4
Rayabhagh: ರಾಯಭಾಗ: ಈತ ಆಧುನಿಕ ಶ್ರವಣಕುಮಾರ. ಆತ ತನ್ನ ಶತಾಯುಷಿ ತಾಯಿಯನ್ನು ಹೆಗಲ ಮೇಲೆ ಹೊತ್ತುಕೊಂಡು 220 ಕಿ.ಮೀ. ಕ್ರಮಿಸಿ ಪಂಡರಾಪುರದ ವಿಟ್ಠಲನ ದರ್ಶನ ಮಾಡಿಸಿದ್ದಾನೆ.
ರಾಯಬಾಗ ತಾಲೂಕಿನ ಕೆಂಪಟ್ಟಿ ಗ್ರಾಮದ 55 ವರ್ಷದ ಸದಾಶಿವ ಬಾನೆ ಎಂಬವರು ತನ್ನ ತಾಯಿ ಸತ್ತೆವ್ವಾ ಲಕ್ಷ್ಮಣಬಾನೆಯ ಆಸೆಯಂತೆ ತನ್ನ ಗ್ರಾಮದಿಂದ ಸತತ 9 ದಿನಗಳ ಪಾದಯಾತ್ರೆ ಮೂಲಕ ಹೆಗಲ ಮೇಲೆ ಹೊತ್ತುಕೊಂಡು ಹೋಗಿ ದರ್ಶನ ಮಾಡಿಸಿದ್ದಾರೆ. ಸದಾಶಿವ ಪಂಡರಾಪುರ ವಿಟ್ಠಲನ ಪರಮ ಭಕ್ತನಾಗಿದ್ದು, 15 ವರ್ಷಗಳಿಂದ ಪಂಡರಾಪುರಕ್ಕೆ ಪಾದಯಾತ್ರೆ ತೆರಳುತ್ತಾರೆ.
ಜೀವಮಾನದಲ್ಲಿ ಒಮ್ಮೆಯಾದರೂ ತಾಯಿಯನ್ನು ಹೆಗಲ ಮೇಲೆ ಹೊತ್ತು ದಿಂಡಿ ಪಾದಯಾತ್ರೆ ಮೂಲಕ ವಿಠಲನ ದರ್ಶನ ಮಾಡಿಸಬೇಕೆಂಬ ಮಹದಾಸೆ ಹೊಂದಿದ್ದರು. ಆತನ ಆಸೆ ಇದೀಗ ಪೂರ್ತಿಯಾಗಿದ್ದು, ಆತ ವಿಪರೀತ ಮಾತೃ ಭಕ್ತಿ ತೋರಿದ್ದಾನೆ.
