Home » Relationship Tips: ನಿಮ್ಮ ಸಂಗಾತಿ ಭಾವನಾತ್ಮಕವಾಗಿ ನಿಮ್ಮೊಂದಿಗಿಲ್ಲ ಎಂದು ತಿಳಿಯಪಡಿಸುತ್ತವೆ ಈ ಲಕ್ಷಣಗಳು!

Relationship Tips: ನಿಮ್ಮ ಸಂಗಾತಿ ಭಾವನಾತ್ಮಕವಾಗಿ ನಿಮ್ಮೊಂದಿಗಿಲ್ಲ ಎಂದು ತಿಳಿಯಪಡಿಸುತ್ತವೆ ಈ ಲಕ್ಷಣಗಳು!

by ಹೊಸಕನ್ನಡ
1 comment
Relationship Tip

Relationship Tip : ಜೀವನದಲ್ಲಿ ಹುಡುಗ ಹುಡುಗಿಯರು ತಮ್ಮ ಸಂಗಾತಿಯನ್ನು ಹುಡುಕುವುದು, ಹುಡುಕಿ ಜೊತೆಯಾಗಿ ಅನ್ಯೋನ್ಯವಾಗಿರುವುದು ಸಾಮಾನ್ಯ. ಕೆಲವೊಮ್ಮೆ ಈ ಸಂಬಂಧಗಳು ಹಳಸುವುದುಂಟು. ಇಲ್ಲ ಜೊತೆಗಿದ್ದರೂ ಅಂತರ ಕಾಯುವುದೂ ಇದೆ. ಇದಕ್ಕೆ ಕಾರಣವೂ ಹಲವಿವೆ. ಹೌದು, ಸಂಬಂಧದಲ್ಲಿ ನೆಮ್ಮದಿ, ತೃಪ್ತಿ ಇಲ್ಲದಿರುವುದರ ಹಿಂದೆ ಅನೇಕ ಕಾರಣಗಳಿರಬಹುದು. ನಿಮ್ಮ ಸಂಗಾತಿಯೂ ಇದಕ್ಕೆ ಪ್ರಮುಖವಾಗಿ ಕಾರಣವಾಗಿರಬಹುದು. ಏಕೆಂದರೆ, ಆಕೆ ನಿಮ್ಮಿಂದ ಭಾವನಾತ್ಮಕವಾಗಿ ಸಮೀಪದಲ್ಲಿ ಇಲ್ಲದೆ, ಯಾವುದಕ್ಕೂ ಸ್ಪಂದಿಸದೆಯೂ ಇರಬಹುದು. ಹಾಗಿದ್ದರೆ ಅವರು ನಿಮ್ಮೊಂದಿಗೆ ಭಾವನಾತ್ಮಕವಾಗಿ ಒಂದಾಗಿಲ್ಲ ಎನ್ನುವುದನ್ನು ಕಂಡುಕೊಳ್ಳುವುದು (Relationship Tip) ಹೇಗೆ ಗೊತ್ತಾ?

ಭಾವನೆಗಳನ್ನು ಹಂಚಿಕೊಳ್ಳೋದಿಲ್ಲ: ಆಳವಾದ, ಭಾವುಕ ಮಾತುಕತೆಗಳಿಂದ ಆಕೆ ದೂರವಿರಬಹುದು. ಆಕೆ ನಿಮ್ಮ ಭಾವನೆಗಳನ್ನು ಪರಿಗಣಿಸದೇ ಇರಬಹುದು ಹಾಗೂ ತನ್ನ ಭಾವನೆಗಳನ್ನು ಸಹ ಹೇಳಿಕೊಳ್ಳದೆ ದೂರವಿರಬಹುದು. ಒಂದೊಮ್ಮೆ ನೀವು ಪದೇ ಪದೆ ಪ್ರಶ್ನಿಸಿದರೂ ಸರಿಯಾಗಿ ಉತ್ತರ ನೀಡದೆ ಇರಬಹುದು. ನಿಮ್ಮ ಕಷ್ಟದ ಸನ್ನಿವೇಶದಲ್ಲೂ ಹೆಚ್ಚು ಸ್ಪಂದಿಸದೆ, ಬೆಂಬಲಕ್ಕೆ ನಿಲ್ಲದೆ ದೂರವೇ ಇರಬಹುದು. ತಮ್ಮ ಕುಟುಂಬಸ್ಥರು, ಸ್ನೇಹಿತರು, ಹಿಂದಿನ ಜೀವನದ ಬಗ್ಗೆ ನಿಮ್ಮಿಂದ ಮುಚ್ಚಿಡಬಹುದು.

ಅಂತರ (Distance) ಕಾಪಾಡಿಕೊಳ್ತಾರೆ: ಭಾವನಾತ್ಮಕವಾಗಿ ನಿಮ್ಮೊಂದಿಗೆ ಸ್ಪಂದನೆ ಹೊಂದಿಲ್ಲದ ಗೆಳತಿ (Girl Friend) ನಿಮ್ಮಿಂದ ಅಂತರ ಕಾಪಾಡಿಕೊಳ್ಳಬಹುದು. ನಿಮ್ಮೊಂದಿಗಿನ ಸಂಬಂಧವನ್ನು ಎಲ್ಲರೊಂದಿಗೆ ಹೇಳಿಕೊಳ್ಳಲು ಹಿಂದೇಟು ಹಾಕಬಹುದು. ನಿಮ್ಮೊಂದಿಗೆ ರೋಮ್ಯಾನ್ಸ್ ನಲ್ಲೂ ಪಾಲ್ಗೊಳ್ಳುವುದು ಕಡಿಮೆ ಇರಬಹುದು.

