Home » Kidney Sale: ನನ್ನ ಕಿಡ್ನಿ ಮಾರಾಟಕ್ಕಿದೆ, ಬಾಡಿಗೆ ಮನೆಗೆ ಡೆಪಾಸಿಟ್ ಇಡಲು ಹಣ ಬೇಕು! ಬೆಂಗಳೂರಿನಲ್ಲಿ ವಿಚಿತ್ರ ಪೋಸ್ಟರ್

Kidney Sale: ನನ್ನ ಕಿಡ್ನಿ ಮಾರಾಟಕ್ಕಿದೆ, ಬಾಡಿಗೆ ಮನೆಗೆ ಡೆಪಾಸಿಟ್ ಇಡಲು ಹಣ ಬೇಕು! ಬೆಂಗಳೂರಿನಲ್ಲಿ ವಿಚಿತ್ರ ಪೋಸ್ಟರ್

by ಹೊಸಕನ್ನಡ
0 comments
Kidney Sale

Kidney Sale: ಉದ್ಯಾನ ನಗರಿ ಬೆಂಗಳೂರಿನಲ್ಲಿ ಇಂದಿನ ದಿನಗಳಲ್ಲಿ ಒಂದು ಮನೆ ಹುಡುಕುವುದು ತಮಾಷೆಯ ವಿಷಯವಲ್ಲ. ಇಲ್ಲಿ ಸಿಂಗಲ್ ಬೆಡ್​ ರೂಂ ಮನೆ ಕೊಳ್ಳುತ್ತೇವಂದ್ರೆ ಕೈ ಸುಡುವಸ್ಟು ಕಾಸ್ಟ್ಲಿ. ಒಬ್ಬ ಸಾಮಾನ್ಯ ವ್ಯಕ್ತಿ ತನ್ನ ಜೀವಮಾನವಿಡೀ ದುಡಿದರೂ ಆ ಹಣ ತೀರಿಸಲಾಗಲ್ಲ ಬಿಡಿ. ಕೊಳ್ಳೋದು ಇರಲಿ, ಬಾಡಿಗೆ ಸಿಕ್ಕರೇ ಅದು ನಮ್ಮ ಅದೃಷ್ಟ. ಇಲ್ಲಿ ನಮಗೆ ಇಷ್ಟು ಆಗುವ ಮನೆ ಬೇಕು ಅಂದ್ರೆ ದುಪ್ಪಟ್ಟು ಹಣ ನೀಡಬೇಕು. ಅದರಲ್ಲೂ ಓನರ್​ಗಳ ಒಂದಷ್ಟು ರೂಲ್ಸ್​ಗೆ ಓಕೆ ಅನ್ನಬೇಕು. ಅಂತೆಯೇ ಸದ್ಯ ಬೆಂಗಳೂರಿನ ಇಂದಿರಾನಗರದಲ್ಲಿ ಈ ಬಾಡಿಗೆ ಮನೆ ವಿಚಾರವಾಗಿ ಒಂದು ಪೋಸ್ಟ್ ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

ಹೌದು, ಇಂದಿರಾನಗರದಲ್ಲಿ ಬಾಡಿಗೆ ಮನೆಗೆ ಸೆಕ್ಯೂರಿಟಿ ಡೆಪಾಸಿಟ್ ಇಡಲು ಹಣ ಬೇಕಿದೆ. ಹೀಗಾಗಿ ನನ್ನ ಎಡ ಕಿಡ್ನಿ ಮಾರಾಟ(Kidney Sale)ಕ್ಕಿದೆ ಎಂದು ಬರೆದು ಮರಕ್ಕೆ ನೇತಾಕಿರುವ ಈ ಪೋಸ್ಟ್, ಎಲ್ಲರೂ ಬೆರಗಾಗುವಂತೆ ಮಾಡಿದೆ. ಆದ್ರೆ ಗಮ್ಮತ್ತೆಂದರೆ, ಮುಂದೆ ಓದಿದ್ರೆ, ಇದು ತಮಾಷೆಗಾಗಿ, ಆದ್ರೆ ನನಗೆ ಇಂದಿರಾನಗರದಲ್ಲಿ ಮನೆ ಬೇಕಿದೆ. ನನ್ನ ಪ್ರೊಫೈಲ್​ಗಾಗಿ ಇಲ್ಲಿ ಸ್ಕ್ಯಾನ್ ಮಾಡಿ ಎಂದು ಕ್ಯೂಆರ್ ಕೋಡ್ ಕೂಡ ಅದರಲ್ಲಿ ಹಾಕಲಾಗಿದೆ. ಸದ್ಯ ಈ ಪೋಸ್ಟರ್​ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ಅನೇಕರು ಇದಕ್ಕೆ ಕಮೆಂಟಿಸುತ್ತಿದ್ದಾರೆ.

ಇದು ತಮಾಷೆಯ ಪೋಸ್ಟ್ ಆಗಿದ್ದರೂ ಬೆಂಗಳೂರಿನಲ್ಲಿ ಜನಸಾಮಾನ್ಯರ ಗೋಳಾಗಿದೆ. ರಮ್ಯಖ್ ಎಂಬ ಹೆಸರಿನ ಟ್ವಿಟರ್ ಬಳಕೆದಾರ ಈ ಪೋಸ್ಟರ್ ಅನ್ನು ಶೇರ್ ಮಾಡಿದ್ದಾರೆ. ಬೆಂಗಳೂರಿನಲ್ಲಿ ಮನೆಗಳ ಹೆಚ್ಚಿನ ಬಾಡಿಗೆ ಮತ್ತು ಠೇವಣಿಗಳ ಬಗ್ಗೆ ಜನರು ಪ್ರತಿಕ್ರಿಯಿಸುವುದರೊಂದಿಗೆ ತಮ್ಮ ಅನುಭವವನ್ನೂ ಹಂಚಿಕೊಳ್ಳುತ್ತಿದ್ದಾರೆ. ಈ ಪೋಸ್ಟರ್ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಬಾಡಿಗೆ ಮತ್ತು ಠೇವಣಿಗಳ ಕುರಿತು ಚರ್ಚೆಗೆ ವೇದಿಕೆಯಾಗಿದೆ.

ಅನಿತಾ ರಾಣೆ ಎಂಬ ಬಳಕೆದಾರರು ಕಮೆಂಟ್ ಮಾಡಿ ಬೆಂಗಳೂರು, ದೇಶ ಮತ್ತು ಪ್ರಪಂಚದ ಹಲವು ಭಾಗಗಳ ಜನರಿಗೆ ನೆಲೆಯಾಗಿದೆ. ಮಾರ್ಕೆಟಿಂಗ್ ತಂತ್ರಗಳನ್ನು ಆಶ್ರಯಿಸಬೇಕಾಗಿದೆ ಎಂದಿದ್ದಾರೆ. ಅಭಿತೋಷ್ ಎಂಬ ಬಳಕೆದಾರರು, ತಾವು ಮನೆ ಹುಡುಕುವಾಗ ಮಾಲೀಕರಿಗೆ ನಿನ್ನನ್ನು ಶ್ರೀಮಂತನನ್ನಾಗಿ ಮಾಡುವ ಆಸಕ್ತಿ ಹೊಂದಿಲ್ಲ ಎಂದು ಹೇಳಿದ್ದೆ ಎಂದು ಕಮೆಂಟ್ ಮಾಡಿದ್ದಾರೆ.

You may also like

Leave a Comment