Home » ಅವಳಿ ‘ ಸಿಂಗಂ’ ಗಳ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ |

ಅವಳಿ ‘ ಸಿಂಗಂ’ ಗಳ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ |

0 comments

ತಮಿಳುನಾಡಿನ ಚೆಂಗಲ್ ಪೇಟೆಯ ಪೊಲೀಸ್ ವರಿಷ್ಠಾಧಿಕಾರಿ ( ಎಸ್ ಪಿ) ಪಿ ಅರವಿಂದನ್ ಅವರು ತಮ್ಮ ಟ್ವಿನ್ ಸಹೋದರನೊಂದಿಗೆ ಕಾಣಿಸಿಕೊಂಡಿರುವ ಫೋಟೋವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.

ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಫೋಟೋದಲ್ಲಿ ಯಾರು ಚಿಕ್ಕವರು ಯಾರು ದೊಡ್ಡವರು, ಇಬ್ಬರ ನಡುವೆ ವ್ಯತ್ಯಾಸ ಏನು ಎಂದು ಕಂಡು ಹಿಡಿಯುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆಗುತ್ತಿದೆ. ಈ ಫೋಟೋಗೆ 11 ಸಾವಿರಕ್ಕೂ ಹೆಚ್ಚು ಮಂದಿ ಇಷ್ಟಪಟ್ಟಿದ್ದಾರೆ.

‘ ಸಹೋದರ ಎಸಿಪಿ ಅಭಿನಂದನ್ ಜೊತೆ ನಾನು. ತಮಿಳುನಾಡು ಪೊಲೀಸ್ ದೆಹಲಿ ಪೊಲೀಸರನ್ನು ಭೇಟಿಯಾದ ಕ್ಷಣ’ ಎಂದು ಪಿ ಅರವಿಂದನ್ ಬರೆದಿದ್ದಾರೆ.

ಈ ಫೋಟೋ ನೋಡಿ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅರವಿಂದನ್ ಕಂಪ್ಯೂಟರ್ ಸೈನ್ಸ್ ಪದವೀಧರರು. 2010 ರಲ್ಲಿ ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಐಪಿಎಸ್ ಅಧಿಕಾರಿ ಆಗಿದ್ದಾರೆ. ಬೆಂಗಳೂರಿನಲ್ಲಿ ಆರಂಭದಲ್ಲಿ ಕೆಲಸ ಮಾಡಿದ್ದಾರೆ. ಅಭಿನಂದನ್ ದೆಹಲಿ ಪೊಲೀಸ್ ಇಲಾಖೆಯಲ್ಲಿ ಟ್ರೈನಿ ಎಸಿಪಿಯಾಗಿ ಸೇವೆ ಮಾಡುತ್ತಿದ್ದಾರೆ.

ನೆಟ್ಟಿಗರಿಂದ ಬಹುಪರಾಕ್ ಪಡೆದ ಈ ಫೋಟೋ ನೋಡಿ ಕೆಲವರು ನಟ ಸೂರ್ಯ ಅಭಿನಯದ ‘ ಸಿಂಗಂ’ ನೆನಪಾಗುತ್ತದೆ ಎಂದು ಬರೆದಿದ್ದಾರೆ.

You may also like

Leave a Comment