Home » Viral News | ವರ್ಷದಲ್ಲಿ 2 ಬಾರಿ ಹೆರಿಗೆ ಮಾಡ್ಕೊಂಡ ಮಹಿಳೆ ; KGF ನಟ ಯಶ್- ರಾಧಿಕಾ ಪಂಡಿತ್ ಜೋಡಿ ಕೂಡಾ 10 ತಿಂಗಳಲ್ಲೇ 2 ಬಾರಿ ಮಗು ಮಾಡ್ಕೊಂಡಿದ್ರು ಗೊತ್ತಾ ?!

Viral News | ವರ್ಷದಲ್ಲಿ 2 ಬಾರಿ ಹೆರಿಗೆ ಮಾಡ್ಕೊಂಡ ಮಹಿಳೆ ; KGF ನಟ ಯಶ್- ರಾಧಿಕಾ ಪಂಡಿತ್ ಜೋಡಿ ಕೂಡಾ 10 ತಿಂಗಳಲ್ಲೇ 2 ಬಾರಿ ಮಗು ಮಾಡ್ಕೊಂಡಿದ್ರು ಗೊತ್ತಾ ?!

0 comments

11 ತಿಂಗಳ ಅವಧಿಯಲ್ಲಿ ಇಬ್ಬರು ಮಕ್ಕಳಿಗೆ ಜನ್ಮ ನೀಡಿದ ಮಹಿಳೆಯ ಕಥೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.ಹೆರಿಗೆಗೆ ಸಂಬಂಧಿಸಿದಂತೆ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯೊಂದು ವೈರಲ್ ಆಗುತ್ತಿದೆ. ಮಹಿಳೆಯೊಬ್ಬಳು ವರ್ಷದ  ಒಳಗೆ ಎರಡು ಸಲ ಗರ್ಭ ಧರಿಸಿ ಮಗುವನ್ನು ಹೆತ್ತ ಘಟನೆ ನಡೆದಿದೆ. ಕೇಳಲು ವಿಚಿತ್ರವಾದರೂ ಸಹ ನಿಜವಾಗಿ ನಡೆದಿರುವ ಸಂಗತಿಯಾಗಿದೆ. ವಾಸ್ತವವಾಗಿ ಈ ಸ್ಥಿತಿಯನ್ನು ಐರಿಶ್ ಪ್ರೆಗ್ನೆನ್ಸಿ ಎಂದು ಕರೆಯಲಾಗುತ್ತದೆ.

ವಿಶೇಷವೆಂದರೆ ಕನ್ನಡದ ಈ ತಾರ ಜೋಡಿ ಕೂಡಾ 11 ತಿಂಗಳ ಆಸುಪಾಸಿನಲ್ಲಿ ಎರಡು ಮಗು ಮಾಡಿಕೊಂಡಿತ್ತು. ಇಲ್ಲಿದೆ ನೋಡಿ ಫುಲ್ ಡೀಟೇಲ್ಸ್.

ಹೌದು, ಇದು ಕೇಳಲು ವಿಚಿತ್ರವೆನಿಸಿದರೂ ನಿಜವಾಗಿ ನಡೆದಿದೆ. ಲಾರೆನ್ ಅಹಿನ್ನವಾಯಿ ಎಂಬ ಮಹಿಳೆ ವಿಡಿಯೋ ಬಿಡುಗಡೆ ಮಾಡಿ ತನ್ನ ಸಂಪೂರ್ಣ ಕಥೆಯನ್ನು ಹೇಳಿದ್ದಾರೆ. 2020ರ ನವೆಂಬರ್ 27ರಂದು ಲಾರೆನ್ ಅಹಿನ್ನವಾಯಿ ಮಗುವಿಗೆ ಜನ್ಮ ನೀಡಿದ್ದಳು.

ಆದರೆ 2021ರ ಅಕ್ಟೋಬರ್ 26ರಂದು ಈಕೆ ಇನ್ನೊಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.