ಕುಟುಂಬಗಳ ಸಮ್ಮಿಲನಕ್ಕೆ (Meet Family) ಹಿಂದೇಟು: ನಿಮ್ಮ ಗೆಳತಿ ನಿಮ್ಮ ಕುಟುಂಬಸ್ಥರನ್ನು ಭೇಟಿಯಾಗಲು ನಿರಾಸಕ್ತಿ ಹೊಂದಿದ್ದಾರೆಯೇ? ಆಕೆ ನಿಮ್ಮ ಸಂಬಂಧಕ್ಕೆ (Relation) ಬದ್ಧತೆ (Commit) ಹೊಂದಲು ಸಿದ್ಧವಾಗಿಲ್ಲದೆ ಇರಬಹುದು.

ಬದ್ಧತೆಗೆ ಭಯ: ತಮಗೇನು ಬೇಕು ಎನ್ನುವುದರ ಬಗ್ಗೆ ನಿಮ್ಮ ಗೆಳತಿಯಲ್ಲಿ ಸ್ಪಷ್ಟತೆ (Clarity) ಇಲ್ಲವೇ? ಒಂದು ದಿನ ನಿಮ್ಮಲ್ಲಿ ಅಪಾರ ಪ್ರೀತಿ (Love) ಹೊಂದಿರುವಂತೆ ಕಂಡುಬಂದರೆ, ಮತ್ತೊಮ್ಮೆ ಆಸಕ್ತಿ ಇಲ್ಲದಂತೆ ವರ್ತಿಸುತ್ತಾರೆಯೇ? ಹಾಗಾದರೆ ಆಕೆ ನಿಮ್ಮ ಸಂಬಂಧಕ್ಕೆ ಬದ್ಧಳಾಗಲು ಸಿದ್ಧರಿಲ್ಲ ಎಂದರ್ಥ. ಆಗ ನೀವು ಆಕೆಗೆ ಏನಾದರೂ ತೊಂದರೆ ಕೊಟ್ಟರೆ ಭಾರೀ ಕಿರಿಕಿರಿ ಮಾಡಿಕೊಳ್ಳುತ್ತಾರೆ. ಆದರೆ, ನಿಮಗೆ ತೊಂದರೆ ಕೊಡಲು ಯೋಚಿಸುವುದಿಲ್ಲ. ಆಕೆಯನ್ನು ಅರ್ಥ ಮಾಡಿಕೊಳ್ಳುವುದೇ ನಿಮಗೆ ಕಷ್ಟವಾಗಬಹುದು.

ಮತ್ತೊಬ್ಬರ ಬಗ್ಗೆ ಭಾವನೆ (Feelings) ಹೊಂದಿರಬಹುದು: ನಿಮ್ಮೊಂದಿಗೆ ಭಾವನಾತ್ಮಕ ದೂರ ಹೊಂದಿರುವ ನಿಮ್ಮ ಗೆಳತಿಯ ಮನದಲ್ಲಿ ಬೇರೊಬ್ಬ ವ್ಯಕ್ತಿ ಇರಬಹುದು. ಇಂತಹ ಸನ್ನಿವೇಶದಲ್ಲೂ ಬಾಯಿಬಿಟ್ಟು ಹೇಳಲಾಗದೆ ಅವರು ನಿಮ್ಮಿಂದ ಅಂತರ ಕಾಪಾಡಿಕೊಳ್ಳಲು ಯತ್ನಿಸಬಹುದು. ಅಲ್ಲದೆ ನಿಮ್ಮ ಗೆಳತಿಯ ಮನದಲ್ಲಿ ನೀವು ಸೂಕ್ತ ಸಂಗಾತಿ ಅಲ್ಲ ಎನ್ನುವ ಭಾವನೆ ಮೂಡಿರಬಹುದು ಅಥವಾ ಆಕೆ ನಂಬಿಕೆ ಇಡಲು ಸಮಸ್ಯೆ ಎದುರಿಸುತ್ತಿರಬಹುದು.

ಸಂಘರ್ಷದಿಂದ (Conflict) ದೂರ: ಎಲ್ಲ ಸನ್ನಿವೇಶದಲ್ಲೂ ಮೇಲುಮೇಲಿನ ಮಾತುಕತೆ (Discussion) ನಡೆಸುವ ನಿಮ್ಮ ಗೆಳತಿ ಸಂಘರ್ಷಗಳಿಂದ ದೂರವಿರಲು ಬಯಸುತ್ತಾರೆ. ನೀವು ಸ್ಪಷ್ಟವಾಗಿ ಮಾತುಕತೆ ನಡೆಸಲು ಇಷ್ಟಪಟ್ಟಾಗ ಆ ಸಮಯದಲ್ಲಿ ರಕ್ಷಣಾತ್ಮಕವಾಗಿ ಮಾತುಕತೆ ನಡೆಸುತ್ತಾರೆ. ಆದರೆ, ವಾದದಿಂದ ದೂರವಿರುತ್ತಾರೆ. ಸತ್ಯವನ್ನು ಎದುರಿಸುವ ಶಕ್ತಿ ಇರದೆ ಗೊಂದಲದ ಉತ್ತರ ನೀಡುತ್ತಾರೆ.

ಇದನ್ನೂ ಓದಿ: Aunty Anasuya: ಇನ್ಮುಂದೆ ‘ಆಂಟಿ’ ಅಂದ್ರೆ ಕೇಸ್ ಹಾಕ್ತಾಳಂತೆ ಈ ನಟಿ| ಅಷ್ಟಕ್ಕೂ ಆಂಟಿ ಅಂದ್ರೆ ಡಿಕ್ಷನರಿ ಅರ್ಥವೇನು?

You may also like

Leave a Comment