Home » Benefits of Scheme: ನಿಮ್ಮ ಮಗಳ ಉಜ್ವಲ ಭವಿಷ್ಯಕ್ಕಾಗಿ ಈ ಯೋಜನೆ ಹೂಡಿಕೆ ಮಾಡಿ! ಸಿಗುತ್ತೆ ಬಂಪರ್ ಲಾಭ!

Benefits of Scheme: ನಿಮ್ಮ ಮಗಳ ಉಜ್ವಲ ಭವಿಷ್ಯಕ್ಕಾಗಿ ಈ ಯೋಜನೆ ಹೂಡಿಕೆ ಮಾಡಿ! ಸಿಗುತ್ತೆ ಬಂಪರ್ ಲಾಭ!

1 comment
Benefits of Scheme

Benefits of Scheme : ಪೋಷಕರು (parents) ತಮ್ಮ ಮಕ್ಕಳ (children) ಭವಿಷ್ಯಕ್ಕಾಗಿ ಬ್ಯಾಂಕ್ಗಳಲ್ಲಿ ಹಣ‌ ಹೂಡಿಕೆ ಮಾಡುತ್ತಾರೆ. ಇನ್ನೂ ಕೆಲವರು ವಿವಿಧ ಯೋಜನೆಗಳ ಮೂಲಕ ಮಕ್ಕಳ ಭವಿಷ್ಯಕ್ಕೆ ಹಣ ಜಮಾ ಮಾಡುತ್ತಾರೆ. ಸರ್ಕಾರ ಕೂಡ ಜನಸಾಮಾನ್ಯರಿಗೆ ಆರ್ಥಿಕ ನೆರವು ನೀಡುವ ಸಲುವಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ನೀವು ನಿಮ್ಮ ಮಗಳ ಉಜ್ವಲ ಭವಿಷ್ಯಕ್ಕಾಗಿ ಹೂಡಿಕೆ ಮಾಡಬೇಕೆಂದಿದ್ದರೆ ಇಲ್ಲಿದೆ ಉತ್ತಮ ಯೋಜನೆಗಳು (Benefits of Scheme). ಜೊತೆಗೆ ಸಿಗುತ್ತೆ ಬಂಪರ್ ಲಾಭ!.

ಸುಕನ್ಯಾ ಸಮೃದ್ಧಿ ಯೋಜನೆ (Sukanya Samriddhi yojana) : ಸುಕನ್ಯಾ ಸಮೃದ್ಧಿ ಯೋಜನೆಯು ಹೆಣ್ಣು ಮಗುವಿನ ಅನುಕೂಲಕ್ಕಾಗಿ ಸರ್ಕಾರದ ಬೆಂಬಲಿತ ಸಣ್ಣ ಉಳಿತಾಯ (small savings schemes) ಯೋಜನೆಯಾಗಿದೆ. ಸುಕನ್ಯಾ ಸಮೃದ್ಧಿ ಖಾತೆಯ ಅವಧಿಯು 21 ವರ್ಷಗಳು ಆಗಿದ್ದು, ಸರ್ಕಾರವು ಈ ಯೋಜನೆಯ ಅಡಿಯಲ್ಲಿ ಬಡ್ಡಿದರಗಳನ್ನು ತ್ರೈಮಾಸಿಕ ಆಧಾರದ ಮೇಲೆ ಘೋಷಿಸುತ್ತದೆ. ನೀವು ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ನಿಮಗೆ ಶೇಕಡಾ 7.6 ರಷ್ಟು ಬಡ್ಡಿದರ ಲಭಿಸುತ್ತದೆ. ಅಲ್ಲದೆ, ಈ ಯೋಜನೆಯು ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ವಿನಾಯಿತಿಯನ್ನು ಒದಗಿಸುತ್ತದೆ.

ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಯೋಜನೆ (NSC): ಅಂಚೆ ಕಚೇರಿಯ (post office) ಪ್ರಮುಖ ಯೋಜನೆಗಳಲ್ಲಿ ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್ (national savings certificate) ಅಥವಾ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (ಎನ್‌ಎಸ್‌ಸಿ) ಒಂದಾಗಿದ್ದು, ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC) ಯೋಜನೆಯು ಉಳಿತಾಯಕ್ಕೆ ಉತ್ತಮ ಮಾರ್ಗವಾಗಿದೆ. ನಿಮ್ಮ ಮಗಳ ಮದುವೆ (marriage) ಮತ್ತು ಅವಳ ಭವಿಷ್ಯವನ್ನು (future) ಭದ್ರಪಡಿಸಲು ಬಯಸಿದರೆ ನೀವು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದಾಗಿದೆ.

ಮ್ಯೂಚುವಲ್ ಫಂಡ್ : ಮಗಳ ಉತ್ತಮ ಭವಿಷ್ಯಕ್ಕಾಗಿ ಮ್ಯೂಚುವಲ್ ಫಂಡ್ (mutual fund) ಯೋಜನೆ ಕೂಡ ಉತ್ತಮವಾಗಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಉತ್ತಮ ಆದಾಯವನ್ನು ಪಡೆಯುತ್ತೀರಿ. ಮ್ಯೂಚುವಲ್ ಫಂಡ್ ಯೋಜನೆಗಳು ಮಾರುಕಟ್ಟೆ ಅಪಾಯಗಳಿಗೆ ಒಳಪಟ್ಟಿರುತ್ತವೆ.‌

 

ಇದನ್ನು ಓದಿ : Arecanut Coffee Rate 13/04/2023 : ಇಂದಿನ ಅಡಿಕೆ, ಕಾಫಿ, ಏಲಕ್ಕಿ ಧಾರಣೆ ಎಷ್ಟಿದೆ?

You may also like

Leave a Comment