11 ತಿಂಗಳಲ್ಲಿ 2 ಮಕ್ಕಳಿಗೆ ಜನ್ಮ ನೀಡಿದ ಮಹಿಳೆ

ಟಿಕ್‌ಟಾಕ್‌ನಲ್ಲಿ ಹಂಚಿಕೊಂಡ ಈ ವಿಡಿಯೋದಲ್ಲಿ, ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ ಬಳಿಕ ಅದರ ಲಾಲನೆ-ಪಾಲನೆ ಮಾಡಲು ಸಿದ್ಧತೆ ನಡೆಸಿದ್ದರು. ಇದೇ ವೇಳೆ ಆಕೆ ತನ್ನ 2ನೇ ಗರ್ಭಧಾರಣೆ ಆಗಿಯೇ ಹೋಗಿದೆ. ಸಾಮಾನ್ಯವಾಗಿ ಮಗು ಹುಟ್ಟಿ ಅದಕ್ಕೆ ಹಾಲುಣಿಸುವ ಸಂದರ್ಭ ಸಂಭೋಗ ನಡೆಸಿದರೂ ಮಗು ಆಗೋದಿಲ್ಲ. ಆದರೆ ಇಲ್ಲಿ ಗರ್ಭ ಮೂಡಿತ್ತು. ಹಾಗೆ ಐರಿಶ್ ಅವಳಿಗಳು 12 ತಿಂಗಳು ಅಥವಾ ಅದಕ್ಕಿಂತ ಕಡಿಮೆ ಅವಧಿಯಲ್ಲಿ ತಮ್ಮ ತಾಯಿಯ ಗರ್ಭದಿಂದ ಹೊರಬರುತ್ತವಂತೆ. 11 ತಿಂಗಳಲ್ಲಿ 2 ಮಕ್ಕಳಿಗೆ ಜನ್ಮ ನೀಡಿದ ಬಗ್ಗೆ ಮಹಿಳೆ ಖುಷಿ ಹಂಚಿಕೊಂಡಿದ್ದು, ಇದು ದೇವರು ನೀಡಿದ ದೊಡ್ಡ ಕೊಡುಗೆ ಎಂದು ಹೇಳಿದ್ದಾಳೆ.

11 ತಿಂಗಳ ಅವಧಿಯಲ್ಲಿ ಇಬ್ಬರು ಮಕ್ಕಳಿಗೆ ಜನ್ಮ ನೀಡಿದ ಮಹಿಳೆಯ ಕಥೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಈ ಸ್ಟೋರಿ ಓದಿದ ಅನೇಕರು ಬೆಚ್ಚಿಬಿದ್ದಿದ್ದಾರೆ. ಈಕೆಯ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಅನೇಕರು ಮಹಿಳೆಗೆ ಅಭಿನಂದನೆ ಸಲ್ಲಿಸಿದ್ದಾರೆ. ಈ ಪೈಕಿ ಒಬ್ಬ ಬಳಕೆದಾರ ತಮಾಷೆಯಾಗಿ ಕಾಮೆಂಟ್ ಮಾಡಿದ್ದು, ‘ ವಾರೆ ರ್ವಾಹ್..! ನೀವು ಸಮಯವನ್ನು ಸುಮ್ಮನೆ ವ್ಯರ್ಥ ಮಾಡಲಿಲ್ಲ’ ವೆಂದು ಹೇಳಿದ್ದಾನೆ.

ಕನ್ನಡದ ತಾರಾ ಜೋಡಿ, KGF ಖ್ಯಾತಿಯ ಯಶ್ ಮತ್ತು ರಾಧಿಕಾ ಪಂಡಿತ್ ಕೂಡಾ ವರ್ಷದಲ್ಲಿ 2 ಬಾರಿ 2 ಮಕ್ಕಳನ್ನು ಬರಮಾಡಿಕೊಂಡಿದ್ದರು. ಮೊದಲ ಮಗಳು ಐರಾ ಹುಟ್ಟಿ ಸುಮಾರು ಹತ್ತೇ ತಿಂಗಳಿಗೆ ಬ್ಯಾಕ್ ಟು ಬ್ಯಾಕ್ ಹೆರಿಗೆ ಆಗಿದ್ದಳು ರಾಧಿಕಾ ಮ್ಯಾಡಮ್. ಡಿಸೆಂಬರ್ 2, 2018 ರಂದು ಐರಾ ಜನಿಸಿದ್ದರೆ, ಅಕ್ಟೋಬರ್ 2019 ರಂದು ಯಥರ್ವ ಜಗತ್ತು ಕಂಡಿದ್ದ. ಟೈಮ್ ವೇಸ್ಟ್ ಮಾಡದೆ ಕೆಲಸ ಮಾಡೋದನ್ನು ಇವರನ್ನು ನೋಡಿ ಕಲೀಬೇಕು !!

You may also like

Leave a Comment