನ್ಸ್ಟಾಗ್ರಾಮ್ ನಲ್ಲಿ ಮಾತನಾಡ್ತಾರೆ. ಒಮ್ಮೆ ಅವರು ಗರ್ಭಪಾತಕ್ಕೆ ಒಳಗಾಗಿದ್ದರೆಂದು ಹೇಳಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ (Social Media) ಯಾರು ಏನೇ ಹೇಳಿದರು ಇದ್ಯಾವುದಕ್ಕೂ ಯಲಾನ್ಸಿಯಾ ತಲೆಕೆಡಿಸಿಕೊಂಡಿಲ್ಲ. ಈ ಎಲ್ಲ ಮಕ್ಕಳನ್ನು ಸಾಕಲು ನನ್ನ ಬಳಿ ಸಾಮರ್ಥ್ಯ ಇದೆ ಎಂದು ಖುಷಿ ಮತ್ತು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

You may also like

Leave a Comment